ಬೆಂಗಳೂರು: 2024ರ ಪ್ಯಾರಾಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿರುವ ಪದಕ ವಿಜೇತರನ್ನು ಗೌರವಿಸುವ ಸಲುವಾಗಿ ಭಾರತೀಯ ಅಂಚೆ ಇಲಾಖೆಯು 'ಪೋಸ್ಟ್‌ಕ್ರಾಸಿಂಗ್ ಸೊಸೈಟಿ ಆಫ್ ಇಂಡಿಯಾ' ಸಹಯೋಗದಲ್ಲಿ 28 ಪೋಸ್ಟ್‌ಕಾರ್ಡ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
ಜನರಲ್ ಪೋಸ್ಟ್ ಆಫೀಸ್ (ಜಿಪಿಒ) ಬುಧವಾರ ಈ ಕಾರ್ಯಕ್ರಮ ನಡೆಯಲಿದೆ.
ಪ್ಯಾರಿಸ್‌ನಲ್ಲಿ ನಡೆದ ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ, 7 ಚಿನ್ನದ ಪದಕಗಳೂ ಸೇರಿದಂತೆ ಒಟ್ಟು 29 ಪದಕಗಳನ್ನು ಜಯಿಸಿದೆ. ಟೋಕಿಯೊದಲ್ಲಿ ನಡೆದ 2020ರ ಕ್ರೀಡಾಕೂಟದಲ್ಲಿ 19 ಪದಕ ಗೆದ್ದದ್ದು ಇದುವರೆಗೆ ಸಾಧನೆಯಾಗಿತ್ತು.
ಈ ವರ್ಷದ ಸಾಧನೆಯ ಸ್ಮರಣಾರ್ಥ, ಅಥ್ಲೀಟ್‌ಗಳಿಗೆ ಮೀಸಲಾದ ಚಿತ್ರಗಳನ್ನೊಳಗೊಂಡ ಪೋಸ್ಟ್‌ಕಾರ್ಡ್‌ಗಳ ಸಂಗ್ರಾಹಕ ಆವೃತ್ತಿಯನ್ನು ಜಿಪಿಒ ಪ್ರಕಟಿಸಲಿದೆ.