ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಲಿಂಪಿಕ್ಸ್ ಕೋಟಾ ಗಳಿಸಿದ ಆರ್ಚರಿ ತಂಡ

ದೀಪಿಕಾ ಕುಮಾರಿ, ತರುಣ್‌ದೀಪ್‌ಗೆ ನಾಲ್ಕನೇ ಒಲಿಂಪಿಕ್ಸ್‌
Published 24 ಜೂನ್ 2024, 16:07 IST
Last Updated 24 ಜೂನ್ 2024, 16:07 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಪುರುಷರ ಮತ್ತು ಮಹಿಳೆಯರ ಆರ್ಚರಿ ತಂಡವು ವಿಶ್ವ ರ್‍ಯಾಂಕಿಂಗ್ ಆಧಾರದ ಮೇಲೆ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ಕೋಟಾ ಗಳಿಸಿದೆ.  

12 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತವು ಪೂರ್ಣ ಆರು ಆಟಗಾರರ ಆರ್ಚರಿ ತಂಡವನ್ನು ಒಲಿಂಪಿಕ್ಸ್‌ಗೆ ಕಳುಹಿಸಲಿದ್ದು, ಪ್ಯಾರಿಸ್ ಕ್ರೀಡಾಕೂಟದ ಎಲ್ಲಾ ಐದು ವಿಭಾಗಗಳಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದಿದೆ.

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ ಕೊನೆಯ ಬಾರಿಗೆ ಆರು ಮಂದಿಯ ತಂಡವನ್ನು ಕಣಕ್ಕಿಳಿಸಿತ್ತು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಿಶ್ರ ತಂಡ ಸ್ಪರ್ಧೆಯನ್ನು ಪರಿಚಯಿಸಲಾಯಿತು. ಒಲಿಂಪಿಕ್ಸ್‌ನಲ್ಲಿ ಭಾರತವು ಆರ್ಚರಿಯಲ್ಲಿ ಇದುವರೆಗೂ ಪದಕ ಗೆದ್ದಿಲ್ಲ. 

ಪುರುಷರ ವಿಭಾಗದಲ್ಲಿ ಭಾರತ ಮತ್ತು ಚೀನಾ ಸ್ಥಾನ ಪಡೆದರೆ, ಮಹಿಳಾ ವಿಭಾಗದಲ್ಲಿ ಇಂಡೊನೇಷ್ಯಾ ತಂಡ ಒಲಿಂಪಿಕ್ ಕೋಟಾವನ್ನು ಪಡೆದ ಎರಡನೇ ರಾಷ್ಟ್ರವಾಗಿದೆ.

ತಂಡ ಸ್ಪರ್ಧೆಗಳಲ್ಲಿ ಪ್ರತಿ ವಿಭಾಗದಲ್ಲಿ 12 ತಂಡಗಳು ಇರಲಿದ್ದು, ಮಿಶ್ರ ಸ್ಪರ್ಧೆಗಳಲ್ಲಿ ಐದು ತಂಡಗಳು ಸ್ಪರ್ಧಿಸಲಿವೆ.

ಮೂರು ಹಂತದ ಒಲಿಂಪಿಕ್ ಅರ್ಹತಾ ಪಂದ್ಯಗಳ ನಂತರ ಮೊದಲ ಬಾರಿಗೆ ಅಗ್ರ ಎರಡು ರಾಷ್ಟ್ರಗಳಿಗೆ ತಂಡದ ಕೋಟಾವನ್ನು ನೀಡಲಾಗುತ್ತದೆ.

ಕಳೆದ ವರ್ಷ ಬರ್ಲಿನ್‌ನಲ್ಲಿ ನಡೆದ ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಒಲಿಂಪಿಕ್ ಅರ್ಹತಾ ಪಂದ್ಯ ನಡೆಯಿತು. ಅಲ್ಲಿಂದ ದಕ್ಷಿಣ ಕೊರಿಯಾ, ಟರ್ಕಿ ಮತ್ತು ಜಪಾನ್ ಪುರುಷರ ವಿಭಾಗದಲ್ಲಿ ಅರ್ಹತೆ ಪಡೆದವು. ಮಹಿಳಾ ವಿಭಾಗದಲ್ಲಿ ಜರ್ಮನಿ ಮತ್ತು ಮೆಕ್ಸಿಕೊ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡಿವೆ.

ಅಂತಿಮ ಒಲಿಂಪಿಕ್ ಅರ್ಹತಾ ಪಂದ್ಯ ಕಳೆದ ವಾರ ಟರ್ಕಿಯ ಅಂತಾಲ್ಯದಲ್ಲಿ ನಡೆಯಿತು.

ಅನುಭವಿಗಳಾದ ತರುಣ್‌ದೀಪ್ ರಾಯ್ ಮತ್ತು ದೀಪಿಕಾ ಕುಮಾರಿಗೆ ಅವರಿಗೆ ಇದು ನಾಲ್ಕನೇ ಒಲಿಂಪಿಕ್ಸ್.  ಧೀರಜ್ ಬೊಮ್ಮದೇವರ, ಅಂಕಿತಾ ಭಕತ್ ಮತ್ತು ಭಜನ್ ಕೌರ್‌ಗೆ ಚೊಚ್ಚಲ ಒಲಿಂಪಿಕ್ಸ್‌, ಪ್ರವೀಣ್ ಜಾಧವ್‌ಗೆ ಸತತ ಎರಡನೇ ಕ್ರೀಡಾಕೂಟವಾಗಿದೆ.

ದೀಪಿಕಾ ಕುಮಾರಿ
ದೀಪಿಕಾ ಕುಮಾರಿ
ತರುಣ್‌ದೀಪ್ ರಾಯ್ –ಟ್ವಿಟರ್ ಚಿತ್ರ
ತರುಣ್‌ದೀಪ್ ರಾಯ್ –ಟ್ವಿಟರ್ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT