ಡಸೆಲ್ಡಾರ್ಪ್ (ಜರ್ಮನಿ): ಭಾರತ ಜೂನಿಯರ್ ಮಹಿಳಾ ತಂಡ, ನಾಲ್ಕು ರಾಷ್ಟ್ರಗಳ ಹಾಕಿ ಟೂರ್ನಿಯಲ್ಲಿ ಬುಧವಾರ 6–2 ಗೋಲುಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿದರು.

ಭಾರತ ತಂಡದ ಪರ ನೀಲಮ್ (25ನೇ ನಿಮಿಷ), ಅನ್ನು (26 ಮತ್ತು 43ನೇ ನಿಮಿಷ) ಸುನೆಲಿಟಾ ಟೊಪ್ಪೊ (35ನೇ ನಿಮಿಷ), ಹೀನಾ ಬಾನೊ (38ನೇ ನಿಮಿಷ) ಮತ್ತು ಮುಮ್ತಾಜ್ ಖಾನ್ (40ನೇ ನಿಮಿಷ) ಗೋಲುಗಳನ್ನು ಹೊಡೆದರು. ಇಂಗ್ಲೆಂಡ್ ತಂಡದ ಎರಡು ಗೋಲುಗಳು ಕ್ಲಾಡಿಯಾ ಸ್ವೇನ್ (16ನೇ ನಿಮಿಷ) ಮತ್ತು ಚಾರ್ಲೊಟೆ ಬಿಂಘಮ್ (54ನೇ ನಿಮಿಷ) ಮೂಲಕ ಬಂದವು.

ಬಿರುಸಿನ ಆರಂಭ ಪಡೆದ ಮೊದಲ ಕ್ವಾರ್ಟರ್ನಲ್ಲಿ ಬಿರುಸಿನ ಆರಂಭ ಮಾಡಿದವು. ಆದರೆ ಭಾರತವೇ ಹೆಚ್ಚು ದಾಳಿಗಳನ್ನು ನಡೆಸಿತು. ಆದರೆ ಈ ಅವಧಿ ಗೋಲಿಲ್ಲದೇ ಕಳೆಯಿತು. ಎರಡನೇ ಕ್ವಾರ್ಟರ್ನಲ್ಲಿ ಭಾರತ ಮೇಲುಗೈ ಪಡೆಯಿತು. ಆದರೆ ಮುನ್ನಡೆ ಗಳಿಸಿದ್ದು ಇಂಗ್ಲೆಂಡ್ ತಂಡವೇ. ಕ್ಲಾಡಿಯಾ ಸ್ವೇನ್ ಮೂಲಕ ಮುನ್ನಡೆಯಿತು. ಆದರೆ ಕೆಲವೇ ಹೊತ್ತಿನಲ್ಲಿ ನೀಲಂ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ಸ್ಕೋರ್ ಸಮಮಾಡಿದರು. ಅನ್ನು ಅಮೋಘ ಫೀಲ್ಡ್ ಗೋಲಿನ ಮೂಲಕ ಮುನ್ನಡೆ ಒದಗಿಸಿದರು. ವಿರಾಮದ ವೇಳೆ ಸ್ಕೋರ್ 2–1 ಆಗಿತ್ತು. ಉತ್ತರಾರ್ಧದಲ್ಲಿ ಭಾರತ ಮೇಲುಗೈ ಸಾಧಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.