ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಚರಿ‌ : ಫೈನಲ್‌ಗೆ ಭಾರತದ ಸ್ಪರ್ಧಿಗಳು

Published 22 ಫೆಬ್ರುವರಿ 2024, 20:48 IST
Last Updated 22 ಫೆಬ್ರುವರಿ 2024, 20:48 IST
ಅಕ್ಷರ ಗಾತ್ರ

ಬಾಗ್ದಾದ್:  ಇಪ್ಪತ್ತು ತಿಂಗಳ ಬಳಿಕ ಪುನರಾಗಮನ ಮಾಡಿರುವ ಮಾಜಿ ವಿಶ್ವ ನಂ.1 ದೀಪಿಕಾ ಕುಮಾರಿ ಸೇರಿದಂತೆ ಭಾರತದ ಆರ್ಚರಿ ಸ್ಪರ್ಧಿಗಳು ಗುರುವಾರ ಇಲ್ಲಿ ನಡೆದ ಏಷ್ಯಾ ಕಪ್ ಲೆಗ್ 1 ನಲ್ಲಿ ಆರು ತಂಡ ಸ್ಪರ್ಧೆಗಳ ಫೈನಲ್‌ಗೆ ಪ್ರವೇಶಿಸಿದ್ದು, ಪದಕ ಖಚಿತಪಡಿಸಿಕೊಂಡಿದ್ದಾರೆ. 

ಮೂರು ಬಾರಿ ಒಲಿಂಪಿಯನ್, ಮಹಿಳಾ ರಿಕರ್ವ್ ತಂಡ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಸಿಮ್ರನ್ಜೀತ್ ಕೌರ್ ನಂತರ ಎರಡನೇ ಸ್ಥಾನ ಪಡೆದರು.

ಎಲಿಮಿನೇಷನ್ ಸುತ್ತಿನಲ್ಲಿ ಭಜನ್ ಕೌರ್ ಅವರನ್ನು ಒಳಗೊಂಡ ಭಾರತ ಮಹಿಳಾ ರಿಕರ್ವ್ ತಂಡವು ಆತಿಥೇಯ ಇರಾಕ್ ಅನ್ನು ಪರಭಾವಗೊಳಿಸಿದೆ. ಉಜ್ಬೇಕಿಸ್ತಾನ ವಿರುದ್ಧ ಚಿನ್ನದ ಪದಕಕ್ಕಾಗಿ ಸೆಣಸಲಿದೆ.

ಪುರುಷರ ರಿಕರ್ವ್ ತಂಡದಲ್ಲಿ ಧೀರಜ್ ಬೊಮ್ಮದೇವರ, ಪ್ರವೀಣ್ ಜಾಧವ್ ಮತ್ತು ತರುಣ್ ದೀಪ್ ರಾಯ್ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.

ರಿಕರ್ವ್ ಮಿಶ್ರ ತಂಡ ವಿಭಾಗದಲ್ಲಿ ಭಾರತವು ಸಿರಿಯಾ ಮತ್ತು ಕತಾರ್ ತಂಡವನ್ನು ನೇರ ಸೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿತು. ಅಲ್ಲಿ ಧೀರಜ್ ಮತ್ತು ಸಿಮ್ರನ್ ಜೀತ್ ಜೋಡಿ ಬಾಂಗ್ಲಾದೇಶವನ್ನು ಎದುರಿಸಲಿದೆ.

ಪುರುಷರ ಕಾಂಪೌಂಡ್ ತಂಡ ಫೈನಲ್‌ನಲ್ಲಿ ಭಾರತದ ಪ್ರಥಮೇಶ್ ಜವ್ಕರ್, ಪ್ರಿಯಾಂಶ್ ಮತ್ತು ಕುಶಾಲ್ ದಲಾಲ್ ಆತಿಥೇಯ ಇರಾಕ್ ತಂಡವನ್ನು 233-223 ಅಂತರದಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದರು.

ಅದಿತಿ ಸ್ವಾಮಿ, ಪ್ರಿಯಾ ಗುರ್ಜರ್ ಮತ್ತು ಪರ್ನೀತ್ ಕೌರ್ ಅವರನ್ನೊಳಗೊಂಡ ಭಾರತ ತಂಡ ಅಫ್ಗಾನಿಸ್ತಾನವನ್ನು 234-210 ಅಂಕಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು.

ಕಾಂಪೌಂಡ್‌ ಮಿಶ್ರ ವಿಭಾಗದಲ್ಲಿ ಜಾವ್ಕರ್ ಮತ್ತು ಅದಿತಿ ಜೋಡಿ ಕೊನೆಯ ನಾಲ್ಕು ಹಂತದಲ್ಲಿ ಬಾಂಗ್ಲಾದೇಶವನ್ನು 157-146 ಅಂಕಗಳಿಂದ ಸೋಲಿಸಿತು. ಫೈನಲ್‌ನಲ್ಲಿ ಇರಾನ್ ವಿರುದ್ಧ ಸೆಣಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT