ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸ್ಕಸ್‌ ಥ್ರೋ ಸ್ಪರ್ಧೆ: ಯೊಗೇಶ್‌ ವಿಶ್ವದಾಖಲೆ

Last Updated 2 ಜುಲೈ 2018, 20:19 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಯೊಗೇಶ್‌ ಕಥುನಿಯಾ ಅವರು ಬರ್ಲಿನ್‌ನಲ್ಲಿ ನಡೆಯುತ್ತಿರುವ ಪ್ಯಾರಾಗ್ರ್ಯಾನ್‌ ಪ್ರಿ ಅಥ್ಲೆಟಿಕ್ಸ್‌ನ ಡಿಸ್ಕಸ್‌ ಥ್ರೋನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಸೋಮವಾರ ನಡೆದ ಸ್ಪರ್ಧೆಯಲ್ಲಿ ಯೊಗೇಶ್‌ ಅವರು 45.18 ಮೀಟರ್ಸ್‌ ದೂರ ಡಿಸ್ಕಸ್‌ ಎಸೆದು ಚಿನ್ನದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಈ ಹಿಂದೆ 42.96 ಮೀಟರ್ಸ್‌ ದೂರ ಡಿಸ್ಕಸ್‌ ಎಸೆದಿದ್ದ ಚೀನಾದ ಕ್ವಿಕಿಂಗ್‌ ಲೀ ಅವರ ಹೆಸರಲ್ಲಿದ್ದ ವಿಶ್ವದಾಖಲೆಯನ್ನು ಮುರಿದಿದ್ದಾರೆ.

ಯೊಗೇಶ್‌ ತಮ್ಮ ಮೂರನೇ ಪ್ರಯತ್ನದಲ್ಲಿ ಈ ದಾಖಲೆ ನಿರ್ಮಿಸಿದರು. ಪೋಲೆಂಡ್‌ನ ಪಾವೆಲ್‌ ಪಿಯೊಟ್ರೊವಸ್ಕಿ ಹಾಗೂ ಅಲೆಕ್ಸಾಂಡರ್‌ ಎಲ್‌ವೌ ಅವರು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT