ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶೂಟಿಂಗ್: ಅರ್ಹತಾ ಸುತ್ತಲ್ಲೇ ಹೊರಬಿದ್ದ ನಿಹಾಲ್, ಅಮೀರ್

Published 2 ಸೆಪ್ಟೆಂಬರ್ 2024, 14:53 IST
Last Updated 2 ಸೆಪ್ಟೆಂಬರ್ 2024, 14:53 IST
ಅಕ್ಷರ ಗಾತ್ರ

ಶಾತೋಹು: ಭಾರತದ ನಿಹಾಲ್ ಸಿಂಗ್ ಮತ್ತು ಅಮೀರ್ ಅಹ್ಮದ್ ಭಟ್ ಸೋಮವಾರ ಪ್ಯಾರಾಲಿಂಪಿಕ್ಸ್‌ ಶೂಟಿಂಗ್‌ ಮಿಶ್ರ 25ಮೀ. ಪಿಸ್ತೂಲ್ (ಎಸ್‌ಎಚ್ 1) ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ 10 ಮತ್ತು 11ನೇ ಸ್ಥಾನಗಳೊಂದಿಗೆ ಅಭಿಯಾನ ಮುಗಿಸಿದರು.

ಅರ್ಹತಾ ಸುತ್ತಿನ ಮೊದಲ ಸೆಷನ್‌ನಲ್ಲಿ ಇಬ್ಬರು ಭಾರತೀಯರು ಸ್ಥಿರ ಪ್ರದರ್ಶನ ತೋರಿದರು. ನಿಹಾಲ್ ಪ್ರಿಸಿಷನ್‌ ಸ್ಟೇಜ್‌ನ ಕೊನೆಯಲ್ಲಿ 287 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರು. ಅಮೀರ್ 286 ಅಂಕಗಳೊಂದಿಗೆ ಎಂಟನೇ ಮತ್ತು ಅಂತಿಮ ಅರ್ಹತಾ ಸ್ಥಾನದಲ್ಲಿದ್ದರು.

ಆದಾಗ್ಯೂ ರ್‍ಯಾಪಿಡ್‌ ಸ್ಟೇಜ್‌ನಲ್ಲಿ 282 ಅಂಕ ಗಳಿಸುವಲ್ಲಿ ಸಮರ್ಥರಾದ ನಿಹಾಲ್ ಮತ್ತು ಅಮೀರ್ ಕ್ರಮವಾಗಿ 569 ಮತ್ತು 568 ಒಟ್ಟು ಗಳಿಸಿದರು. ರ್‍ಯಾಪಿಡ್‌ ಸ್ಟೇಜ್‌ನಲ್ಲಿ ಅವರು ಗಳಿಸಿದ ಅಂಕಗಳು ಅರ್ಹತಾ ಸುತ್ತು ದಾಟಲು ಸಾಕಾಗಲಿಲ್ಲ.

ಅರ್ಹತಾ ಸುತ್ತಿನಲ್ಲಿ ಅಗ್ರ ಎಂಟು ಸ್ಥಾನ ಪಡೆದ ಶೂಟರ್‌ಗಳು ಫೈನಲ್‌ಗೆ ಮುನ್ನಡೆಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT