ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ: ಪೋಲೆಂಡ್ ಪ್ರಶಸ್ತಿ ಗೆದ್ದ ಅನ್ಮೋಲ್

Published : 22 ಸೆಪ್ಟೆಂಬರ್ 2024, 16:22 IST
Last Updated : 22 ಸೆಪ್ಟೆಂಬರ್ 2024, 16:22 IST
ಫಾಲೋ ಮಾಡಿ
Comments

ನವದೆಹಲಿ: ಭಾರತದ ಉದಯೋನ್ಮುಖ ಆಟಗಾರ್ತಿ ಅನ್ಮೋಲ್ ಖರ್ಬ್ ಅವರು ಎರಡನೇ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಜಯಿಸಿದರು. 

ಭಾನುವಾರ ಲುಬ್ಲಿನ್‌ನಲ್ಲಿ ನಡೆದ ಪೋಲೆಂಡ್ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. 17 ವರ್ಷದ ಅನ್ಮೋಲ್ ಅವರು ಈಚೆಗಷ್ಟೇ ಬೆಲ್ಜಿಯನ್ ಅಂತರರಾಷ್ಟ್ರೀಯ ಪ್ರಶಸ್ತಿ ಗೆದ್ದಿದ್ದರು. 

ಫೈನಲ್ ಪಂದ್ಯದಲ್ಲಿ ಅನ್ಮೋಲ್ 21–12, 21–8ರಿಂದ ಸ್ವಿಟ್ಜರ್‌ಲೆಂಡ್‌ನ ಮಿಲೆನಾ ಶಿನಿದರ್ ವಿರುದ್ಧ ಗೆದ್ದರು. ₹4.20 ಲಕ್ಷ ಜಯಿಸಿದರು.  ಫರೀದಾಬಾದ್‌ನ  ಅನ್ಮೋಲ್ ಅವರು 33 ನಿಮಿಷಗಳ ಫೈನಲ್‌ನಲ್ಲಿ ಜಯಭೇರಿ ಬಾರಿಸಿದರು. ಎದುರಾಳಿಗೆ ಯಾವುದೇ ಹಂತದಲ್ಲಿಯೂ ಗೆಲುವಿನ ಅವಕಾಶ ನೀಡಲಿಲ್ಲ. ಎರಡೂ ಗೇಮ್‌ಗಳಲ್ಲಿ ಪಾರಮ್ಯ ಮೆರೆದರು. 

ಸತತ ಎರಡು ಪ್ರಶಸ್ತಿ ಜಯಿಸಿದ ಅನ್ಮೋಲ್ ಅವರ ರ‍್ಯಾಂಕಿಂಗ್ ನಲ್ಲಿ ಕೂಡ  ಏರಿಕೆಯಾಗಿದೆ. 55 ಸ್ಥಾನಗಳಷ್ಟು ಬಡ್ತಿ ಪಡೆದಿದ್ದಾರೆ. ಸದ್ಯ ಅವರು 165ನೇ ಸ್ಥಾನದಲ್ಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT