ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Paralympics: ಪ್ಯಾರಾ ಅಥ್ಲೀಟ್ಸ್‌ಗೆ ಹೃದಯಸ್ಪರ್ಶಿ ಸ್ವಾಗತ

ಹೂವಿನ ಹಾರ ಹಾಕಿ ಅಭಿನಂದಿಸಿದ ಅಭಿಮಾನಿಗಳು, ಕುಟುಂಬದ ಸದಸ್ಯರು
Last Updated 6 ಸೆಪ್ಟೆಂಬರ್ 2021, 20:52 IST
ಅಕ್ಷರ ಗಾತ್ರ

ನವದೆಹಲಿ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಾರಿತ್ರಿಕ ಸಾಧನೆ ಮಾಡಿದ ಭಾರತ ಪ್ಯಾರಾ ಅಥ್ಲೀಟ್ಸ್‌ ಸೋಮವಾರ ತವರಿಗೆ ವಾಪಸಾದರು. ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಅವರಿಗೆ ಹೃತ್ಪೂರ್ವಕ ಸ್ವಾಗತ ಕೋರಲಾಯಿತು.

ಭಾರತದ ಕೊನೆಯ ತಂಡದಲ್ಲಿ ಬ್ಯಾಡ್ಮಿಂಟನ್ ಆಟಗಾರರು, ಶೂಟರ್‌ ಗಳು ಮತ್ತು ರಿಕರ್ವ್ ಆರ್ಚರಿ ತಂಡದವರು ಇದ್ದರು. ಅವರು ಬರುವ ವಿವರ ತಿಳಿದ ಅಭಿಮಾನಿಗಳು ಮತ್ತು ಸಂಬಂಧಿಕರು ಹೂವಿನ ಹಾರ ಹಾಕಿ ಅಭಿನಂದಿಸಿದರು. ವಿಮಾನ ನಿಲ್ದಾಣದ ಸಿಬ್ಬಂದಿ ಕೂಡ ಅವರೊಂದಿಗೆ ಸಂಭ್ರಮಿಸಿದರು. ನಂತರ ತೆರೆದ ನಂತರ ತೆರೆದ ವಾಹನದಲ್ಲಿ ಕರೆದುಕೊಂಡು ಹೋಗಲಾಯಿತು.

ಭಾರತ ಈ ಬಾರಿ ಗರಿಷ್ಠ ಸಾಧನೆ ಮಾಡಿದೆ. ಐದು ಚಿನ್ನ ಸೇರಿದಂತೆ ಒಟ್ಟು 19 ಪದಕಗಳನ್ನು ಗೆದ್ದುಕೊಂಡಿರುವ ಭಾರತ ಪದಕ ಪಟ್ಟಿಯಲ್ಲಿ 24ನೇ ಸ್ಥಾನ ಗಳಿಸಿದೆ. ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಪದಕ ಗೆದ್ದ ಐಎಎಸ್ ಅಧಿಕಾರಿ, ಕನ್ನಡಿಗ ಸುಹಾಸ್ ಯತಿರಾಜ್‌, ಶೂಟಿಂ ಗ್‌ನಲ್ಲಿ ಚಿನ್ನ ಮತ್ತು ಕಂಚು ಗಳಿಸಿದ 19 ವರ್ಷದ ಅವನಿ ಲೇಖರಾ, ಚಿನ್ನ ಗೆದ್ದ ಬ್ಯಾಡ್ಮಿಂಟನ್ ಪಟುಗಳಾದ ಪ್ರಮೋದ್ ಭಗತ್‌ ಮತ್ತು ಕೃಷ್ಣ ನಗಾರ್, ಕಂಚು ಗಳಿಸಿದ ಮನೋಜ್ ಸರ್ಕಾರ್, ಶೂಟರ್‌ಗಳಾದ ಸಿಂಘರಾಜ್ ಅಡಾನ ಮತ್ತು ಮನೀಷ್ ನರ್ವಾಲ್‌ ಸಂಜೆ ಬಂದಿಳಿದರು. ಟೇಬಲ್‌ ಟೆನಿಸ್‌ನಲ್ಲಿ ಬೆಳ್ಳಿ ಗೆದ್ದ ಭಾವಿನಾ ಪಟೇಲ್ ಬೆಳಿಗ್ಗೆ ಬಂದಿಳಿದರು. ಗುರುವಾರ ಎಲ್ಲ ಅಥ್ಲೀಟ್‌ಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ.

ಭಾವಿನಾಗೆ ನೆರವಾದ ‘ರೋಬೋಟ್’

ಕೋವಿಡ್‌ನಿಂದಾಗಿ ಅಭ್ಯಾಸಕ್ಕೆ ಅಡ್ಡಿಯಾದಾಗ ಭಾವಿನಾ ಬೆನ್‌ ಪಟೇಲ್ ಅವರ ಕೈ ಹಿಡಿದದ್ದು ರೋಬೋಟ್‌. ಪ್ಯಾರಾಲಿಂಪಿಕ್ಸ್‌ನ ಟೇಬಲ್ ಟೆನಿಸ್‌ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದಿರುವ ಭಾವಿನಾ ಬೆನ್‌ ಅವರಿಗೆ ಭಾರತ ಕ್ರೀಡಾ ಪ್ರಾಧಿಕಾರ ಅಭ್ಯಾಸಕ್ಕಾಗಿ ರೋಬೋಟ್ ನೆರವು ಒದಗಿಸಿತ್ತು. ಇದು ತಮ್ಮ ಭವಿಷ್ಯವನ್ನೇ ಬದಲಿಸಿತು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT