ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೊಲಿನಾಗೆ ನೋವು ಸೈನಾಗೆ ಚಿನ್ನದ ಪದಕ

ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್: ಮೊದಲ ಗೇಮ್‌ನಲ್ಲಿ ಮುನ್ನಡೆ ಗಳಿಸಿದ್ದ ಸ್ಪೇನ್ ಆಟಗಾರ್ತಿ
Last Updated 27 ಜನವರಿ 2019, 17:25 IST
ಅಕ್ಷರ ಗಾತ್ರ

ಜಕಾರ್ತ: ಮೂರು ಬಾರಿಯ ವಿಶ್ವ ಚಾಂಪಿಯನ್ ಕರೊಲಿನಾ ಮರಿನ್ ಕಾಲುನೋವಿಗೆ ಒಳಗಾಗಿ ಕಣ ತೊರೆದರು; ಭಾರತದ ಆಟಗಾರ್ತಿ ಸೈನಾ ನೆಹ್ವಾಲ್‌ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು.

ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಫೈನಲ್‌ ಪಂದ್ಯದ ಮೊದಲ ಗೇಮ್‌ನಲ್ಲಿ 10–4ರ ಮುನ್ನಡೆ ಸಾಧಿಸಿದ್ದ ಸಂದರ್ಭದಲ್ಲಿ ಕರೊಲಿನಾಗೆ ನೋವು ಕಾಡಿತು. ಹೀಗಾಗಿ ಕಣ ತೊರೆಯಲು ನಿರ್ಧರಿಸಿದರು.

ಈ ಗೆಲುವಿನ ಮೂಲಕ ಸೈನಾ, ಎರಡು ವರ್ಷಗಳ ನಂತರ ಮೊದಲ ಬಾರಿ ಬಿಡಬ್ಲ್ಯುಎಫ್‌ ಟೂರ್ನಿಯ ಚಿನ್ನ ಗೆದ್ದ ಸಾಧನೆ ಮಾಡಿದರು. 2017ರಲ್ಲಿ ಮಲೇಷ್ಯಾದಲ್ಲಿ ಅವರು ಕೊನೆಯದಾಗಿ ಮೊದಲಿಗರಾಗಿದ್ದರು.

ಟೂರ್ನಿಯಲ್ಲಿ ಉತ್ತಮ ಆಟವಾಡಿದ್ದಮರಿನ್ ಚಿನ್ನ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದರು. ಈ ಹಿಂದೆ 11 ಬಾರಿ ಮುಖಾಮುಖಿಯಾಗಿದ್ದಾಗ ಮರಿನ್ ಆರು ಬಾರಿ ಸೈನಾ ಅವರನ್ನು ಮಣಿಸಿದ್ದರು. ಕಳೆದ ಬಾರಿ ಕ್ವಾಲಾಲಂಪುರದಲ್ಲಿ ನಡೆದಿದ್ದ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯ ಸೆಮಿಫೈನಲ್‌ನಲ್ಲೂ ಸೈನಾ ವಿರುದ್ಧ ಗೆದ್ದಿದ್ದರು.

ಭಾನುವಾರದ ಪಂದ್ಯದ ಆರಂಭದಲ್ಲಿ ಆಕ್ರಮಣಕಾರಿ ಆಟವಾಡಿದ ಮರಿನ್‌ ಸತತ ಎರಡು ಪಾಯಿಂಟ್‌ಗಳನ್ನು ಬಗಲಿಗೆ ಹಾಕಿಕೊಂಡರು. ನೆಟ್‌ ಬಳಿ ಡ್ರಾಪ್ ಮಾಡಿದ ಸೈನಾ ಮೊದಲ ಪಾಯಿಂಟ್ ಕಲೆ ಹಾಕಿದರು. ನಂತರ ಬ್ಯಾಕ್‌ಲೈನ್‌ನಲ್ಲಿ ಪಾಯಿಂಟ್‌ಗಳನ್ನು ಕಳೆದುಕೊಂಡ ಸೈನಾ 2–6ರ ಹಿನ್ನಡೆ ಅನುಭವಿಸಿದರು.

9–2ರ ಮುನ್ನಡೆ ಸಾಧಿಸಿದ್ದ ಸಂದರ್ಭದಲ್ಲಿ ಷಟಲ್ ಹಿಂದಿರುಗಿಸಲು ಪ್ರಯತ್ನಿಸಿದ ಮರಿನ್ ಬಲಗಾಲು ಉಳುಕಿ ನೋವು ಅನುಭವಿಸಿದರು. ಪ್ರಥಮ ಚಿಕಿತ್ಸೆಯ ನಂತರ ಕಣಕ್ಕೆ ಮರಳಿದ ಅವರು ಒಂದು ಪಾಯಿಂಟ್ ಗಳಿಸಿದರು. ನಂತರ ಕುಸಿದು ಬಿದ್ದರು. ಕಣ್ಣೀರು ಹಾಕುತ್ತ ಹೊರನಡೆದರು.

‘ಕಳೆದ ಎರಡು ಟೂರ್ನಿಗಳು ನನ್ನ ಪಾಲಿಗೆ ಮಹತ್ವದ್ದಾಗಿದ್ದವು. ಎರಡರಲ್ಲೂಉತ್ತಮ ಸಾಮರ್ಥ್ಯ ತೋರಲು ಸಾಧ್ಯವಾಗಿದೆ. ಆಲ್ ಇಂಗ್ಲೆಂಡ್ ಟೂರ್ನಿಗಾಗಿ ಈಗ ತಯಾರಿ ನಡೆಸುತ್ತಿದ್ದೇನೆ’ ಎಂದು ಸೈನಾ ಹೇಳಿದರು.

*
ಕಳೆದ ಬಾರಿ ಗಾಯದ ಸಮಸ್ಯೆ ನನ್ನನ್ನು ತುಂಬ ಕಾಡಿತ್ತು. ಈ ಬಾರಿ ಉತ್ತಮ ಆರಂಭ ಕಂಡಿದ್ದೇನೆ. ಆದರೆ ಅಂಗಣದಲ್ಲಿ ಆಟಗಾರರು ಗಾಯಗೊಂಡಾಗ ಬೇಸರವಾಗುತ್ತದೆ.
-ಸೈನಾ ನೆಹ್ವಾಲ್‌, ಭಾರತದ ಆಟಗಾರ್ತಿ

ಗಾಯಗೊಂಡಿದ್ದ ಕ್ಯಾರೋಲಿನ್ ಮರಿನ್‌ ಅವರನ್ನು ಸೈನಾ ನೆಹ್ವಾಲ್‌ ಸಮಾಧಾನಪಡಿಸಿದರು. –ಎಎಫ್‌ಪಿ ಚಿತ್ರ
ಗಾಯಗೊಂಡಿದ್ದ ಕ್ಯಾರೋಲಿನ್ ಮರಿನ್‌ ಅವರನ್ನು ಸೈನಾ ನೆಹ್ವಾಲ್‌ ಸಮಾಧಾನಪಡಿಸಿದರು. –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT