ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ ವಿ.ವಿ. ಅಥ್ಲೆಟಿಕ್ಸ್‌: ಜುನೇದ್‌, ಷೆರಿನ್‌ ಕೂಟ ದಾಖಲೆ

ಎರಡನೇ ದಿನವೂ ಮಿಂಚಿದ ಮಂಗಳೂರು ವಿ.ವಿ
Last Updated 3 ಜನವರಿ 2020, 19:45 IST
ಅಕ್ಷರ ಗಾತ್ರ

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯದ ಜುನೇದ್‌ ಕೆ.ಟಿ, ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್‌ ಕೂಟದ ಎರಡನೇ ದಿನವಾದ ಶುಕ್ರವಾರ ಪುರುಷರ ವಿಭಾಗದ 20 ಕಿಲೋ ಮೀಟರ್‌ ನಡಿಗೆ ಸ್ಪರ್ಧೆಯಲ್ಲಿ ಕೂಟ ದಾಖಲೆಯ ಸಹಿತ ಚಿನ್ನದ ಪದಕ ಮುಡಿಗೇರಿಸಿಕೊಂಡರು.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ಆಳ್ವಾಸ್ ಕಾಲೇಜು ಸಹಯೋಗದಲ್ಲಿಸ್ವರಾಜ್ ಮೈದಾನದಲ್ಲಿ ನಡೆಯುತ್ತಿರುವ ಈ ಕೂಟದ ಎರಡನೇ ದಿನ ಎರಡು ದಾಖಲೆಗಳು ಮೂಡಿಬಂದವು.

ಆಳ್ವಾಸ್‌ ಕಾಲೇಜಿನ ಜುನೇದ್ 20 ಕಿಲೋ ಮೀಟರ್ ನಡಿಗೆ ಸ್ಪರ್ಧೆಯನ್ನು 1 ಗಂಟೆ 26 ನಿಮಿಷ 39:78 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಈ ಹಿಂದಿನ ದಾಖಲೆ, ರಾಯ್‌ಪುರದ ಆರ್‌ಎಸ್‌ಎಸ್‌ ವಿಶ್ವವಿದ್ಯಾಲಯದ ಬಿ.ಕುಮಾರ್‌ (ಕಾಲ: 1 ಗಂಟೆ 29 ನಿಮಿಷ 8 ಸೆಕೆಂಡ್) ಅವರ ಹೆಸರಲ್ಲಿ ಇತ್ತು.ಆಳ್ವಾಸ್‌ ಕಾಲೇಜಿನವರೇ ಆದ ನವೀನ್ (ಕಾಲ: 1 ಗಂಟೆ 26 ನಿಮಿಷ 53: 56 ಸೆಕೆಂಡ್‌) ಎರಡನೆಯವರಾಗಿ ಗುರಿ ತಲುಪಿ ಬೆಳ್ಳಿ ಪದಕ ಪಡೆದರು.

ಮದ್ರಾಸ್ ವಿಶ್ವವಿದ್ಯಾಲಯದ ಎ. ಷೆರಿನ್ ಮಹಿಳೆಯರ ಲಾಂಗ್‌ ಜಂಪ್‌ನಲ್ಲಿ6.32 ಮೀಟರ್‌ ದೂರ ಜಿಗಿದು ಕೂಟ ದಾಖಲೆ ಸ್ಥಾಪಿಸಿದರು.

ಈ ಹಿಂದಿನ ದಾಖಲೆ (2008ರಲ್ಲಿ 6.28 ಮೀ.) ಕಣ್ಣೂರು ವಿಶ್ವವಿದ್ಯಾಲಯದ ಮಯೂಖಾ ಜಾನಿ ಅವರ ಹೆಸರಿನಲ್ಲಿತ್ತು. 100 ಮೀಟರ್‌ ಓಟದಲ್ಲಿ ಧನಲಕ್ಷ್ಮಿ ಪಾರಮ್ಯ ಮೆರೆದರು.

ವೇಗದ ಓಟಗಾರ: ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದ ನರೇಶ್‌ ಕುಮಾರ್‌ 100 ಮೀ. ಓಟವನ್ನು 10.57 ಸೆ.ಗಳೊಡನೆ ಕ್ರಮಿಸಿ ಕೂಟದ ‘ವೇಗದ ಓಟಗಾರ’ ಎನಿಸಿದರು.

ಮಹಿಳೆಯ ವಿಭಾಗದಲ್ಲೂ ಇದೇ ವಿಶ್ವವಿದ್ಯಾಲಯದ ಜ್ಯೋತಿ ವೈ. 11.64 ಸೆ.ಗಳಲ್ಲಿ ದೂರ ಪೂರೈಸಿ ವೇಗದ ಓಟಗಾರ್ತಿ ಎನಿಸಿದರು.

ಮಂಗಳೂರು ವಿ.ವಿ. ಎರಡನೇ ದಿನದ ನಂತರ ಒಟ್ಟು ನಾಲ್ಕು ಚಿನ್ನ, ನಾಲ್ಕು ಬೆಳ್ಳಿ, ಎರಡು ಕಂಚಿನ ಪದಕ ಗೆದ್ದುಕೊಂಡಿದೆ. 63 ಪಾಯಿಂಟ್‌ಗಳೊಡನೆ ಅಗ್ರಸ್ಥಾನದಲ್ಲಿದೆ.

ಎರಡನೇ ದಿನದ ಫಲಿತಾಂಶ: ಪುರುಷರ ವಿಭಾಗ– 20 ಕಿ.ಮೀ ನಡಿಗೆ: ಜುನೇದ್ ಕೆ. ಟಿ – ಮಂಗಳೂರು ವಿಶ್ವವಿದ್ಯಾಲಯ (ಕಾಲ: 1ಗ 26 ನಿ 39:78 ಸೆ)–1, ನವೀನ್ – ಮಂಗಳೂರು ವಿ.ವಿ (ಕಾಲ: 1ಗ 26 ನಿ 53: 56ಸೆ)–2, ರಾಹುಲ್- ದೆಹಲಿ ವಿಶ್ವವಿದ್ಯಾಲಯ(ಕಾಲ: 1ಗ 28ನಿ 12: 30ಸೆ)–3

400 ಮೀಟರ್‌ ಹರ್ಡಲ್ಸ್: ಧವಲ್ ಮಹೇಶ್ ಉಠೇಕರ್– ಸರ್ದಾರ್ ಪಟೇಲ್ ವಿಶ್ವವಿದ್ಯಾಲಯ
(ಕಾಲ: 51: 300 ಸೆ)–1, ಡಿ. ಅಮರನಾಥ್ – ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ– (ಕಾಲ: 51:871ಸೆ)–2, ನಾರಾಯಣ್ ಯಾದವ್ ಅಭಯ್- ಡಾ.ಆರ್.ಎಂ.ಎಲ್ ಅವಧ್ ವಿಶ್ವವಿದ್ಯಾಲಯ (ಕಾಲ: 51: 950ಸೆ )–3

100ಮೀ ಓಟ‌: ನರೇಶ್ ಕುಮಾರ್- (ಆಚಾರ್ಯ ನಾಗರ್ಜುನ ವಿಶ್ವವಿದ್ಯಾಲಯ ಗುಂಟೂರು ಕಾಲ: 10. 570ಸೆ)-1,
ಜಿ ಕಾತಿರವನ್- (ಭಾರತಿದಾಸನ್ ವಿಶ್ವವಿದ್ಯಾಲಯ ಕಾಲ:10.612ಸೆ )-2, ಓಂಕಾರ್‍ನಾಥ್ – (ಮಹಾತ್ಮಗಾಂಧಿ ವಿಶ್ವವಿದ್ಯಾಲಯ, ಕೊಟ್ಟಾಯಂ ಕಾಲ:10.653ಸೆ)-3

800ಮೀ ಓಟ: ಅಮನ್ ದೀಪ್ (ಮಹರ್ಷಿ ದಯಾನಂದ ವಿ.ವಿ ಕಾಲ: 1ನಿ 54.094 ಸೆ)-1
ಶರ್ಮ ಗೌರವ್- (ಜಿವಾಜಿ ವಿ.ವಿ ಮಹಾರಾಷ್ಟ್ರ ಕಾಲ: 1ನಿ 54.363 ಸೆ)-2, ಮುಜಾಮಿಲ್ ಎ (ಮಂಗಳೂರು ವಿವಿ ಕಾಲ: 1ನಿ 54.42 ಸೆ)-3,

ಹ್ಯಾಮರ್ ಥ್ರೋ: ಪ್ರದೀಪ್‌ ಕುಮಾರ್‌( ಮಂಗಳೂರು ವಿವಿ ದೂರ: 64.19 ಮೀಟರ್‌)–1, ದಮ್ನಿತ್‌ ಸಿಂಗ್‌( ಪಂಜಾಬಿ ವಿ.ವಿ ದೂರ: 62.15 ಮೀಟರ್‌)–2, ರವಿ– (ಮಹರ್ಷಿ ದಯಾನಂದ ವಿ.ವಿ ದೂ: 61.33)–3

ಮಹಿಳೆಯರ ವಿಭಾಗ: 400 ಮೀಟರ್‌ ಹರ್ಡಲ್ಸ್: ಪ್ರೀತಿ (ವಿಬಿಎಸ್‌ಪಿ ವಿ.ವಿ ಜೋಧ್‌ಪುರಶ, ಕಾಲ: 59: 910 ಸೆ)-1, ಪ್ರಿಯಾರ್ ವಿ. ವಿಶ್ವ (ಎಸ್ಆರ್‌ಎಂ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಕಾಲ: 59 : 987 ಸೆ)–2, ನನ್ಹ (ಮಹರ್ಷಿ ದಯಾನಂದ ವಿಶ್ವವಿದ್ಯಾಲಯ, ರೋಹ್ಟಕ್‌ ಕಾಲ: 1ನಿ 00:319 ಸೆ)–3,

100ಮೀ ಓಟ : ಜ್ಯೋತಿ ವೈ – (ಆಚಾರ್ಯ ನಾಗರ್ಜುನ ವಿ.ವಿ ಗುಂಟೂರು ಕಾಲ: 11.642 ಸೆ)-
2. ಎಸ್. ಧನಲಕ್ಷ್ಮಿ- (ಮಂಗಳೂರು ವಿ.ವಿ ಕಾಲ: 11.683ಸೆ) – 2, ಕೌರ್ ಅಮೃತ್ – (ಪಂಜಾಬ್ ವಿ.ವಿ, ಪಟಿಯಾಲ ಕಾಲ: 11.873ಸೆ) - 3

800ಮೀ ಓಟ: ಸುನಿಲಾ ಕುಮಾರಿ – (ಮಂಗಳೂರು ವಿ.ವಿ ಕಾಲ: 2 ನಿ 07.97 ಸೆ)-1, ಲಡ್‍ಕತ್ ಯಮುನ – (ಸಾವಿತ್ರಿ ಬಾಯಿ ಫುಲೆ ವಿವಿ. ಕಾಲ: 2ನಿ 08.25ಸೆ)- 2, ಅಲೀಶ್‌ ಪಿ. ಆರ್ – (ಮಹಾತ್ಮಗಾಂಧಿ ವಿ.ವಿ, ಕೊಟ್ಟಾಯಂ ಕಾಲ: 2ನಿ. 08.05ಸೆ)– 3

ಚಕ್ರ ಎಸೆತ : ಎಂ. ಕಾರುಣ್ಯ- (ಮದ್ರಾಸ್ ವಿವಿ ದೂರ: 48.03 ಮೀಟರ್‌)- 1, ಭಾವಾ ಯಾದವ್- (ದೆಹಲಿ ವಿ.ವಿ ದೂ: 46.57ಮೀಟರ್‌)-2, ನಿಧಿ ರಾಣಿ- (ಮಂಗಳೂರು ವಿವಿ 45.89ಮೀ) -3

ಉದ್ದ ಜಿಗಿತ: ಎ. ಷೆರಿನ್ -(ಮದ್ರಾಸ್ ವಿ.ವಿ ತಮಿಳುನಾಡು ದೂರ: 6.32 ಮೀಟರ್‌) 1, ನೂತನ ಕೂಟ ದಾಖಲೆ, 2008 ರಲ್ಲಿ ಮಯೂಖ ಜೋನಿ- (ಕಣ್ಣೂರು ವಿ.ವಿ ದೂರ: 6.28 ಮೀಟರ್‌) ಅವರ ಹೆಸರಿನಲ್ಲಿ ಇದ್ದ ಹಳೆಯ ದಾಖಲೆ. ಐಶ್ವರ್ಯಾ. ಬಿ – ( ಮಂಗಳೂರು ವಿ.ವಿ 6.25 ಮೀ ) –2, ಮನಿಶಾ ಮೆರೆಲ್ –(ಸಂಬಲ್ ಪುರ್ ವಿ.ವಿ ಒಡಿಸಾ 6.20 ಮೀ ) –3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT