ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Paris Olympics: ರಷ್ಯಾ, ಬೆಲಾರಸ್‌ ಅಥ್ಲೀಟುಗಳಿಗೆ ನಿರ್ಬಂಧ

ಪ್ಯಾರಿಸ್‌ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭ‍
Published 20 ಮಾರ್ಚ್ 2024, 12:22 IST
Last Updated 20 ಮಾರ್ಚ್ 2024, 12:22 IST
ಅಕ್ಷರ ಗಾತ್ರ

ಜಿನೇವಾ: ಜುಲೈ 26ರಂದು ನಡೆಯಲಿರುವ ಪ್ಯಾರಿಸ್‌ ಒಲಿಂಪಿಕ್ಸ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಷ್ಯಾ ಮತ್ತು ಬೆಲಾರಸ್‌ ಅಥ್ಲೀಟುಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಹೇಳಿದೆ.

ಉದ್ಘಾಟನಾ ಸಮಾರಂಭ ಈ ಬಾರಿ ವಿಭಿನ್ನವಾಗಿರಲಿದೆ. ಭಾಗವಹಿಸುವ ದೇಶಗಳ ಅಥ್ಲೀಟುಗಳು ಕ್ರೀಡಾಂಗಣದಲ್ಲಿ ಪಥಸಂಚಲನದ ಮೂಲಕ ಸಾಗಿ ಸಮಾವೇಶಗೊಳ್ಳುವುದು ಸಂಪ್ರದಾಯ. ಆದರೆ ಈ ಬಾರಿ ಸಾವಿರಾರು ಅಥ್ಲೀಟುಗಳು ಸೆನ್‌ ನದಿಯಲ್ಲಿ ದೋಣಿಗಳ ಮುಖಾಂತರ ಐಫೆಲ್‌ ಟವರ್ ದಿಕ್ಕಿನತ್ತ ಕೆಲವು ಮೈಲು ದೂರ ಕ್ರಮಿಸಲಿದ್ದಾರೆ.

ರಷ್ಯಾ, ಬೆಲಾರಸ್ ದೇಶಗಳ ಅಥ್ಲೀಟುಗಳಿಗೆ ಒಲಿಂಪಿಕ್ಸ್‌ನಲ್ಲಿ ತಟಸ್ಥ ಅಥ್ಲೀಟುಗಳಾಗಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಅವರು ಸಮಾರಂಭದ ಅನುಭವ ಪಡೆಯುವುದಕ್ಕಷ್ಟೇ ಅವಕಾಶ ನೀಡಲಾಗುವುದು ಎಂದು ಐಒಸಿ ಹೇಳಿದೆ. ಹೀಗಾಗಿ ಉದ್ಘಾಟನಾ ದಿನ ನದಿಯ ಬಳಿ ಪ್ರೇಕ್ಷಕರಾಗಿರುವುದಕ್ಕೆ ಮಾತ್ರ ಅವಕಾಶ ನೀಡುವ ಸಾಧ್ಯತೆಯಿದೆ.

ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ಸ್‌ ಸಮಿತಿ ಕೂಡ ಆಗಸ್ಟ್‌ 28ರ ಪ್ಯಾರಿಸ್‌ನ ಉದ್ಘಾಟನಾ ಸಮಾರಂಭಕ್ಕೆ ಈ ಎರಡು ದೇಶಗಳ ಅಥ್ಲೀಟುಗಳಿಗೆ ನಿರ್ಬಂಧ ವಿಧಿಸಿದೆ.

ಉಕ್ರೇನ್ ಮೇಲೆ ಯುದ್ಧ ನಡೆಸಿದ ಕಾರಣಕ್ಕೆ ಈ ಎರಡು ದೇಶಗಳು ತಂಡಗಳನ್ನು ಕಳುಹಿಸುವಂತಿಲ್ಲ. ಆದರೆ ವೈಯಕ್ತಿಕ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಆದರೆ ಇದಕ್ಕೂ ಎರಡು ಹಂತದ ಅನುಮತಿ ಅಗತ್ಯ. ತಾವು ಭಾಗವಹಿಸುವ ಕ್ರೀಡಾ ಮಂಡಳಿಯಿಂದ ಅನುಮತಿ ಪಡೆಯಬೇಕು. ನಂತರ ಐಒಸಿಯಿಂದ ನೇಮಕಗೊಂಡ ಪರಿಶೀಲನಾ ಸಮಿತಿಯಿಂದ ಒಪ್ಪಿಗೆ ಪಡೆಬೇಕಾಗುತ್ತದೆ.

ತಟಸ್ಥ ಅಥ್ಲೀಟುಗಳು ಉಕ್ರೇನ್‌ ಮೇಲಿನ ಯುದ್ಧವನ್ನು ಬೆಂಬಲಿಸಿ ಮಾತನಾಡುವಂತಿಲ್ಲ. ಆ ದೇಶದ ಸೇನೆ, ಭದ್ರತಾ ಪಡೆಗಳಲ್ಲಿ, ಅರೆ ಸೇನಾ ಪಡೆಯಲ್ಲಿ ಕೆಲಸ ಮಾಡುವಂತಿಲ್ಲ.

ಒಲಿಂಪಿಕ್ಸ್‌ಗೆ ರಷ್ಯಾದ ಪಾಸ್‌ಪೋರ್ಟ್ ಹೊಂದಿರುವ 36 ಅಥ್ಲೀಟುಗಳು, ಬೆಲಾರಸ್‌ ಪಾಸ್‌ಪೋರ್ಟ್ ಹೊಂದಿರುವ 22 ಅಥ್ಲೀಟುಗಳು ತಟಸ್ಥ ಕ್ರೀಡಾಪಟುಗಳಾಗಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಐಒಸಿ ಮಂಗಳವಾರ ತಿಳಿಸಿದೆ.

ಇಂಥ ಅಥ್ಲೀಟುಗಳು ಗೆಲ್ಲುವ ಪದಕಗಳನ್ನು ಪದಕ ಪಟ್ಟಿಯಲ್ಲಿ ಸೇರಿಸುವುದಿಲ್ಲ. ಪದಕ ಪ್ರದಾನ ಸಮಾರಂಭದಲ್ಲಿ ಪಚ್ಚೆ ಹರಳಿನ (ಜೇಡ್‌) ಬಣ್ಣದ ಧ್ವಜ ಬಳಕೆಯಾಗಲಿದೆ. ವಿಶೇಷವಾಗಿ ರಚಿಸಿದ ಸಂಗೀತ ನುಡಿಸಲಾಗುವುದು. ಇದಕ್ಕೆ ಸಾಹಿತ್ಯ ಇರುವುದಿಲ್ಲ.

ಅಮಾನತು ತೆರವು:

ಗ್ವಾಟೆಮಾಲಾ ಮೇಲೆ 18 ತಿಂಗಳ ಹಿಂದೆ ವಿಧಿಸಲಾಗಿದ್ದ ಅಮಾನತನ್ನು ಐಒಸಿ ಹಿಂಪಡೆದುಕೊಂಡಿದೆ. ಒಲಿಂಪಿಕ್ ಸಂಸ್ಥೆಯ ಚಟುವಟಿಕೆಯಲ್ಲಿ ಸರ್ಕಾರದ ಹಸ್ತಕ್ಷೇಪ ವಿರೋಧಿಸಿ ಈ ಅಮಾನತು ವಿಧಿಸಲಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT