ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇಲೊ ಇಂಡಿಯಾ ಹಾಕಿ: ಬೆಂಗಳೂರು ವಿವಿಗೆ ಚಿನ್ನ

Last Updated 1 ಮೇ 2022, 7:05 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ಹಾಕಿಯ ಚಿನ್ನದ ಪದಕ ಬೆಂಗಳೂರು ನಗರ ವಿವಿ ಪಾಲಾಯಿತು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಪಂದ್ಯದಲ್ಲಿ ಬೆಂಗಳೂರು ವಿವಿ 3-0ಯಿಂದ ಪಂಜಾಬ್‍ನ ಗುರುನಾನಕ್ ದೇವ್ ವಿವಿಯನ್ನು ಮಣಿಸಿತು. ಈ ಮೂಲಕ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು.

ಜಿದ್ದಾಜಿದ್ದಿಯ ಹಣಾಹಣಿಯ ಮೊದಲ ಕ್ವಾರ್ಟರ್‌ನಲ್ಲಿ ಗೋಲು ದಾಖಲಾಗಲಿಲ್ಲ. ಬೆಂಗಳೂರು ವಿವಿ ಎರಡನೇ ಕ್ವಾರ್ಟರ್‌ ನಲ್ಲಿ ಒಂದು ಮತ್ತು ಕೊನೆಯ ಕ್ವಾರ್ಟರ್‌ನಲ್ಲಿ ಎರಡು ಗೋಲು ಗಳಿಸಿತು. ಗುರುನಾನಕ್ ದೇವ್ ವಿವಿ ಮೊದಲೆರಡು ಕ್ವಾರ್ಟಗಳಲ್ಲಿ ಲಭಿಸಿದ ಮೂರು ಪೆನಾಲ್ಟಿ ಕಾರ್ನರ್ ಸೇರಿದಂತೆ ಸಿಕ್ಕಿದ ಅವಕಾಶಗಳನ್ನೆಲ್ಲ ಕೈಚೆಲ್ಲಿತು. ಹರೀಶ್ ಮುತಗಾರ್ (28 ಮತ್ತು 60ನೇ ನಿಮಿಷ) ಹಾಗೂ ವಸಂತಕುಮಾರ್ ಗೋಕಾವಿ (60ನೇ ನಿ) ಬೆಂಗಳೂರು ಪರವಾಗಿ ಚೆಂಡನ್ನು ಗುರಿ ಮುಟ್ಟಿಸಿದರು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಪುಣೆಯ ಸಾವಿತ್ರಿಬಾಯಿ ಫುಲೆ ವಿವಿ ಪಂಜಾಬಿ ವಿವಿಯನ್ನು ಶೂಟೌಟ್‍ನಲ್ಲಿ 4-2ರಲ್ಲಿ ಮಣಿಸಿತು. ಸಂಜೆ ನಡೆಯಲಿರುವ ಮಹಿಳೆಯರ ಫೈನಲ್‍ನಲ್ಲಿ ಮೈಸೂರು ವಿವಿ ಗ್ವಾಲಿಯರ್ ವಿವಿಯನ್ನು ಎದುರಿಸಲಿದೆ.

ವೇಗ ನಡಿಗೆಯಲ್ಲಿ ಮಂಗಳೂರು ವಿವಿಗೆ ಕಂಚು

ಪುರುಷರ 20 ಕಿಲೋಮೀಟರ್ ವೇಗ ನಡಿಗೆಯಲ್ಲಿ ಮಂಗಳೂರು ವಿವಿಯ ಪರಮ್‍ಜೀತ್ ಬಿಷ್ಠ್ ಕಂಚಿನ ಪದಕ ಗಳಿಸಿದರು. ಪಂಜಾಬಿ ವಿವಿಯ ಅಕ್ಷದೀಪ್ ಸಿಂಗ್ 1 ತಾಸು 26.44 ನಿಮಿಷಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗಳಿಸಿದರು. ಕುಮಾಂವ್ ವಿವಿಯ ಅನ್ಶುಲ್ ದೊಂಡಿಯಾಲ್ ಬೆಳ್ಳಿ ಪದಕ ಗೆದ್ದುಕೊಂಡರು.
ಅನ್ಶುಲ್ 1 ತಾಸು 29.7 ನಿಮಿಷಗಳಲ್ಲಿ ಗುರಿ ಮುಟ್ಟಿದರೆ ಪರಮ್‍ಜೀತ್ 1 ತಾಸು 29.33 ನಿಮಿಷಗಳನ್ನು ತಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT