ಮಡಿಕೇರಿ: ಕಾಂಡಂಡ ತಂಡವು ಕೊಡವ ಕೌಟುಂಬಿಕ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಗುರುವಾರ ಗೆಲುವು ಸಾಧಿಸಿತು.
ಕಾಕೋಟುಪರಂಬು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕಾಂಡಂಡ ತಂಡವು 1-0 ಗೋಲಿನಿಂದ ಕನ್ನಂಡ ತಂಡವನ್ನು ಸೋಲಿಸಿತು. ಅಪ್ಪಣ್ಣ ಏಕೈಕ ಗೋಲು ಗಳಿಸಿದರು. ಕಾಳೇಂಗಡ ತಂಡವು 4-0 ಗೋಲುಗಳಿಂದ ಸಣ್ಣುವಂಡ ತಂಡವನ್ನು ಪರಾಭವಗೊಳಿಸಿತು. ಕಾಳೇಂಗಡ ಪರ ಬೋಪಣ್ಣ ಎರಡು, ಯಶ್ವಿನ್ ಹಾಗೂ ಮೊನೀಶ್ ತಲಾ ಒಂದೊಂದು ಗೋಲು ತಂದಿತ್ತರು.
ಪುದಿಯೊಕ್ಕಡ ತಂಡವು 7-0 ಗೋಲುಗಳಿಂದ ಮಂಡಿರ ತಂಡದ ವಿರುದ್ಧ ಗೆಲುವು ಸಾಧಿಸಿತು. ವಿಜಯಿ ತಂಡದ ಪ್ರಧಾನ್, ವಿಪಿನ್ ತಲಾ ಎರಡು ಗೋಲು, ಸುಮನ್, ರತನ್ ಹಾಗೂ ಅಭಿನ್ ತಲಾ ಒಂದೊಂದು ದಾಖಲಿಸಿದರು.
ಕಡೇಮಾಡ ತಂಡವು 4-3 ಗೋಲು ಗಳಿಂದ ‘ಟೈಬ್ರೇಕರ್’ನಲ್ಲಿ ಕೋದಂಡ ತಂಡವನ್ನು ಸೋಲಿಸಿತು. ನಿಗದಿತ ಅವಧಿಯಲ್ಲಿ ತೀವ್ರ ಹೋರಾಟದಿಂದ ಪಂದ್ಯ ಸಮಬಲವಾಗಿತ್ತು. ಅರೆಯಡ ತಂಡವು 1-0 ಗೋಲಿನಿಂದ ಚೊಯ ಮಾಡಂಡ ತಂಡವನ್ನು ಮಣಿಸಿತು.