ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Paralympics: ಬ್ಯಾಡ್ಮಿಂಟನ್‌ನಲ್ಲಿ ಕೃಷ್ಣಾ ಗೆಲುವು, ಭಾರತಕ್ಕೆ ಮತ್ತೊಂದು ಚಿನ್ನ

Last Updated 5 ಸೆಪ್ಟೆಂಬರ್ 2021, 7:00 IST
ಅಕ್ಷರ ಗಾತ್ರ

ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಭಾನುವಾರ ಭಾರತಕ್ಕೆ ಚಿನ್ನದ ಸಂಭ್ರಮ ಮೂಡಿದೆ. ಸಿಎಚ್‌–6 ವರ್ಗದ ಬ್ಯಾಡ್ಮಿಂಟನ್‌ ಫೈನಲ್‌ನಲ್ಲಿ ಕೃಷ್ಣಾ ನಾಗರ್‌ 'ಚಿನ್ನದ' ಗೆಲುವು ಸಾಧಿಸಿದ್ದಾರೆ.

ಹಾಂಕಾಂಗ್‌ನ ಚು ಮನ್‌ ಕಾಯ್‌ ಅವರ ಎದುರು ಜೈಪುರದ 22 ವರ್ಷ ವಯೋಮಾನದ ಕೃಷ್ಣಾ, 21-17, 16-21, 21-17 ಅಂತರದಲ್ಲಿ ಗೆಲುವು ಪಡೆದರು. ಶನಿವಾರ ಭಾರತದ ಪ್ರಮೋದ್ ಭಗತ್‌ ಬ್ಯಾಡ್ಮಿಂಟನ್‌ನಲ್ಲಿ (ಎಸ್‌ಎಲ್‌–3) ಮೊದಲ ಚಿನ್ನದ ಗೆಲುವು ತಂದಿದ್ದರು. ಈಗ ಕೃಷ್ಣಾ ಸಹ ಅವರ ಸಾಲಿಗೆ ಸೇರ್ಪಡೆಯಾಗಿದ್ದಾರೆ.

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಐದನೇ ಚಿನ್ನದ ಪದಕ ಲಭಿಸಿದೆ.

ಇದಕ್ಕೂ ಮುನ್ನ ಗೌತಮ ಬುದ್ಧ ನಗರದ ಜಿಲ್ಲಾಧಿಕಾರಿಯಾಗಿರುವ (ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್‌) ಕನ್ನಡಿಗ ಸುಹಾಸ್ ಯತಿರಾಜ್, ಪುರುಷರ ಬ್ಯಾಡ್ಮಿಂಟನ್‌ (ಎಸ್‌ಎಲ್‌–4) ಫೈನಲ್‌ನಲ್ಲಿ ಫ್ರಾನ್ಸ್‌ನ ಲೂಕಾಸ್‌ ಮಜೂರ್‌ ಎದುರು ಸೋಲು ಕಂಡರು. 38 ವರ್ಷ ವಯೋಮಾನದ ಸುಹಾಸ್‌ ಅವರು ಮಜೂರ್‌ ಎದುರು 62 ನಿಮಿಷಗಳ ಹೋರಾಟದಲ್ಲಿ 21-15, 17-21, 15-21 ಅಂತರದಲ್ಲಿ ಸೋತು, ಬೆಳ್ಳಿ ಪದಕ ಜಯಿಸಿದರು.

ಇನ್ನಷ್ಟು ಓದು...

ಕೃಷ್ಣಾ ನಾಗರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅಭಿನಂದನೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT