ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಜಂಪ್‌: ಜೆಸ್ಸಿ ಸಂದೇಶ್‌ಗೆ ಚಿನ್ನ

Published 21 ಮಾರ್ಚ್ 2024, 4:16 IST
Last Updated 21 ಮಾರ್ಚ್ 2024, 4:16 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಜೆಸ್ಸಿ ಸಂದೇಶ್ ಅವರು ಇಲ್ಲಿನ ಅಂಜು ಬಾಬಿ ಹೈ ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ ಬುಧವಾರ ನಡೆದ ಮೂರನೇ ಇಂಡಿಯನ್ ಓಪನ್ ಜಂಪ್ ಸ್ಪರ್ಧೆಯ ಪುರುಷರ ಹೈಜಂಪ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು.

28ರ ವರ್ಷದ ಜೆಸ್ಸಿ 2.20 ಮೀಟರ್‌ ಸಾಧನೆ ಮಾಡಿದರು. ತಮಿಳುನಾಡಿನ ಆದರ್ಶ್‌ ರಾಮ್‌ ಮತ್ತು ಒಡಿಶಾದ ಸ್ವಾಧಿನ್‌ ಕುಮಾರ್‌ ಮಝಿ (2.10 ಮೀ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಜಯಿಸಿದರು.

ಮಹಿಳೆಯರ ಪೋಲ್ ವಾಲ್ಟ್‌ನಲ್ಲಿ ಆತಿಥೇಯ ರಾಜ್ಯದ ಸಿಂಧುಶ್ರೀ ಜಿ. (3.80 ಮೀ) ಕಂಚಿನ ಪದಕ ಗೆದ್ದುಕೊಂಡರು. ತಮಿಳುನಾಡಿನ ಪವಿತ್ರ ವೆಂಕಟೇಶ್‌ (4.15 ಮೀ) ಚಿನ್ನ ಗೆದ್ದರೆ, ಕೇರಳದ ಮರಿಯಾ ಜೈಸನ್ (3.80 ಮೀ) ಬೆಳ್ಳಿ ತನ್ನದಾಗಿಸಿಕೊಂಡರು.

ಫಲಿತಾಂಶ: ಪುರುಷರು: ಹೈಜಂಪ್‌: ಜೆಸ್ಸಿ ಸಂದೇಶ್ (ಕರ್ನಾಟಕ)–1; ಆದರ್ಶ್‌ ರಾಮ್‌ (ತಮಿಳುನಾಡು)–2; ಸ್ವಾಧಿನ್‌ ಕುಮಾರ್‌ ಮಝಿ (ಒಡಿಶಾ)–3

ಟ್ರಿಪಲ್‌ ಜಂಪ್‌: ಅಬ್ದುಲ್ಲಾ ಅಬೂಬಕ್ಕರ್ (ಕೇರಳ)–1; ಎಲ್ದೋಸ್ ಪಾಲ್ (ಕೇರಳ)–2; ಸೆಲ್ವ ಪ್ರಭು (ತಮಿಳುನಾಡು)–3

ಲಾಂಗ್ ಜಂಪ್: ಮೊಹಮ್ಮದ್ ಅನೀಸ್ ಯಾಹಿಯಾ (ಕೇರಳ)–1; ಆದಿತ್ಯ ಕುಮಾರ್ ಸಿಂಗ್ (ಮಧ್ಯಪ್ರದೇಶ)–2; ವಿಷ್ಣು ಶಿವಶಂಕರ್ (ದೆಹಲಿ)–3.

ಪೋಲ್ ವಾಲ್ಟ್: ಎಂ. ಗೌತಮ್ (ತಮಿಳುನಾಡು)–1; ರೀಗನ್ ಜಿ. (ತಮಿಳುನಾಡು)–2; ಶೇಖರ್ ಕುಮಾರ್ ಪಾಂಡೆ (ಉತ್ತರಪ್ರದೇಶ)–3.

ಮಹಿಳೆಯರ ವಿಭಾಗ: ಲಾಂಗ್ ಜಂಪ್: ನಯನಾ ಜೇಮ್ಸ್ (ಕೇರಳ)–1; ಶೈಲಿ ಸಿಂಗ್ (ಉತ್ತರಪ್ರದೇಶ)–2; ಸುಶ್ಮಿತಾ (ರಾಜಸ್ಥಾನ)–3.

ಹೈಜಂಪ್‌: ಅತಿರಾ ಸೋಮರಾಜ್ (ಕೇರಳ)–1; ಕೆವಿನಾ ಅಶ್ವಿನಿ (ತಮಿಳುನಾಡು)– 2; ಖುಷಿ (ಹರಿಯಾಣ)–3

ಟ್ರಿಪಲ್ ಜಂಪ್: ಪೂರ್ವಾ ಹಿತೇಶ್ ಸಾವಂತ್ (ಮಹಾರಾಷ್ಟ್ರ) –1; ಶಾರ್ವರಿ ಅವಿನಾಶ್ (ಮಹಾರಾಷ್ಟ್ರ)–2; ಶೀನಾ ಎನ್‌.ವಿ. (ಕೇರಳ)–3.

ಪೋಲ್ ವಾಲ್ಟ್: ಪವಿತ್ರಾ ವೆಂಕಟೇಶ್ (ತಮಿಳುನಾಡು)–1; ಮರಿಯಾ ಜೈಸನ್ (ಕೇರಳ)–2; ಸಿಂಧುಶ್ರೀ ಜಿ. (ಕರ್ನಾಟಕ)– 3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT