ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಹಾಸ್ಟೆಲ್‌ಗೆ ಪ್ರವೇಶ:ಕಾಮನ್‌ವೆಲ್ತ್‌ ಚಿನ್ನದ ಪದಕ ವಿಜೇತ ಅಂಚಿತ್‌ ಅಮಾನತು

Published 16 ಮಾರ್ಚ್ 2024, 15:48 IST
Last Updated 16 ಮಾರ್ಚ್ 2024, 15:48 IST
ಅಕ್ಷರ ಗಾತ್ರ

ನವದೆಹಲಿ: ಪಟಿಯಾಲದಲ್ಲಿ ನಡೆಯುತ್ತಿರುವ ಒಲಿಂಪಿಕ್‌ ಪೂರ್ವಸಿದ್ಧತಾ ಶಿಬಿರದಲ್ಲಿ ಎನ್‌ಐಎಸ್‌ ಮಹಿಳಾ ಹಾಸ್ಟೆಲ್‌ಗೆ ಅಕ್ರಮವಾಗಿ ಪ್ರವೇಶ ಮಾಡಿದ ಆರೋಪದ ಮೇರೆಗೆ ಕಾಮನ್‌ವೆಲ್ತ್‌ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಲಿಫ್ಟರ್‌ ಅಚಿಂತ್‌ ಶೆವುಲಿ ಅವರನ್ನು ಅಮಾನತು ಮಾಡಲಾಗಿದೆ. 

ಶಿಸ್ತು ಉಲ್ಲಂಘನೆ ಗುರುವಾರ ರಾತ್ರಿ ಸಂಭವಿಸಿದೆ. ಪುರುಷರ 73 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ 22 ವರ್ಷದ ಅಚಿಂತ್‌  ಭದ್ರತಾ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದು, ಅವರು ಘಟನೆ ಬಗ್ಗೆ ವಿಡಿಯೊ  ಮಾಡಿದ್ದಾರೆ.

‘ಅಶಿಸ್ತು ಸಹಿಸಲಾಗುವುದಿಲ್ಲ. ತಕ್ಷಣವೇ ಶಿಬಿರದಿಂದ ಹೊರಹೋಗುವಂತೆ ಅಚಿಂತಾ ಅವರಿಗೆ ಸೂಚಿಸಲಾಗಿದೆ’ ಎಂದು ಭಾರತ ವೇಟ್ ಲಿಫ್ಟಿಂಗ್ ಫೆಡರೇಷನ್ (ಐಡಬ್ಲ್ಯುಎಲ್ ಎಫ್) ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ  ತಿಳಿಸಿದ್ದಾರೆ.

ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಎನ್ಐಎಸ್ ಪಟಿಯಾಲ ಕಾರ್ಯನಿರ್ವಾಹಕ ನಿರ್ದೇಶಕ ವಿನೀತ್ ಕುಮಾರ್ ಅವರಿಗೆ ಘಟನೆಯ ಬಗ್ಗೆ ತಕ್ಷಣ ಮಾಹಿತಿ ನೀಡಲಾಯಿತು. ಘಟನೆಯ ವಿಡಿಯೊ ಪುರಾವೆಗಳು ಇದ್ದ ಕಾರಣ, ಸಾಯ್ ತನಿಖಾ ಸಮಿತಿಯನ್ನು ರಚಿಸಲಿಲ್ಲ.

‘ವಿಡಿಯೊವನ್ನು ಎನ್ಐಎಸ್ ಪಟಿಯಾಲದ ವಿನೀತ್ ಕುಮಾರ್ ಮತ್ತು ನವದೆಹಲಿಯ ಸಾಯ್ ಪ್ರಧಾನ ಕಚೇರಿಗೆ ಕಳುಹಿಸಲಾಗಿದೆ ಮತ್ತು ಅಚಿಂತಾ ಅವರನ್ನು ಶಿಬಿರದಿಂದ ಹೊರ ಹಾಕಲು  ಐಡಬ್ಲ್ಯುಎಲ್ಎಫ್‌ಗೆ ತಿಳಿಸಲಾಗಿದೆ’ ಎಂದು ಸಾಯ್ ಮೂಲಗಳು ತಿಳಿಸಿವೆ.

ಪಟಿಯಾಲದ ಎನ್ಐಎಸ್‌ನಲ್ಲಿ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಪ್ರತ್ಯೇಕ ಹಾಸ್ಟೆಲ್‌ ಇದೆ. ಪ್ರಸ್ತುತ ಮಹಿಳಾ ಬಾಕ್ಸರ್‌ಗಳು, ಕ್ರೀಡಾಪಟುಗಳು ಮತ್ತು ಕುಸ್ತಿಪಟುಗಳು ಇದ್ದಾರೆ. 

ತಪ್ಪಿದ ಅವಕಾಶ: ಅಂಚಿತ್ ಅವರು ಅಮಾನತುಗೊಂಡಿರುವ ಕಾರಣ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಅವಕಾಶಗಳು ಸಹ ಅಂತ್ಯಗೊಂಡಿದೆ. ಏಕೆಂದರೆ ಈ ತಿಂಗಳ ಥೈಲ್ಯಾಂಡ್‌ನ ಫುಕೆಟ್‌ನಲ್ಲಿ ನಡೆಯಲಿರುವ ಪ್ಯಾರಿಸ್ ಕ್ರೀಡಾಕೂಟದ ಅರ್ಹತಾ ಪಂದ್ಯದಲ್ಲಿ ಭಾಗವಹಿಸುವಂತಿಲ್ಲ. ಶೆಲಿ ಪ್ರಸ್ತುತ ಒಲಿಂಪಿಕ್ ಅರ್ಹತಾ ಶ್ರೇಯಾಂಕದಲ್ಲಿ 27 ನೇ ಸ್ಥಾನದಲ್ಲಿದ್ದಾರೆ. 

ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು (49 ಕೆಜಿ) ಮತ್ತು ಕಾಮನ್‌ವೆಲ್ತ್‌ ಗೇಮ್ಸ್ ಬೆಳ್ಳಿ ಪದಕ ವಿಜೇತೆ ಬಿಂದ್ಯಾರಾಣಿ ದೇವಿ ಮಾತ್ರ ಪ್ಯಾರಿಸ್ ಕ್ರೀಡಾಕೂಟಕ್ಕೆ ಸ್ಪರ್ಧೆಯಲ್ಲಿದ್ದಾರೆ.

ಐಡಬ್ಲ್ಯುಎಫ್ ವಿಶ್ವಕಪ್ ನಲ್ಲಿ ಭಾಗವಹಿಸಲು ಇಬ್ಬರೂ ಈ ತಿಂಗಳ ಕೊನೆಯಲ್ಲಿ ಥೈಲ್ಯಾಂಡ್ ಗೆ ಪ್ರಯಾಣಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT