ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಡ್ರಿಡ್‌ ಮಾಸ್ಟರ್ಸ್‌ ಟೆನಿಸ್‌: ಪ್ರೀ ಕ್ವಾರ್ಟರ್‌ ಫೈನಲ್‌ಗೆ ಅಲ್ಕರಾಜ್

Published 1 ಮೇ 2023, 15:16 IST
Last Updated 1 ಮೇ 2023, 15:16 IST
ಅಕ್ಷರ ಗಾತ್ರ

ಮ್ಯಾಡ್ರಿಡ್‌ : ಬಲ್ಗೇರಿಯದ ಗ್ರಿಗೊರ್‌ ದಿಮಿತ್ರೊವ್‌ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ ಸ್ಪೇನ್‌ನ ಕಾರ್ಲೊಸ್‌ ಅಲ್ಕರಾಜ್‌,  ಮ್ಯಾಡ್ರಿಡ್‌ ಓಪನ್‌ ಟೆನಿಸ್‌ ಟೂರ್ನಿಯ 16ರ ಘಟ್ಟ ಪ್ರವೇಶಿಸಿದರು.

ಸೋಮವಾರ ನಡೆದ ಪಂದ್ಯದಲ್ಲಿ ಅಗ್ರಶ್ರೇಯಾಂಕದ ಅಲ್ಕರಾಜ್‌ 6–2, 7–5 ರಲ್ಲಿ ಎದುರಾಳಿಯನ್ನು ಸೋಲಿಸಿದರು. ತಮಗೆ ಲಭಿಸಿದ್ದ ಆರು ಬ್ರೇಕ್‌ ಪಾಯಿಂಟ್ಸ್‌ ಅವಕಾಶಗಳಲ್ಲಿ ನಾಲ್ಕರಲ್ಲಿ ಯಶಸ್ಸು ಕಂಡ ಅಲ್ಕರಾಜ್‌, ಎರಡನೇ ಸೆಟ್‌ನಲ್ಲಿ ಒಮ್ಮೆ ಮಾತ್ರ ತಮ್ಮ ಸರ್ವ್‌ ಕಳೆದುಕೊಂಡರು.

19 ವರ್ಷದ ಅಲ್ಕರಾಜ್‌ಗೆ ತವರು ನೆಲದಲ್ಲಿ ದೊರೆತ ಸತತ 17ನೇ ಗೆಲುವು ಇದು. ಅವರು ಕಳೆದ ತಿಂಗಳ ಆರಂಭದಲ್ಲಿ ನಡೆದಿದ್ದ ಬಾರ್ಸಿಲೋನಾ ಓಪನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು.

ಮುಂದಿನ ಪಂದ್ಯದಲ್ಲಿ ಅವರು ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ ಪೈಪೋಟಿ ನಡೆಸುವರು. ಇಲ್ಲಿ ಎರಡು ಬಾರಿ ಚಾಂಪಿಯನ್‌ ಆಗಿರುವ ಜ್ವೆರೆವ್‌ 6–1, 6–0 ರಲ್ಲಿ ಹ್ಯೂಗೊ ಗ್ರೆನಿಯೆರ್‌ ಅವರನ್ನು ಸೋಲಿಸಿದರು.

ವಿಶ್ವದ ಮೂರನೇ ರ್‍ಯಾಂಕ್‌ನ ಆಟಗಾರ ರಷ್ಯಾದ ಡೇನಿಯಲ್‌ ಮೆಡ್ವೆಡೆವ್‌ 4–6, 6–1, 7–5 ರಲ್ಲಿ ತಮ್ಮದೇ ದೇಶದ ಅಲೆಕ್ಸಾಂಡರ್‌ ಶೆವ್ಚೆಂಕೊ ಅವರನ್ನು ಪರಾಭವಗೊಳಿಸಿದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ವಿಶ್ವದ ಅಗ್ರ ರ್‍ಯಾಂಕ್‌ನ ಆಟಗಾರ್ತಿ ಇಗಾ ಶ್ವಾಂಟೆಕ್‌ 6–3, 6–2 ರಲ್ಲಿ ಬರ್ನಾರ್ಡಾ ಪೆರಾ ವಿರುದ್ಧ ಗೆದ್ದರೆ, ಮೂರನೇ ಶ್ರೇಯಾಂಕದ ಆಟಗಾರ್ತಿ ಜೆಸ್ಸಿಕಾ ಪೆಗುಲಾ 6–4, 7–6 ರಲ್ಲಿ ಮರಿಯಾ ಬೊಜ್ಕೊವಾ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT