ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್ ಗೇಮ್ಸ್‌ ಆತಿಥ್ಯದಿಂದ ಹಿಂದೆಸರಿದ ಮಲೇಷ್ಯಾ

Published 22 ಮಾರ್ಚ್ 2024, 11:33 IST
Last Updated 22 ಮಾರ್ಚ್ 2024, 11:33 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ವೆಚ್ಚ ಹೆಚ್ಚುತ್ತಿರುವ ಕಾರಣ ಮತ್ತು ಸಿದ್ಧತೆಗೆ ಅವಧಿ ಕಡಿಮೆಯಿರುವ ಕಾರಣ 2026ರ ಕಾಮನ್ವೆಲ್ತ್‌ ಗೇಮ್ಸ್‌ ಆತಿಥ್ಯದಿಂದ ಹಿಂದೆಸರಿಯಲು ಮಲೇಷ್ಯಾ ಶುಕ್ರವಾರ ನಿರ್ಧರಿಸಿದೆ.

ಪ್ರಧಾನಿ ಅನ್ವರ್ ಇಬ್ರಾಹಿಂ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಈ ಮೊದಲು ಆಸ್ಟ್ರೇಲಿಯಾದ ವಿಕ್ಟೋರಿಯಾ ಪ್ರಾಂತವೂ ಏರುತ್ತಿರುವ ಖರ್ಚುವೆಚ್ಚಗಳ ಹಿನ್ನೆಲೆಯಲ್ಲಿ  ಈ ಕ್ರೀಡೆಗಳ ಆತಿಥ್ಯದಿಂದ ಹಿಂದೆ ಸರಿದಿತ್ತು.

2026ರ ಕ್ರೀಡೆಗಳ ಆತಿಥ್ಯ ವಹಿಸಲು ಕಾಮನ್ವೆಲ್ತ್ ಗೇಮ್ಸ್‌ ಫೆಡರೇಷನ್‌ನ ನೀಡಿದ ಆಹ್ವಾನ ಸ್ವೀಕರಿಸದಿರಲು ನಿರ್ಧರಿಸಲಾಗಿದೆ ಎಂದು ಯುವಜನ ಮತ್ತು ಕ್ರೀಡಾ ಸಚಿವಾಲಯದ ನಿರ್ಧಾರವನ್ನು ಸಚಿವ ಹನಾ ಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ. ₹1042 ಕೋಟಿ ನೀಡುವುದಾಗಿ ಕಾಮನ್ವೆಲ್ತ್‌ ಗೇಮ್ಸ್ ಫೆಡರೇಷನ್‌ ಮಲೇಷ್ಯಾಕ್ಕೆ ತಿಳಿಸಿತ್ತು.

ಮಲೇಷ್ಯಾದ ಈ ಹಠಾತ್ ನಿರ್ಧಾರದಿಂದ ಕಾಮನ್ವೆಲ್ತ್ ಕ್ರೀಡೆಗಳ ಭವಿಷ್ಯ ತೂಗುಗತ್ತಿಯಲ್ಲಿದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಕೂಟ ಕೊನೆಯ ಬಾರಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT