ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದೇಶದಲ್ಲಿ ನೀರಜ್‌ ತರಬೇತಿಗೆ ಅನುಮೋದನೆ

Published 31 ಮೇ 2024, 16:56 IST
Last Updated 31 ಮೇ 2024, 16:56 IST
ಅಕ್ಷರ ಗಾತ್ರ

ನವದೆಹಲಿ: ಪ್ಯಾರಿಸ್ ಕ್ರೀಡಾಕೂಟಕ್ಕೆ ಸಿದ್ಧತೆಯಾಗಿ ಜಾವೆಲಿನ್ ಥ್ರೋಪಟು ನೀರಜ್ ಚೋಪ್ರಾ ಅವರು ಕೋಚ್ ಕ್ಲಾಸ್ ಬಾರ್ಟೋನಿಯೆಟ್ಜ್ ಮತ್ತು ಫಿಸಿಯೋ ಇಶಾನ್ ಮಾರ್ವಾಹಾ ಅವರೊಂದಿಗೆ 60 ದಿನ ಯುರೋಪ್‌ನಲ್ಲಿ ತರಬೇತಿ ಪಡೆಯಲು ಕ್ರೀಡಾ ಸಚಿವಾಲಯ ಗುರುವಾರ ಅನುಮೋದನೆ ನೀಡಿದೆ.

ಜೂನ್ 10 ರಿಂದ 21 ರ ವರೆಗೆ ಹಂಗೇರಿಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಸ್ಟ್ರೆಂಥ್ ಮತ್ತು ಕಂಡಿಷನಿಂಗ್ ಕೋಚ್ ವೇಯ್ನ್ ಪ್ಯಾಟ್ರಿಕ್ ಲೊಂಬಾರ್ಡ್ ಅವರನ್ನು ಸೇರಿಸಿಕೊಳ್ಳಲು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶಾ ಫೋಗಾಟ್ ಅವರ ಪ್ರಸ್ತಾಪಕ್ಕೆ ಸಚಿವಾಲಯದ ಮಿಷನ್ ಒಲಿಂಪಿಕ್ ಸೆಲ್ (ಎಂಒಸಿ) ಒಪ್ಪಿಕೊಂಡಿದೆ.

ಮೂರು ವರ್ಷಗಳ ಹಿಂದೆ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ಚೋಪ್ರಾ ಮೇ 29 ರಿಂದ ಜುಲೈ 28 ರವರೆಗೆ ಯುರೋಪ್‌ನ ವಿವಿಧ ಸ್ಥಳಗಳಲ್ಲಿ ತರಬೇತಿ ಪಡೆಯಲಿದ್ದಾರೆ.

ಕ್ರೀಡಾ ಸಚಿವಾಲಯದ ಟಾರ್ಗೆಟ್ ಒಲಂಪಿಕ್ ಪೋಡಿಯಂ ಸ್ಕೀಮ್ ಅಡಿಯಲ್ಲಿ ಅವರ ಈ ವಿದೇಶಿ ತರಬೇತಿಯ ವೆಚ್ಚವನ್ನು ಭರಿಸಲಾಗುತ್ತದೆ.

ಪ್ಯಾರಿಸ್‌ನಲ್ಲಿ 50 ಕೆ.ಜಿ ತೂಕದ ವಿಭಾಗದಲ್ಲಿ ವಿನೇಶಾ ಸ್ಪರ್ಧಿಸಲಿದ್ದಾರೆ. ಬುಡಾಪೆಸ್ಟ್‌ನಲ್ಲಿ ಜೂನ್ 6 ರಿಂದ 9 ರವರೆಗೆ ನಡೆಯಲಿರುವ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ 2ನೇ ರ್‍ಯಾಂಕಿಂಗ್ ಸರಣಿ - ಪೊಲಿಯಾಕ್ ಇಮ್ರೆ ಮತ್ತು ವರ್ಗಾ ಜಾನೋಸ್ ಮೆಮೋರಿಯಲ್‌ನಲ್ಲಿ ಅವರು ಸ್ಪರ್ಧಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT