ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರಕ್ಷಣೆಗೆ ‘ಮಿಶ್ರ ಸಮರ ಕಲೆ’

Last Updated 28 ಏಪ್ರಿಲ್ 2019, 19:49 IST
ಅಕ್ಷರ ಗಾತ್ರ

ಮಾರ್ಷಲ್ ಆರ್ಟ್ಸ್ ಅಂದರೆ ಬ್ರೂಸ್ ಲೀ ಕಣ್ಣಿನ ಮುಂದೆ ಬರುತ್ತಾನೆ. ಸಣ್ಣನೆ ದೇಹದವ ಘಟಾನುಘಟಿಗಳನ್ನು ಮಕಾಡೆ ಮಲಗಿಸುವ ಪರಿ ನೋಡಿದ ಎಷ್ಟೋ ಮಂದಿಗೆ ಅವನಂತಾಗಬೇಕು ಅನಿಸಿದ್ದಿದೆ. ಆದರೆ, ಇಟ್ಟಿಗೆ, ಹೆಂಚುಗಳನ್ನು ಒಡೆಯುವ ಕರಾಟೆಪಟುಗಳನ್ನು ನೋಡಿದಾಗ ದಿಗಿಲಾಗುತ್ತದೆ. ಸರಳ ವ್ಯಾಯಾಮಗಳತ್ತ ಮುಖ ಮಾಡಿದ್ದೂ ಇದೆ.ಆದರೆ, ಇದೀಗ ಅಪಾಯದ ಸನ್ನಿವೇಶವನ್ನು ದಿಟ್ಟವಾಗಿ ಎದುರಿಸಲು, ಸ್ವರಕ್ಷಣೆಗೆ ಬೇಕಾದ ಕೌಶಲಗಳನ್ನು ಕಲಿಸುವ ಜೊತೆಗೆ ದೇಹವನ್ನು ಸದೃಢಗೊಳಿಸಬಲ್ಲ ಕ್ರೀಡೆಯತ್ತ ಎಲ್ಲರ ದೃಷ್ಟಿ ನೆಟ್ಟಿದೆ.ಮಿಕ್ಸ್ ಮಾರ್ಷಲ್ ಆರ್ಟ್ಸ್ (ಎಂಎಂಎ)ಇದರಲ್ಲಿ ಒಂದು.

ಮಾರ್ಷಲ್ ಆರ್ಟ್ಸ್ ಬಗೆಗಿನ ಎಲ್ಲ ಪೂರ್ವಾ ಗ್ರಹಗಳನ್ನು ಕಳಚಿರುವ ಇದು, ಎರಡು ದಶಕ ಗಳಲ್ಲಿ ವೇಗವಾಗಿ ಬೆಳೆದಿದೆ. ಭಾರತದ ಕ್ರೀಡಾಪಟುಗಳು ಅದರಲ್ಲೂ ಮುಖ್ಯ ವಾಗಿ ಕುಸ್ತಿಪಟುಗಳು ಇದರತ್ತ ಆಕರ್ಷಿತರಾಗಿದ್ದಾರೆ. ಸಿನಿಮಾ ತಾರೆಯರೂ ತಮ್ಮ ಫಿಟ್ ನೆಸ್ ಕಾಯ್ದುಕೊಳ್ಳಲು ಈ ಆಟದತ್ತ ಮೊರೆ ಹೋಗಿದ್ದಾರೆ.

ಎಂಎಂಎ ಎಂದರೆ ಏನು?

ಕಿಕ್ಬಾಕ್ಸಿಂಗ್, ಬಾಕ್ಸಿಂಗ್, ಕುಸ್ತಿ,ಬ್ರೆಜಿಲ್ನಜಿಯು-ಜಿತ್ಸುಈನಾಲ್ಕೂ ಕ್ರೀಡೆ ಗಳ ಉತ್ತಮ ಅಂಶಗಳು ಇವೆ.ನಿಂತಾಗ ಬಾಕ್ಸಿಂಗ್, ಕಿಕ್ ಬಾಕ್ಸಿಂಗ್, ಮೊವಾಯ್ ಥಾಯ್ ಕೌಶಲ ಕಲಿತರೆ, ವ್ಯಕ್ತಿಯನ್ನು ಕೆಳಗೆ ಬೀಳಿಸಲು ಕುಸ್ತಿಯ ತಂತ್ರಬಳಸಲಾಗುತ್ತದೆ. ಜಿ-ಜಿತ್ಸು ನೆಲದ ಮೇಲೆ ಬಿದ್ದಾಗತಪ್ಪಿಸಿಕೊಳ್ಳುವ,ಹೋರಾಟನಡೆಸುವ ಚಾಕಚಕ್ಯತೆ ಕಲಿಸುತ್ತದೆ.

ಮಿಕ್ಕ ಫಿಟ್‌ನೆಸ್ ಕ್ರೀಡೆಗಿಂತ ಭಿನ್ನ

ಈ ಕಲೆಯಲ್ಲಿ ದೇಹವು ಸ್ಪ್ರಿಂಗ್ ನಂತೆ ವರ್ತಿಸುತ್ತದೆ. ಜಿಮ್‌ನಲ್ಲಿ ದೇಹ ಹುರಿಗಟ್ಟಿಸುವುದಷ್ಟೇ ಎಲ್ಲರ ಪರಮ ಗುರಿ. ಡ್ಯಾನ್ಸ್ ನಲ್ಲಿ ಬೆವರು ಹರಿಸುವುದಷ್ಟೇ ಮುಖ್ಯ ಉದ್ದೇಶ. ಆದರೆ, ‘ಎಂಎಂಎ’ನಲ್ಲಿ ಪ್ರತಿದಿನ ಒಂದೊಂದು ಮಾದರಿಯನ್ನು ಕಲಿಯುತ್ತಾರೆ. ನಿತ್ಯ ವಿಭಿನ್ನ ಆಟದ ಕೌಶಲಗಳನ್ನು ಕಲಿಯುವುದರಿಂದ ದೇಹ, ಮನಸ್ಸಿಗೆ ಹೊಸತು ಕಲಿತ ಖುಷಿ. ಅಲ್ಲದೆ, ಸ್ನಾಯುಗಳು ಬಲವಾಗುತ್ತವೆ. ದಿನಕ್ಕೆ ಒಂದು ಗಂಟೆ ‘ಎಂಎಂಎ’ ಅಭ್ಯಾಸ ಮಾಡಿದರೆ, ಸುಮಾರು ಒಂದು ಸಾವಿರ ಕ್ಯಾಲರಿ ಕರಗಿಸಬಹುದು.

ಕಲಿತದ್ದನ್ನು ಮರೆಯುವುದಿಲ್ಲ

ಜಿಮ್‌ಗೆ ಹೋಗಿ ಸಾಕಾಗಿ ಅರ್ಧಕ್ಕೆ ಬಿಟ್ಟರೆ ದೇಹದಲ್ಲಿ ಕೊಬ್ಬು ತುಂಬಬಹುದು. ಆದರೆ, ಎಂಎಂಎ ಕಲಿತು ಅಭ್ಯಾಸವನ್ನು ನಿಲ್ಲಿಸಿದರೆ ಅಡ್ಡ ಪರಿಣಾಮಗಳು ಆಗದು. ಆಟದ ಕೌಶಲಗಳನ್ನು ಹತ್ತು ವರ್ಷ ಕಲಿತರೂ ಮರೆಯುವುದಿಲ್ಲ. ಒಮ್ಮೆ ಸೈಕಲ್ ಕಲಿತ ಮೇಲೆ ಹೇಗೆ ಮರೆಯುವುದಿಲ್ಲವೋ ಹಾಗೆ. ಅಪಾಯ ಸನ್ನಿವೇಶಗಳು ಎದುರಾದಾಗ ಸ್ವರಕ್ಷಣೆಗೆ ಇದು ಬಹಳ ಸಹಾಯ ಮಾಡುತ್ತದೆ.

ಮನಸ್ಸಿಗೂ ರಿಲ್ಯಾಕ್ಸ್‌

ಕಠಿಣ ಅಭ್ಯಾಸ ಮತ್ತು ಕೌಶಲ ಜೊತೆ ಜೊತೆಯಲ್ಲಿಯೇ ಸಾಗುತ್ತವೆ. ಕೌಶಲ ಕರಗತ ಮಾಡಿಕೊಳ್ಳುವುದೇ ಗುರಿ ಆಗಿರುವುದರಿಂದ ದೇಹಕ್ಕೆ ದಣಿವಾಗದು. ದಿನವೂ ಉತ್ಸಾಹದಿಂದ ಇರಬಹುದು. ಏಕಾಗ್ರತೆ ಸಾಧಿಸಬಹುದು.

ಎಲ್ಲವೂ ವೈಜ್ಞಾನಿಕ

ಒಂದೊಂದು ಹೊಡೆತವೂ ದಿಕ್ಕು, ವೇಗ ಮತ್ತು ದೇಹ ಸ್ಥಿತಿ ಅವಲಂಬಿಸಿರುತ್ತದೆ. ವೈಜ್ಞಾನಿಕ ಆಯಾಮವೂ ಬೆರೆತಿರುತ್ತದೆ. ಒಂದೊಂದೇ ಕೌಶಲ ಅಭ್ಯಾಸ ಮಾಡುವುದರಿಂದ ಪರಿಣಾಮಕಾರಿಯಾಗಿ ಕಲಿಯಬಹುದು. ಬೆವರು ಬೇಗನೇ ಬರುವುದಿಲ್ಲ. ಹೀಗಾಗಿ ಸುಸ್ತಾಗುವುದು ಕಡಿಮೆ.

ವಯಸ್ಸಿನ ಮಿತಿಯಿಲ್ಲ:ನಾಲ್ಕರಿಂದ ಐವತ್ತು ವರ್ಷದೊಳಗೆ ಇದನ್ನು ಕಲಿಯಲು ಆರಂಭಿಸಬೇಕು. ನಲವತ್ತು ವರ್ಷದೊಳಗೆ ಅಭ್ಯಾಸ ಮಾಡಿದರೆ ಸ್ನಾಯುಗಳು ಬಲವಾಗುತ್ತವೆ. ಹೀಗಾಗಿ ಜೀವನದ ಮುಸ್ಸಂಜೆವರೆಗೂ ‘ಎಂಎಂಎ’ ಮಾಡಬಹುದು. ನಲ್ವತ್ತು ವಯಸ್ಸು ದಾಟಿದವರು ಕಲಿಯಬೇಕಾದರೆ, ವೈದ್ಯರಿಂದ ಮಾರ್ಗದರ್ಶನ ಪಡೆದರೆ ಸೂಕ್ತ. ಅನುಭವಿ ಮಾರ್ಗದರ್ಶಕರಿಂದ ಕಲಿಯಬೇಕು.

ಗಾಯಗೊಳ್ಳುತ್ತವೆಯೇ?

ಅಪಘಾತದಲ್ಲಿ ಗಾಯಗೊಂಡವರು, ಸ್ನಾಯು, ಮೂಳೆ ತೊಂದರೆಗೆ ಒಳಗಾದವರು ‘ಎಂಎಂಎ’ ಸೇರಬಹುದು. ಬಲಹೀನವಾದ ಅಂಗಗಳು ಮತ್ತೆ ದೃಢವಾಗಲು ಸಹಾಯವಾಗುತ್ತದೆ. ರಕ್ಷಾ ಕವಚಗಳ ಜೊತೆ ಅಭ್ಯಾಸ ಮಾಡುವುದರಿಂದ ಗಾಯಗೊಳ್ಳುವುದು ಅಸಂಭವ.

ಪ್ರಯೋಜನಗಳು

*ತೂಕ ಕಡಿಮೆ ಮಾಡುತ್ತದೆ (ದೇಹದ ಎತ್ತರಕ್ಕೆ ಅನ್ವಯ)

*ದೇಹದ ಕೊಬ್ಬನ್ನು ಕರಗಿಸುತ್ತದೆ
*ದೇಹದ ಆಕಾರ ಸಪೂರವಾಗುತ್ತದೆ
*ಆತ್ಮಸ್ಥೈರ್ಯ ಹೆಚ್ಚಿಸುತ್ತದೆ
*ಸ್ವ ರಕ್ಷಣೆಗೆ ಸಹಕಾರಿ

*ಮಾನಸಿಕ ಸ್ಥೈರ್ಯ ಮತ್ತು ಶಿಸ್ತನ್ನು ಕಲಿಸುತ್ತದೆ

*ಒಬ್ಬ ಸೈನಿಕನಿಗೆ ಇರುವ ಸಾಮರ್ಥ್ಯ ನಮ್ಮದಾಗುತ್ತದೆ

*ದೇಹದ ಸಾಧ್ಯತೆಗಳನ್ನು ವಿಸ್ತರಿಸುತ್ತದೆ

ಅಭ್ಯಾಸ ಆರಂಭಿಸುವ ಮುಂಚೆ

ಶೂ ಧರಿಸಬಾರದು
ಉಗುರು ಕತ್ತರಿಸಿರಬೇಕು
ಆಹಾರ ತೆಗೆದುಕೊಳ್ಳಬಾರದು.
ನಿತ್ಯ ಅಭ್ಯಾಸ ಮಾಡುವ ಗುರಿ ಇರಲಿ
ದೇಹ ಹುರಿಗಟ್ಟಿಸುವ ಆಲೋಚನೆ ಬಿಡಬೇಕು
ಪ್ರತಿ ಕೌಶಲವನ್ನು ನಿಧಾನವಾಗಿ ಕಲಿಯಬೇಕು
ಅಹಂ, ಹಿಂಜರಿಕೆ ಬಿಡುವುದು
ಎದುರಾಳಿಯನ್ನು ಗೌರವಿಸುವುದು

ನಾನೇಕೆ ಎಂಎಂಎ ಪಟು ಆಗಬಾರದು?

ಭಾರತದ ಮಹಿಳಾ ಕುಸ್ತಿಪಟು ರೀತು ಪೋಗಟ್, ಮಿಕ್ಸ್ಡ್ ಮಾರ್ಷಲ್‌ ಆರ್ಟ್ಸ್ ಅಥ್ಲಿಟ್‌ ಆಗುವ ನಿರ್ಧಾರವನ್ನುಈ ವರ್ಷದ ಆರಂಭದಲ್ಲಿ ಕೈಗೊಂಡರು. ಕಾಮನ್‌ವೆಲ್ತ್‌ ಗೇಮ್ಸ್‌ನ ಚಿನ್ನದ ಪದಕ ವಿಜೇತೆ ಚಿಕ್ಕಂದಿನಿಂದ ತಾನು ಪ್ರೀತಿಸುವ ‘ಕುಸ್ತಿ’ ಬಿಟ್ಟು, ಮತ್ತೊಂದು ಆಟವನ್ನು ಬದುಕಿನ ಭಾಗವಾಗಿ ತೆಗೆದುಕೊಂಡದ್ದು ಕ್ರೀಡಾ ಪ್ರೇಮಿಗಳಲ್ಲಿ ಆಶ್ಚರ್ಯ ತರಿಸಿತ್ತು. ಆಗ ರೀತು ನೀಡಿದ್ದು ಒಂದೇ ಉತ್ತರ ‘ಭಾರತದಿಂದ ಒಬ್ಬರೂಎಂಎಂಎ ವಿಶ್ವ ಚಾಂಪಿಯನ್‌ ಆಗಿಲ್ಲ. ನಾನೇ ಏಕೆ ಮೊದಲ ಎಂಎಂಎ ಚಾಂಪಿಯನ್‌ ಆಗಬಾರದು’ ಎಂದು.

* ಇಂದು ಫಿಟ್ ನೆಸ್‌ಗಾಗಿ ಎಂಎಂಎ ಆಯ್ಕೆ ಮಾಡುವವರು ಹೆಚ್ಚಿದ್ದಾರೆ. ದೇಹ ಮತ್ತು ಮನಸ್ಸು ಎರಡಕ್ಕೂ ಉತ್ತಮ ಕೆಲಸವನ್ನು ನೀಡುವ ಇದನ್ನು ದಿನ ಒಂದು ಗಂಟೆ ಅಭ್ಯಾಸ ಮಾಡಬೇಕು. ಸ್ವರಕ್ಷಣೆಗೆ ಇದಕ್ಕಿಂತ ಉತ್ತಮ ಕಲೆ ಬೇರೊಂದಿಲ್ಲ

-ನಿಶ್ಚಲ್ ಕೆಳಮನೆ, ಕೋಚ್, ಕಿಯ ಕಹ ಎಂಎಂಎ ಅಕಾಡೆಮಿ

*ಫುಡ್ ಡೆಲಿವರಿ ಕೆಲಸಗಾರನಾಗಿ ದುಡಿಯುತ್ತಿದ್ದು, ಕಳೆದ ಒಂದು ವರ್ಷದಿಂದ ಎಂಎಂಎ ಕಲಿಯುತ್ತಿದ್ದೇನೆ. ಬೆಳಗ್ಗೆಯಿಂದ ರಾತ್ರಿವರೆಗೂ ಫಿಟ್ ಆಗಿರಲು ಇದು ತುಂಬಾ ಸಹಾಯ ಮಾಡಿದೆ. ಎಷ್ಟೇ ಒತ್ತಡವಿದ್ದರೂ ಒಂದು ದಿನ ಕೂಡ ಅಭ್ಯಾಸ ತಪ್ಪಿಸಿಲ್ಲ.

-ಶಿವಮಾದೇಶ, ವಿದ್ಯಾರ್ಥಿ, ಕಿಯ ಕಹ ಎಂಎಂಎ ಅಕಾಡೆಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT