ಭೋಪಾಲ್: ಪ್ಯಾರಿಸ್ ಕ್ರೀಡೆಗಳಲ್ಲಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡದ ಸದಸ್ಯರಲ್ಲಿ ಒಬ್ಬರಾದ ವಿವೇಕ್ ಸಾಗರ್ ಪ್ರಸಾದ್ ಅವರಿಗೆ ಮಧ್ಯ ಪ್ರದೇಶದ ಸರ್ಕಾರ ಶುಕ್ರವಾರ ₹1ಕೋಟಿ ಬಹುಮಾನ ಘೋಷಿಸಿದೆ.
52 ವರ್ಷಗಳ ನಂತರ ಭಾರತ ಹಾಕಿ ತಂಡ ಸತತ ಒಲಿಂಪಿಕ್ಸ್‌ಗಳಲ್ಲಿ ಕಂಚಿನ ಪದಕ ಗೆದ್ದುಕೊಂಡಿತ್ತು. ಗುರುವಾರ ಪ್ಲೇ ಆಫ್ ಪಂದ್ಯದಲ್ಲಿ 2–1 ಗೋಲುಗಳಿಂ ಸ್ಪೇನ್ ಮೇಲೆ ಜಯಗಳಿಸಿತ್ತು.
ವಿವೇಕ್ ಸಾಗರ್ ಅವರು ಮಧ್ಯಪ್ರದೇಶದವರು. ಅವರನ್ನು ಅಭಿನಂದಿಸಿರುವ ಮುಖ್ಯಮಂತ್ತಿ ಮೋಹನ್ ಯಾದವ್ ಬಹುಮಾನ ಪ್ರಕಟಿಸಿದರು. ದೂರವಾಣಿಯಲ್ಲಿ ಅವರನ್ನು ಅಭಿನಂದಿಸಿದ ಯಾದವ್, ನಿಮಗೆ ಬಹುಮಾನವಾಗಿ ಮಧ್ಯಪ್ರದೇಶ ಸರ್ಕಾರ ₹1ಕೋಟಿ ಮೊತ್ತವನ್ನು ನಿಮ್ಮ ಖಾತೆಗೆ ವರ್ಗಾಯಿಸಲಿದೆ ಎಂದಿದ್ದಾರೆ.