ನವದೆಹಲಿ: 59ನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಆಗಸ್ಟ್ 27ರಿಂದ ಲಖನೌನಲ್ಲಿ ನಡೆಯಲಿದೆ. ಈ ಕುರಿತು ಭಾರತ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್‌ಐ) ಮಾಹಿತಿ ನೀಡಿದೆ. ಕೋಲ್ಕತಾದಲ್ಲಿ ಕೂಟವನ್ನು ಆಯೋಜಿಸಲು ಈ ಮೊದಲು ನಿರ್ಧರಿಸಲಾಗಿತ್ತು.

ವಿವಿಧ ಕಾರಣಗಳ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಅಥ್ಲೆಟಿಕ್ಸ್ ಅಸೊಸಿಯೇಷನ್, ಜುಲೈ 14–17ರವರೆಗೆ ನಿಗದಿಯಾಗಿದ್ದ ಕೂಟವನ್ನು ಆಯೋಜಿಸಲು ಹಿಂದೇಟು ಹಾಕಿತ್ತು.

ಆ ಬಳಿಕ ಉತ್ತರ ಪ್ರದೇಶ ರಾಜ್ಯ ಅಸೋಸಿಯೇಷನ್ ಚಾಂಪಿಯನ್‌ಷಿಪ್ ಆಯೋಜಿಸಲು ನಿರ್ಧರಿಸಿತು.

‘ದೋಹಾದಲ್ಲಿ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 6ರವರೆಗೆ ನಡೆಯಲಿರುವ ಐಎಎಎಫ್ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯಲು ಭಾರತದ ಅಥ್ಲೀಟ್‌ಗಳಿಗೆ ಇದು ಮತ್ತೊಂದು ಅವಕಾಶ ಒದಗಿಸಲಿದೆ’ ಎಂದು ಎಎಫ್‌ಐ ಪ್ರಕಟಣೆ ತಿಳಿಸಿದೆ.

ರಾಷ್ಟ್ರೀಯ ಚಾಂಪಿಯನ್‌ಷಿಪ್ ಪ್ರವೇಶಕ್ಕಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಆಗಸ್ಟ್ 12 ಕೊನೆಯ ದಿನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.