ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಸೀನಿಯರ್‌ ಈಜು ಚಾಂಪಿಯನ್‌ಷಿಪ್‌: ದಾಖಲೆ ಉತ್ತಮಪಡಿಸಿಕೊಂಡ ಶ್ರೀಹರಿ

Last Updated 21 ಸೆಪ್ಟೆಂಬರ್ 2018, 17:41 IST
ಅಕ್ಷರ ಗಾತ್ರ

ತಿರುವನಂತಪುರ: ಕರ್ನಾಟಕದ ಈಜುಪಟು ಶ್ರೀಹರಿ ನಟರಾಜ್‌ ಅವರು ಶುಕ್ರವಾರ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

72ನೇ ಗ್ಲೆನ್‌ಮಾರ್ಕ್‌ ರಾಷ್ಟ್ರೀಯ ಸೀನಿಯರ್‌ ಈಜು ಚಾಂಪಿಯನ್‌ಷಿಪ್‌ನ ಪುರುಷರ 200 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯ ಫೈನಲ್‌ನಲ್ಲಿ ಶ್ರೀಹರಿ 2 ನಿಮಿಷ 02.37 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು. ಇದರೊಂದಿಗೆ ತಮ್ಮದೇ ಹೆಸರಿನಲ್ಲಿದ್ದ ದಾಖಲೆ ಉತ್ತಮ ಪಡಿಸಿಕೊಂಡರು. 2017ರಲ್ಲಿ ಭೋಪಾಲ್‌ನಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಅವರು 2 ನಿಮಿಷ 03.89 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು.

ಶುಕ್ರವಾರದ ಫಲಿತಾಂಶಗಳು: ಪುರುಷರ ವಿಭಾಗ: 400 ಮೀಟರ್ಸ್‌ ಫ್ರೀಸ್ಟೈಲ್‌: ಸಾಜನ್‌ ಪ್ರಕಾಶ್‌ (ಕೇರಳ; 3ನಿಮಿಷ 54.93 ಸೆಕೆಂಡು)–1, ಕುಶಾಗ್ರ ರಾವತ್‌ (ದೆಹಲಿ; 3:58.40)–2, ಆರ್ಯನ್‌ ಮಖಿಜಾ (ಎಸ್‌ಎಫ್‌ಐ; 4:01.10)–3.

200 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌: ಶ್ರೀಹರಿ ನಟರಾಜ್‌ (ಕರ್ನಾಟಕ; 2ನಿಮಿಷ 02.37ಸೆಕೆಂಡು)–1, ಟಿ.ಸೇತು ಮಾಣಿಕಾವೇಲ್‌ (2:06.21)–2, ಕೆ.ಅಬ್ಬಾಸುದ್ದೀನ್‌ (2:09.36)–3 (ಇಬ್ಬರೂ ತಮಿಳುನಾಡು).

100 ಮೀಟರ್ಸ್‌ ಬಟರ್‌ಫ್ಲೈ: ಸಾಜನ್‌ ಪ್ರಕಾಶ್‌ (ಕೇರಳ; 53.46ಸೆಕೆಂಡು)–1, ಸುಪ್ರಿಯಾ ಮಂಡಲ್‌ (ಆರ್‌ಎಸ್‌ಪಿಬಿ; 54.70)–2, ಅವಿನಾಶ್‌ ಮಣಿ (ಕರ್ನಾಟಕ; 55.89)–3.

ಮಹಿಳಾ ವಿಭಾಗ: 1500 ಮೀಟರ್ಸ್‌ ಫ್ರೀಸ್ಟೈಲ್‌: ರಿಚಾ ಮಿಶ್ರಾ (ಪೊಲೀಸ್‌; 17ನಿಮಿಷ 41.76ಸೆ.)–1, ಭವಿಕಾ ದುಗಾರ್‌ (ತಮಿಳುನಾಡು; 17:58.31)–2, ಖುಷಿ ದಿನೇಶ್‌ (ಕರ್ನಾಟಕ: 18:03.18)–3.

200 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌: ಮಾನಾ ಪಟೇಲ್‌ (ಗುಜರಾತ್‌: 2ನಿಮಿಷ 20.42 ಸೆಕೆಂಡು)–1, ಸುವನ ಸಿ ಭಾಸ್ಕರ್‌ (ಕರ್ನಾಟಕ; 2:25.01)–2, ಸೌಬ್ರಿತಿ ಮಂಡಲ್‌ (ಬಂಗಾಳ; 2:27.60)–3.

100 ಮೀಟರ್ಸ್‌ ಬಟರ್‌ಫ್ಲೈ: ತ್ರಿಶಾ ಕಾರ್ಖಾನಿಸ್‌ (ಎಸ್‌ಎಫ್‌ಐ; 1:03.62)–1, ದಿವ್ಯಾ ಸತಿಜಾ (ಹರಿಯಾಣ; 1:04.39)–2, ದಾಮಿನಿ ಕೆ.ಗೌಡ (ಕರ್ನಾಟಕ; 1:05.36)–3.

50 ಮೀಟರ್ಸ್‌ ಫ್ರೀಸ್ಟೈಲ್‌: ಕೆನಿಶಾ ಗುಪ್ತಾ (ಎಸ್‌ಎಫ್‌ಐ; 26.92 ಸೆಕೆಂಡು)–1, ದೀಕ್ಷಾ ರಮೇಶ್‌ (ಕರ್ನಾಟಕ; 27.12)–2, ಅವಂತಿಕಾ ಚೌಹಾಣ್‌ (ಆರ್‌ಎಸ್‌ಪಿಬಿ; 27.23)–3.

4X200 ಮೀಟರ್ಸ್‌ ಫ್ರೀಸ್ಟೈಲ್‌ ರಿಲೆ: ಕರ್ನಾಟಕ (9ನಿಮಿಷ 05.55ಸೆಕೆಂಡು)–1, ತಮಿಳುನಾಡು (9:13.67)–2, ಎಸ್‌ಎಫ್‌ಐ (9:15.55)–3.

4X50 ಮೀಟರ್ಸ್‌ ಮಿಶ್ರ ರಿಲೆ: ಎಸ್‌ಎಫ್‌ಐ (1ನಿಮಿಷ 40.00 ಸೆಕೆಂಡು)–1, ಆರ್‌ಎಸ್‌ಪಿಬಿ (1:40.70)–2, ಕರ್ನಾಟಕ (1:42.47)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT