ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ವಾಲಿಬಾಲ್‌: ಸೆಮಿಗೆ ಪಶ್ಚಿಮ ಬಂಗಾಳ, ಮಹಾರಾಷ್ಟ್ರ

ರಾಷ್ಟ್ರಮಟ್ಟದ 19 ವರ್ಷದೊಳಗಿನ ಬಾಲಕಿಯರ ವಾಲಿಬಾಲ್ ಟೂರ್ನಿ
Published 31 ಜನವರಿ 2024, 23:30 IST
Last Updated 31 ಜನವರಿ 2024, 23:30 IST
ಅಕ್ಷರ ಗಾತ್ರ

ಶಿವಮೊಗ್ಗ: ಪಶ್ಚಿಮ ಬಂಗಾಳ, ಮಹಾರಾಷ್ಟ, ಕೇರಳ ಮತ್ತು ಗುಜರಾತ್‌ ತಂಡಗಳು, ಸ್ಕೂಲ್‌ ಗೇಮ್ಸ್ ಫೆಡರೇಷನ್‌ ಆಫ್ ಇಂಡಿಯಾ ಆಶ್ರಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ 19 ವರ್ಷದೊಳಗಿನ ಬಾಲಕಿಯರ ವಾಲಿಬಾಲ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದವು.

ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ನಡೆದ ಮೊದಲ ಕ್ವಾರ್ಟರ್‌ಫೈನಲ್‌ನಲ್ಲಿ ಪಶ್ಚಿಮ ಬಂಗಾಳ 3–0 ಸೆಟ್‌ಗಳಿಂದ (25–17, 25–21, 25–10) ಉತ್ತರ ಪ್ರದೇಶ ತಂಡವನ್ನು ಸೋಲಿಸಿದರೆ, ಮತ್ತೊಂದು ಪಂದ್ಯದಲ್ಲಿ ಮಹಾರಾಷ್ಟ್ರ 16–25, 26–28, 25–19, 25–12 ರಲ್ಲಿ 3–2 ಸೆಟ್‌ಗಳಿಂದ ದೆಹಲಿ ತಂಡದ ಸವಾಲನ್ನು ಪ್ರಯಾಸದಿಂದ ಬದಿಗೊತ್ತಿತು.

ಕೇರಳ ತಂಡವು ಎಂಟರ ಘಟ್ಟದ ಮತ್ತೊಂದು ಪಂದ್ಯದಲ್ಲಿ ತಮಿಳುನಾಡು ಮೇಲೆ 25–20, 23–24, 25–21, 25–17 ರಲ್ಲಿ 3–1 ಸೆಟ್‌ಗಳಿಂದ ಗೆಲುವನ್ನು ದಾಖಲಿಸಿತು. ಇನ್ನೊಂದು ಪಂದ್ಯದಲ್ಲಿ ಗುಜರಾತ್ ತಂಡ 23–25, 25–19, 25–21, 25–13 ರಾಜಸ್ಥಾನ ತಂಡವನ್ನು ಸೋಲಿಸಿತು.

ಸೆಮಿಫೈನಲ್ಸ್‌  ಹಾಗೂ ಫೈನಲ್ ಪಂದ್ಯ ಗುರುವಾರ ನಡೆಯಲಿವೆ.

ಅತಿಥೇಯರಿಗೆ ನಿರಾಸೆ: ಇದಕ್ಕೆ ಮೊದಲು ಕರ್ನಾಟಕ ತಂಡ ತೀವ್ರ ಹೋರಾಟದ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 2–3 ಸೆಟ್‌ ಅಂತರದಲ್ಲಿ ತಮಿಳುನಾಡು ತಂಡಕ್ಕೆ ಮಣಿದಿತ್ತು. ತಮಿಳುನಾಡು ಬಾಲಕಿಯರು 25–21, 19–25, 25–17, 22–25, 15–11 ರಿಂದ ಜಯಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT