ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Athlete Of The Year: ಪ್ರಶಸ್ತಿ ರೇಸ್‌ನಲ್ಲಿ ನೀರಜ್ ಚೋಪ್ರಾ

Published 13 ಅಕ್ಟೋಬರ್ 2023, 2:42 IST
Last Updated 13 ಅಕ್ಟೋಬರ್ 2023, 2:42 IST
ಅಕ್ಷರ ಗಾತ್ರ

ನವದೆಹಲಿ: ಒಲಿಂಪಿಕ್ ಚಿನ್ನದ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ, 'ವರ್ಷದ ವಿಶ್ವ ಶ್ರೇಷ್ಠ ಅಥ್ಲೀಟ್' (World Athlete Of The Year) ಪ್ರಶಸ್ತಿಗೆ ನಾಮನಿರ್ದೇಶನ ಪಡೆದಿದ್ದಾರೆ.

ವಿಶ್ವ ಅಥ್ಲೆಟಿಕ್ಸ್‌ನ ಎಲ್ಲ ಆರು ಖಂಡಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ಅಥ್ಲಿಟಿಕ್ ತಜ್ಞರ ಅಂತರರಾಷ್ಟ್ರೀಯ ಸಮಿತಿಯು 11 ಕ್ರೀಡಾಪಟುಗಳ ಹೆಸರುಗಳನ್ನು ಅಂತಿಮಗೊಳಿಸಿದೆ.

ಡಿಸೆಂಬರ್ 11ರಂದು ಪ್ರಶಸ್ತಿ ವಿಜೇತ ಅಥ್ಲೀಟ್‌ನ ಹೆಸರು ಪ್ರಕಟವಾಗಲಿದೆ.

ಆಯ್ಕೆ ಪ್ರಕ್ರಿಯೆ...

ಮೂರು ಹಂತಗಳಲ್ಲಿ ಪ್ರಶಸ್ತಿ ವಿಜೇತರನ್ನು ನಿರ್ಧರಿಸಲಾಗುವುದು. ವಿಶ್ವ ಅಥ್ಲೆಟಿಕ್ ಕೌನ್ಸಿಲ್ ಮತ್ತು ವಿಶ್ವ ಅಥ್ಲೆಟಿಕ್ಸ್ ಫ್ಯಾಮಿಲಿ ಇಮೇಲ್ ಮೂಲಕ ತಮ್ಮ ಮತವನ್ನು ಹಾಕಲಿದೆ. ಅಭಿಮಾನಿಗಳು ವಿಶ್ವ ಅಥ್ಲೆಟಿಕ್ಸ್ ಸಾಮಾಜಿಕ ಮಾಧ್ಯಮ ಪುಟಗಳ ಮೂಲಕ ಆನ್‌ಲೈನ್ ಆಗಿ ಮತ ಚಲಾಯಿಸಬಹುದಾಗಿದೆ.

ನಾಮನಿರ್ದೇಶನ ಪಡೆದ 11 ಅಥ್ಲೀಟ್‌ಗಳು:

1. ನೀರಜ್ ಚೋಪ್ರಾ (ಭಾರತ, ಜಾವೆಲಿನ್ ಥ್ರೋ )

2. ರೈನ್ ಕ್ರೌಸರ್ (ಅಮೆರಿಕ, ಶಾಟ್‌ಪಟ್ )

3. ಮೊಂಡೊ ಡುಪ್ಲಾಂಟಿಸ್ (ಸ್ವೀಡನ್, ಪೋಲ್‌ವಾಲ್ಟ್)

4. ಸೂಫಿಯನ್ ಎಲ್ ಬಕಾಲಿ (ಮೊರಾಕ್ಕೊ, 3000ಮೀ. ಸ್ಟೀಪಲ್‌ಚೇಸ್‌

5. ಜಾಕೋಬ್ ಇಂಗೆಬ್ರಿಗ್ಟ್ಸೆನ್ (ನಾರ್ವೆ, 1500ಮೀ./5000ಮೀ.)

6. ಕೆಲ್ವಿನ್ ಕಿಪ್ಟಮ್ (ಕೀನ್ಯಾ, ಮ್ಯಾರಥಾನ್‌)

7. ಪಿಯರ್ಸ್ ಲೆಪೇಜ್ (ಕೆನಡಾ, ಡೆಕಾಥ್ಲಾನ್‌)

8. ನೋವಾ ಲೈಲ್ಸ್ (ಅಮೆರಿಕ, ಓಟ)

9. ಅಲ್ವರೊ ಮಾರ್ಟಿನ್ (ಸ್ಪೇನ್, ರೇಸ್ ವಾಲ್ಕ್)

10. ಮಿಲ್ಟಿಯಾಡಿಸ್ ಟೆಂಟೊಗ್ಲೋ (ಗ್ರೀಸ್, ಲಾಂಗ್‌ಜಂಪ್)

11. ಕಾರ್ಸ್ಟನ್ ವಾರ್ಹೊಲ್ಮ್ (ನಾರ್ವೆ, 400 ಮೀ. ಹರ್ಡಲ್ಸ್)

ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸಾಧಿಸಿದ ಅತ್ಯುತ್ತಮ ಪ್ರದರ್ಶನವನ್ನು ಈ ನಾಮನಿರ್ದೇಶನದಲ್ಲಿ ಪರಿಗಣಿಸಲಾಗುತ್ತದೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚಿನ್ನ ಸಾಧನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT