ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೈಮಂಡ್‌ ಲೀಗ್‌: ಸ್ವರ್ಣ ಪದಕದ ಮೇಲೆ ನೀರಜ್ ಕಣ್ಣು

Last Updated 14 ಏಪ್ರಿಲ್ 2023, 4:14 IST
ಅಕ್ಷರ ಗಾತ್ರ

ನವದೆಹಲಿ: ದೋಹಾದಲ್ಲಿ ಮೇ 5ರಂದು ನಡೆಯಲಿರುವ ಡೈಮಂಡ್‌ ಲೀಗ್‌ ಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಭಾರತದ ಜಾವೆಲಿನ್‌ ತಾರೆ ನೀರಜ್‌ ಚೋಪ್ರಾ ಅವರು ಸ್ಪರ್ಧಾ ಋತುವನ್ನು ಆರಂಭಿಸಲಿದ್ದಾರೆ. ವಿಶ್ವದ ಪ್ರಮುಖ ಜಾವೆಲಿನ್‌ ಸ್ಪರ್ಧಿಗಳು ಈ ಕಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಒಲಿಂಪಿಕ್‌ ಸ್ವರ್ಣ ವಿಜೇತ ರಾಗಿರುವ, 25 ವರ್ಷದ ಚೋ‍ಪ್ರಾ, ಡೈಮಂಡ್‌ ಲೀಗ್‌ನ ಹಾಲಿ ಚಾಂಪಿ ಯನ್‌ ಕೂಡ. ಜ್ಯೂರಿಚ್‌ನಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಗ್ರ್ಯಾಂಡ್‌ ಫಿನಾಲೆಯಲ್ಲಿ ಅವರು ಚಿನ್ನದ ಪದಕ ಜಯಿಸಿದ್ದರು.

ಡೈಮಂಡ್‌ ಲೀಗ್‌ 14 ಕೂಟಗಳನ್ನು ಹೊಂದಿದ್ದು, ಮೊದಲನೆಯದು ಕತಾರ್‌ ರಾಜಧಾನಿ ದೋಹಾದಲ್ಲಿ ನಡೆಯಲಿದೆ. ಅಮೆರಿಕದ ಯುಜಿನ್‌ನಲ್ಲಿ ಸೆ. 16 ಮತ್ತು 17ರಂದು ಕೊನೆಯ ಕೂಟ ನಿಗದಿಯಾಗಿದೆ. ಚೋಪ್ರಾ ಜೊತೆ, ವಿಶ್ವ ಚಾಂಪಿ ಯನ್‌ ಆ್ಯಂಡರ್ಸನ್‌ ಪೀಟರ್‌ (ಗ್ರೆನೇಡಾ), ಒಲಿಂಪಿಕ್‌ ಬೆಳ್ಳಿ ವಿಜೇತ ಜಾಕುಬ್‌ ವಡ್ಲೇಚ್‌ (ಜೆಕ್‌ ರಿಪಬ್ಲಿಕ್‌) ಕೂಡ ಕಣಕ್ಕಿಳಿಯಲಿದ್ದಾರೆ.

ಸ್ಟಾಕ್‌ಹೋಮ್‌ನಲ್ಲಿ ನಡೆದ ಕಳೆದ ವರ್ಷದ ಡೈಮಂಡ್‌ ಲೀಗ್‌ನಲ್ಲಿ ಎರಡನೇ ಸ್ಥಾನ ಪಡೆಯುವಾಗ ಸಾಧಿಸಿದ 89.94 ಮೀಟರ್‌ಗಳ ದೂರ, ಚೋಪ್ರಾ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ಚೋಪ್ರಾ ಪ್ರಸ್ತುತ ಟರ್ಕಿಯಲ್ಲಿ ತರಬೇತಿ ಪಡೆಯುತ್ತಿದ್ದು, ಮೇ 31ರವರೆಗೆ ಅಲ್ಲಿ ಇರಲಿದ್ದಾರೆ.

ಗಾಯಾಳಾಗಿದ್ದ ಕಾರಣ ಭಾರತದ ಸೂಪರ್‌ಸ್ಟಾರ್‌ ಅಥ್ಲೀಟ್‌, 2022ರ ದೋಹಾ ಡೈಮಂಡ್‌ ಲೀಗ್‌ ಕೂಟದಲ್ಲಿ ಕಣಕ್ಕಿಳಿದಿರಲಿಲ್ಲ. ಆ ಕೂಟದಲ್ಲಿ ಗ್ರೆನೇಡಾದ ಪೀಟರ್ಸ್‌ ಅವರು ಜಾವೆಲಿನ್‌ಅನ್ನು 93.07 ಮೀ. ದೂರಕ್ಕೆಸೆದು ವಿಜಯಿಯಾಗಿದ್ದರು. ಇದು ಇತಿಹಾಸದಲ್ಲಿ ಇದು ಐದನೇ ಅತಿ ಶ್ರೇಷ್ಠ ಸಾಧನೆ.

90 ಮೀ. ದಾಟುವ ಗುರಿ: ಚೋಪ್ರಾ ಅವರ ಮುಂದಿನ ಗುರಿ 90 ಮೀ. ದಾಟುವ ಸಾಧನೆ ದಾಖಲಿಸುವುದು. ‘ನಾನೂ 90 ಮೀ. ಮಾರ್ಕ್‌ ಹತ್ತಿರದಲ್ಲಿದ್ದೇನೆ. ಈ ಮೈಲಿಗಲ್ಲು ದಾಟುವುದು ನನಗೆ ತುಂಬಾ ಮಹತ್ವದ್ದು’ ಎನ್ನುತ್ತಾರೆ ನೀರಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT