ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ.25, 26 ರಂದು ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು

Published 12 ಅಕ್ಟೋಬರ್ 2023, 16:17 IST
Last Updated 12 ಅಕ್ಟೋಬರ್ 2023, 16:17 IST
ಅಕ್ಷರ ಗಾತ್ರ

ಬೆಂಗಳೂರು: ನೆಟ್ಟಕಲ್ಲಪ್ಪ ಈಜು ಕೇಂದ್ರದ (ಎನ್‌ಎಸಿ) ಆಶ್ರಯದಲ್ಲಿ ನ.25 ಮತ್ತು 26 ರಂದು ‘ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್‌ಷಿಪ್’ ಆಯೋಜಿಸಲಾಗಿದೆ.

ಬೆಂಗಳೂರಿನ ಉತ್ತರಹಳ್ಳಿ ಮುಖ್ಯರಸ್ತೆ, ಪದ್ಮನಾಭನಗರದಲ್ಲಿರುವ ಈಜು ಕೇಂದ್ರದಲ್ಲಿ ನಡೆಯುವ ಕೂಟದಲ್ಲಿ ಬಾಲಕ ಮತ್ತು ಬಾಲಕಿಯರಿಗೆ 12 ರಿಂದ 14 ವರ್ಷ (ಗುಂಪು 2), 15 ರಿಂದ 17 ವರ್ಷ (ಗುಂ‍‍ಪು 1) ಹಾಗೂ 18 ವರ್ಷಕ್ಕಿಂತ ಮೇಲಿನ (ಸೀನಿಯರ್‌) ವಯೋವರ್ಗಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

100 ಮೀ. ಮತ್ತು 400 ಮೀ. ಫ್ರೀಸ್ಟೈಲ್, 100 ಮೀ. ಬ್ಯಾಕ್‌ಸ್ಟ್ರೋಕ್, 100 ಮೀ. ಬ್ರೆಸ್ಟ್‌ಸ್ಟ್ರೋಕ್, 100 ಮೀ. ಬಟರ್‌ಫ್ಲೈ ಮತ್ತು 200 ಮೀ. ವೈಯಕ್ತಿಕ ಮೆಡ್ಲೆ ವಿಭಾಗದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

50 ಮೀ. ವಿಭಾಗದ ಎಲ್ಲ ಸ್ಪರ್ಧೆಗಳು ಯೂರೋಪ್‌ ಮತ್ತು ಅಮೆರಿಕದಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ‘ಸ್ಕಿನ್ಸ್‌’ ಮಾದರಿಯಲ್ಲಿ ಏರ್ಪಡಿಸಲಾಗಿದೆ.

ಚಾಂಪಿಯನ್‌ಷಿಪ್‌ ಒಟ್ಟು ₹ 10 ಲಕ್ಷ ಬಹುಮಾನ ಮೊತ್ತ ಒಳಗೊಂಡಿದೆ. ‍ಪ್ರತಿ ವಿಭಾಗಗಳಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆಯುವವರು ಕ್ರಮವಾಗಿ ತಲಾ ₹ 10 ಸಾವಿರ, ₹ 7 ಸಾವಿರ ಹಾಗೂ ₹ 5 ಸಾವಿರ ನಗದು ಬಹುಮಾನ ಗಳಿಸಲಿದ್ದಾರೆ.

ಸ್ಕಿನ್ಸ್‌ ವಿಭಾಗದಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆಯುವವರಿಗೆ ಕ್ರಮವಾಗಿ ₹ 6 ಸಾವಿರ, ₹ 4 ಸಾವಿರ ಮತ್ತು ₹ 3 ಸಾವಿರ ನಗದು ಬಹುಮಾನ ಲಭಿಸಲಿದೆ. ಈ ವಿಭಾಗದಲ್ಲಿ ಮೊದಲ ಎಂಟು ಸ್ಥಾನಗಳನ್ನು ಪಡೆಯುವವರಿಗೆ ನಗದು ಬಹುಮಾನ ನೀಡಲಾಗುವುದು.

ನೆಟ್ಟಕಲ್ಲಪ್ಪ ಈಜು ಕೇಂದ್ರದ ದಶಮಾನೋತ್ಸವ ಆಚರಣೆ ಅಂಗವಾಗಿ ಕಳೆದ ವರ್ಷ ಮೊದಲ ಬಾರಿ ಅಖಿಲ ಭಾರತ ಚಾಂಪಿಯನ್‌ಷಿಪ್‌ ಆಯೋಜಿಸಲಾಗಿತ್ತು. ಈ ಬಾರಿ ಎರಡನೇ ಆವೃತ್ತಿಯ ಕೂಟ ನಡೆಯಲಿದೆ.

ಆಸಕ್ತರು ನ.19ರ ಒಳಗಾಗಿ ವೆಬ್‌ಸೈಟ್‌: https://pages.razorpay.com/naisc-23 ಮೂಲಕ ಹೆಸರು ನೋಂದಾಯಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT