ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷಾಟ್‌ಪಟ್‌: ವಿಶ್ವದಾಖಲೆ ಉತ್ತಮಪಡಿಸಿಕೊಂಡ ಕ್ರೋಸರ್

Published 28 ಮೇ 2023, 21:51 IST
Last Updated 28 ಮೇ 2023, 21:51 IST
ಅಕ್ಷರ ಗಾತ್ರ

ಲಾಸ್‌ ಏಂಜಲೀಸ್‌: ಒಲಿಂಪಿಕ್ಸ್‌ ಮತ್ತು ವಿಶ್ವಚಾಂಪಿಯನ್‌ ಷಾಟ್‌ಪಟ್‌ ಸ್ಪರ್ಧಿ ಅಮೆರಿಕದ ರಯಾನ್‌ ಕ್ರೋಸರ್‌ ಅವರು ತಮ್ಮದೇ ಹೆಸರಲ್ಲಿದ್ದ ವಿಶ್ವದಾಖಲೆಯನ್ನು ಉತ್ತಮಪಡಿಸಿಕೊಂಡರು.

ಶನಿವಾರ ನಡೆದ ಲಾಸ್‌ ಏಂಜಲೀಸ್‌ ಗ್ರ್ಯಾನ್‌ ಪ್ರಿ ಅಥ್ಲೆಟಿಕ್‌ ಕೂಟದಲ್ಲಿ ಅವರು 23.56 ಮೀ. ಸಾಧನೆ ಮಾಡಿದರು. 2021 ರಲ್ಲಿ ಒಲಿಂಪಿಕ್ಸ್‌ ಟ್ರಯಲ್ಸ್‌ ವೇಳೆ 23.37 ಮೀ. ದೂರ ಎಸೆದದ್ದು ಇದುವರೆಗಿನ ದಾಖಲೆಯಾಗಿತ್ತು. ಅದನ್ನು 19 ಸೆಂ.ಮೀ. ನಷ್ಟು ಉತ್ತಮಪಡಿಸಿಕೊಂಡರು.

30 ವರ್ಷದ ಕ್ರೋಸರ್‌ ಅವರು 2016 ಮತ್ತು 2020ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದರಲ್ಲದೆ, ಕಳೆದ ವರ್ಷ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಅಗ್ರಸ್ಥಾನ ತಮ್ಮದಾಗಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT