ಅಥೆನ್ಸ್: ಟೋಕಿಯೊ ಒಲಿಂಪಿಕ್ಸ್‌ನ ಜ್ಯೋತಿ ಹಸ್ತಾಂತರ ಕಾರ್ಯಕ್ರಮ ಮುಂದಿನ ವಾರ ಅಥೆನ್ಸ್‌ನಲ್ಲಿ, ಖಾಲಿ ಮೈದಾನದಲ್ಲಿ ನಡೆಯಲಿದೆ ಎಂದು ಗ್ರೀಸ್ ಒಲಿಂಪಿಕ್ ಸಮಿತಿ ಭಾನುವಾರ ತಿಳಿಸಿದೆ.

ಪುರಾತನ ಇಲಿಂಪಿಯಾದಲ್ಲಿ ಜ್ಯೋತಿ ಪ್ರಜ್ವಲನ ಕಾರ್ಯಕ್ರಮ ಶುಕ್ರವಾರ ನಡೆದಿತ್ತು. ಆದರೆ ಜ್ಯೋತಿಯ ರಿಲೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. ಮಾರ್ಚ್ 19ರ ಗುರುವಾರ ಸೆಂಟ್ರಲ್ ಅಥೆನ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ಜ್ಯೋತಿ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ಆದರೆ ಇದಕ್ಕೆ ಯಾರಿಗೂ ಪ್ರವೇಶ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 1896ರ ಒಲಿಂಪಿಕ್ಸ್ ಕೂಟ ನಡೆದ ಈ ಕ್ರೀಡಾಂಗಣದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರೂ ಸಾವಿರಾರು ಮಂದಿ ಸೇರುತ್ತಾರೆ.

ಗ್ರೀಸ್‌ನಲ್ಲಿ ಕೋವಿಡ್ ಸೊಂಕಿಗೆ ಈ ವರೆಗೆ ಮೂರು ಬಲಿಯಾಗಿದ್ದು 228 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.