ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೊ ಕಬಡ್ಡಿ ಲೀಗ್‌ ಹರಾಜು ಪ್ರಕ್ರಿಯೆ: ಪವನ್‌, ಪ್ರದೀಪ್‌ ನರ್ವಾಲ್‌ ಲಭ್ಯ

15, 16ರಂದು ಪಿಕೆಎಲ್‌ 11ನೇ ಆವೃತ್ತಿಗೆ ಹರಾಜು
Published 6 ಆಗಸ್ಟ್ 2024, 14:04 IST
Last Updated 6 ಆಗಸ್ಟ್ 2024, 14:04 IST
ಅಕ್ಷರ ಗಾತ್ರ

ಮುಂಬೈ: ಏಷ್ಯನ್ ಗೇಮ್ಸ್ ತಂಡದಲ್ಲಿದ್ದ ಅನುಭವಿ ಪವನ್‌ ಸೆಹ್ರಾವತ್‌ ಮತ್ತು ಪ್ರದೀಪ್‌ ನರ್ವಾಲ್‌ ಅವರು ಪ್ರೊ ಕಬಡ್ಡಿ ಲೀಗ್‌ನ (ಪಿಕೆಎಲ್‌) 11ನೇ ಆವೃತ್ತಿಗೆ ಮೊದಲಿನ ಹರಾಜಿಗೆ ಲಭ್ಯರಿರುವ ಆಟಗಾರರಲ್ಲಿ ಪ್ರಮುಖರಾಗಿದ್ದಾರೆ.

ಹರಾಜು ಪ್ರಕ್ರಿಯೆ ಇಲ್ಲಿ ಇದೇ ತಿಂಗಳ 15 ಮತ್ತು 16ರಂದು ನಡೆಯಲಿದೆ. ಫ್ರಾಂಚೈಸಿಗಳು 88 ಆಟಗಾರರನ್ನು ಉಳಿಸಿಕೊಂಡಿವೆ. ಉಳಿಸಿಕೊಂಡವರಲ್ಲಿ ಪ್ರಮುಖ ರೈಡರ್‌ಗಳಾದ ಆಶು ಮಲಿಕ್ ಮತ್ತು ನವೀನ್ ಕುಮಾರ್ ಒಳಗೊಂಡಿದ್ದಾರೆ. ಅವರನ್ನು ದಬಾಗ್ ಡೆಲ್ಲಿ ಕೆ.ಸಿ. ತಂಡ ಉಳಿಸಿಕೊಂಡಿದೆ.

ಪುಣೇರಿ ಪಲ್ಟನ್‌ ತಂಡ 10ನೇ ಸೀಸನ್‌ನ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿಗೆ ಪಾತ್ರರಾಗಿದ್ದ ಅಸ್ಲಂ ಇನಾಮದರ್ ಅವರನ್ನು ಉಳಿಸಿಕೊಂಡಿದೆ. ಜೈಪುರ್‌ ಪಿಂಕ್‌ ಪ್ಯಾಂಥರ್ಸ್‌ ತನ್ನ ಸ್ಟಾರ್‌ ರೈಡರ್‌ ಅರ್ಜುನ್‌ ದೇಶ್ವಾಲ್ ಅವರನ್ನು ಉಳಿಸಿಕೊಂಡಿದೆ.

ತಂಡಗಳು ಉಳಿಸಿಕೊಂಡ 88 ಆಟಗಾರರಲ್ಲಿ 22 ಮಂದಿ ಎಲೈಟ್‌ ರಿಟೇನ್ಡ್‌ ಕೆಟಗರಿಗೆ (ಇಆರ್‌ಪಿ) ಸೇರಿದ್ದಾರೆ. 26 ಮಂದಿ ರಿಟೇನ್ಡ್‌ ಯಂಗ್‌ ಪ್ಲೇಯರ್ಸ್‌ (ಆರ್‌ವೈಪಿ) ವಿಭಾಗಕ್ಕೆ ಸೇರಿದ್ದಾರೆ. ಉಳಿದ 40 ಮಂದಿ ಎಕ್ಸಿಸ್ಟಿಂಗ್‌ ನ್ಯೂ ಯಂಗ್‌ ಪ್ಲೇಯರ್ಸ್ (ಇಎನ್‌ವೈಪಿ) ಕೆಟಗರಿಯಲ್ಲಿದ್ದಾರೆ.

ಈ ಬಾರಿ ಉಳಿಸಿಕೊಳ್ಳದ ಆಟಗಾರರ ಯಾದಿಯಲ್ಲಿ ಮಣಿಂದರ್ ಸಿಂಗ್, ಫಜಲ್‌ ಅತ್ರಾಚಲಿ ಮತ್ತು ಮೊಹಮದ್‌ರೇಝಾ ಶಾಡ್ಲುಯಿ ಚಿಯೆನಾ ಒಳಗೊಂಡಿದ್ದಾರೆ.

ದೇಶಿಯ ಮತ್ತು ವಿದೇಶಿ ಆಟಗಾರರನ್ನು ‘ಎ’, ‘ಬಿ’, ‘ಸಿ’ ಮತ್ತು ‘ಡಿ’ ಎಂದು ವರ್ಗೀಕರಿಸಲಾಗಿದೆ. ಇವರನ್ನು ಮತ್ತೆ ಆಲ್‌ರೌಂಡರ್ಸ್‌, ಡಿಫೆಂಡರ್ಸ್ ಮತ್ತು ರೈಡರ್ಸ್ ಎಂದೂ ವಿಂಗಡಿಸಲಾಗಿದೆ.

‘ಎ’ ಕೆಟಗರಿಯಲ್ಲಿರುವ ಆಟಗಾರರ ಮೂಲ ಬೆಲೆ ₹30 ಲಕ್ಷ, ‘ಬಿ’ ಕೆಟಗರಿಯಲ್ಲಿರುವ ಆಟಗಾರರ ಮೂಲ ಬೆಲೆ ₹20 ಲಕ್ಷ ಮತ್ತು ‘ಸಿ’ ಕೆಟಗರಿಯಲ್ಲಿರುವ ಆಟಗಾರರ ಮೂಲಬೆಲೆ ₹13 ಲಕ್ಷದಿಂದ ಶುರುವಾಗಲಿದೆ. ‘ಡಿ’ ವಿಭಾಗದಲ್ಲಿರುವ ಆಟಗಾರರ ಮೂಲಬೆಲೆ ₹9ಲಕ್ಷದಿಂದ ಆರಂಭವಾಗುತ್ತದೆ.

500ಕ್ಕೂ ಹೆಚ್ಚು ಖರೀದಿ ಪ್ರಕ್ರಿಯೆಗೆ ಲಭ್ಯರಿದ್ದಾರೆ. ತಂಡವೊಂದು ಆಟಗಾರರನ್ನು ಪಡೆಯಲು ಒಟ್ಟು ₹5 ಕೋಟಿಯವರೆಗೆ ತೊಡಗಿಸಲು ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT