ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟ ಪುಣೇರಿ ಪಲ್ಟನ್

ಗೆಲುವಿನೊಂದಿಗೆ ಅಭಿಯಾನ ಮುಗಿಸಿದ ಬೆಂಗಳೂರು ಬುಲ್ಸ್
Published 21 ಫೆಬ್ರುವರಿ 2024, 20:08 IST
Last Updated 21 ಫೆಬ್ರುವರಿ 2024, 20:08 IST
ಅಕ್ಷರ ಗಾತ್ರ

ಪಂಚಕುಲಾ: ಪಂಕಜ್ ಮೋಹಿತೆ ಅವರ ಮಿಂಚಿನ ದಾಳಿಯ ಬಲದಿಂದ ಪುಣೇರಿ ಪಲ್ಟನ್ ತಂಡವು ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಯುಪಿ ಯೋಧಾಸ್ ವಿರುದ್ಧ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಪುಣೇರಿ ಪಲ್ಟನ್ ತಂಡವು 40–38ರಿಂದ ಯುಪಿ ಯೋಧಾಸ್ ಎದುರು ಜಯಿಸಿತು. ಇದರೊಂದಿಗೆ ನೇರವಾಗಿ ಸೆಮಿಫೈನಲ್‌ ಪ್ರವೇಶಿಸಿತು. ಜೈಪುರ್ ಪಿಂಕ್ ಪ್ಯಾಂಥರ್ಸ್ ಕೂಡ ಈಗಾಗಲೇ ಸೆಮಿ ಹಂತಕ್ಕೆ ಪ್ರವೇಶಿಸಿದೆ.

ಉಭಯ ತಂಡಗಳ ನಡುವಣ ನಡೆದ ರೋಚಕ ಹಣಾಹಣಿಯಲ್ಲಿ ಪುಣೇರಿ ತಂಡವು ಮೊದಲಾರ್ಧದಲ್ಲಿ 15–28ರಿಂದ ಹಿಂದೆ ಇತ್ತು. 13 ಅಂಕಗಳ ವ್ಯತ್ಯಾಸವನ್ನು ಮೀರಿ ನಿಂತು ಜಯಿಸುವಲ್ಲಿ ಪುಣೇರಿ ಸಫಲವಾಯಿತು.  ಅದಕ್ಕೆ ಕಾರಣವಾಗಿದ್ದು ರೇಡರ್ ಪಂಕಜ್ ಮೋಹಿತೆ ಅವರ ಮಿಂಚಿನ ದಾಳಿ. ಅವರು 12 ಅಂಕಗಳನ್ನು ಗಳಿಸಿದರು. ಯು‍ಪಿ ಯೋಧಾ ತಂಡದ ಗಗನ್ ಗೌಡ ಕೂಡ 16 ಅಂಕ ಗಳಿಸಿದರು.

ಸುಶೀಲ್ ಸಂಘಟಿಸಿದ ಮಿಂಚಿನ ದಾಳಿಯ ಬಲದಿಂದ ಬೆಂಗಳೂರು ಬುಲ್ಸ್ ತಂಡವು  ಇನ್ನೊಂದು ಪಂದ್ಯದಲ್ಲಿ ಜಯಭೇರಿ ಬಾರಿಸಿತು. ಬೆಂಗಳೂರು ತಂಡವು 53–39ರಿಂದ ಹರಿಯಾಣ ಸ್ಟೀಲರ್ಸ್‌ ವಿರುದ್ಧ ಜಯಿಸಿತು. ಆದರೆ ‍ಪ್ಲೇ ಆಫ್‌ ಹಂತಕ್ಕೆ ಪ್ರವೇಶಿಸುವಲ್ಲಿ ವಿಫಲವಾಯಿತು.

ಸುಶೀಲ್ 22 ಅಂಕಗಳನ್ನು ಗಳಿಸಿ ತಂಡದ ಜಯದ ರೂವಾರಿಯಾದರು. ಲೆಫ್ಟ್‌ ರೇಡಿಂಗ್‌ನಲ್ಲಿ ಮಿಂಚಿದ ಅಕ್ಷಿತ್ ಎಂಟು ಅಂಕ ಗಳಿಸಿದರು. ಹರಿಯಾಣ ತಂಡದ ತೇಜಸ್ ಪಾಟೀಲ ಅವರೂ 11 ಅಂಕ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT