ನವದೆಹಲಿ: ನಿರೀಕ್ಷೆಗಳ ಕುರಿತು ತಲೆಕೆಡಿಸಿಕೊಳ್ಳಬೇಡಿ, ಸಾಧ್ಯವಾದಷ್ಟು ಶ್ರೇಷ್ಠ ಸಾಮರ್ಥ್ಯ ಹೊರಹೊಮ್ಮಿಸುವತ್ತ ಚಿತ್ತ ಹರಿಸಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಅಥ್ಲೀಟ್‌ಗಳಿಗೆ ಕರೆ ನೀಡಿದರು.

ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಕ್ರೀಡಾಪಟುಗಳೊಂದಿಗೆ ಮಂಗಳವಾರ ಅವರು ವರ್ಚುವಲ್ ಸಂವಾದ ನಡೆಸಿದರು. ಅಥ್ಲೀಟ್‌ಗಳ ಹೋರಾಟದ ಹಾದಿ, ತ್ಯಾಗ, ಧೈರ್ಯ ಈ ಚರ್ಚೆಯ ಸಾರವಾಗಿದ್ದವು.

ಮಹಿಳಾ ಬಾಕ್ಸಿಂಗ್ ತಾರೆ ಎಂ.ಸಿ. ಮೇರಿ ಕೋಮ್, ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು, ಪ್ರತಿಭಾವಂತ ಶೂಟಿಂಗ್ ಪಟುಗಳಾದ ಸೌರಭ್ ಚೌಧರಿ, ಇಳವೆನ್ನಿಲ ವಾಳರಿವನ್ ಹಾಗೂ ಅನುಭವಿ ಟೆನಿಸ್ ಟೇಬಲ್ ಟೆನಿಸ್ ಪಟು ಅಚಂತ ಶರತ್ ಕಮಲ್ ಸೇರಿದಂತೆ ಹಲವರ ಜೊತೆ ಮೋದಿ ಮಾತನಾಡಿದರು.

ಸರ್ಕಾರದ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಯ (ಟಾಪ್ಸ್) ಮೂಲಕ ಅಥ್ಲೀಟ್‌ಗಳಿಗೆ ನೀಡುವ ನೆರವನ್ನು ವಿಸ್ತರಿಸಲಾಗಿದೆ ಎಂದು ಇದೇ ವೇಳೆ ಮೋದಿ ತಿಳಿಸಿದರು.

ಟೋಕಿಯೊ ಕೂಟಕ್ಕೆ ಅಥ್ಲೀಟ್‌ಗಳು ನಡೆಸಿದ ಪೂರ್ವಸಿದ್ಧತೆ, ಯಶಸ್ಸಿನ ಕಥೆಗಳು, ಕೆಲವೊಂದು ಮೋಜಿನ ಪ್ರಶ್ನೆಗಳೂ ಸಂವಾದದ ಭಾಗವಾಗಿದ್ದವು.

ನೂತನವಾಗಿ ನೇಮಕಗೊಂಡಿರುವ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಕ್ರೀಡಾ ಖಾತೆಯ ರಾಜ್ಯ ಸಚಿವ ನಿಶಿತ್ ಪ್ರಾಮಾಣಿಕ್, ಕಾನೂನು ಮಂತ್ರಿ ಮತ್ತು ಈ ಹಿಂದಿ ಕ್ರೀಡಾ ಸಚಿವ ಕಿರಣ್ ರಿಜಿಜು ಮತ್ತಿತರರು ಸಂವಾದದಲ್ಲಿ ಭಾಗವಹಿಸಿದ್ದರು.

ಈ ಬಾರಿ ಏನಾದರೂ ನಿಷೇಧವಿದೆಯೇ?: ‘2016ರ ಒಲಿಂಪಿಕ್ಸ್‌ನಲ್ಲಿ ಐಸ್‌ಕ್ರೀಮ್ ತಿನ್ನಬಾರದೆಂದು ನಿಮ್ಮ ಮೇಲೆ ನಿರ್ಬಂಧವಿತ್ತು. ಈ ಬಾರಿ ಏನಾದರೂ ನಿಷೇಧವಿದೆಯೇ‘ ಎಂದು ಮೋದಿ ಅವರು ಪಿ.ವಿ.ಸಿಂಧು ಅವರಿಗೆ ಮೋಜಿನ ಪ್ರಶ್ನೆ ಎಸೆದರು.

ಇದಕ್ಕೆ ಉತ್ತರಿಸಿದ ಬ್ಯಾಡ್ಮಿಂಟನ್ ಆಟಗಾರ್ತಿ ‘ಸರ್, ನಾನು ಡಯಟ್ ಕುರಿತು ಕಾಳಜಿ ವಹಿಸಿದ್ದೇನೆ‘ ಎಂದರು.

ನಿಮ್ಮ ನೆಚ್ಚಿನ ಅಥ್ಲೀಟ್ ಮತ್ತು ಎದುರಾಳಿಗಳಿಗೆ ನೀವು ನೀಡುವ ಫೇವರೀಟ್ ಹೊಡೆತ ಯಾವುದು ಎಂಬ ಪ್ರಧಾನಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಾಕ್ಸರ್ ಮೇರಿ ಕೋಮ್‘ ‘ಮೊಹಮ್ಮದ್ ಅಲಿ ಮತ್ತು ಹುಕ್‘ ಎಂದು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.