ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೋಪಿಂಗ್: ಸಂದೀಪ್ ಕೌರ್ ಅಮಾನತು

Published 5 ಜೂನ್ 2024, 16:23 IST
Last Updated 5 ಜೂನ್ 2024, 16:23 IST
ಅಕ್ಷರ ಗಾತ್ರ

ನವದೆಹಲಿ: ನಿಷೇಧಿತ ಉದ್ದೀಪನ ಮದ್ದು ಸೇವಿಸಿದ್ದರೆನ್ನಲಾದ  ಪವರ್‌ಲಿಫ್ಟರ್ ಸಂದೀಪ್ ಕೌರ್ ಅವರನ್ನು 10 ವರ್ಷ ಅಮಾನತು ಮಾಡಿರುವ ನಾಡಾ (ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ) ಶಿಸ್ತು ಸಮಿತಿಯ ಆದೇಶ ಹೊರಡಿಸಿದೆ.

ಭಾರತದ ಕ್ರೀಡಾ ಇತಿಹಾಸದಲ್ಲಿ ಉದ್ದೀಪನ ಮದ್ದು ಸೇವನೆಗಾಗಿ ಪ್ರಕಟಿಸಲಾದ ದೀರ್ಘ ಅವಧಿಯ ಶಿಕ್ಷೆ ಪ್ರಕರಣಗಳಲ್ಲಿ ಇದೂ ಒಂದಾಗಿದೆ. 

ಪಂಜಾಬ್ ರಾಜ್ಯದ 31 ವರ್ಷದ ಸಂದೀಪ್ ಅವರು ಎರಡನೇ ಬಾರಿ ಸಿಕ್ಕಿ ಹಾಕಿಕೊಂಡ ಪ್ರಕರಣ ಇದಾಗಿದೆ.

ಮೊದಲ ಸಲ ಉದ್ದೀಪನ ಮದ್ದು ಸೇವನೆ ಮಾಡಿ ಸಿಕ್ಕಿಬಿದ್ದಿದ್ದ ಅವರು ನಾಲ್ಕು ವರ್ಷಗಳ ಅಮಾನತು ಶಿಕ್ಷೆ ಅನುಭವಿಸಿದ್ದರು. ಅದರ ನಂತರ ಹೋದ ಆಗಸ್ಟ್‌ನಲ್ಲಿ ಸ್ಪರ್ಧಾ ಕಣಕ್ಕೆ ಮರಳಿದ್ದರು.  ಉತ್ತರಾಖಂಡದಲ್ಲಿ ನಡೆದಿದ್ದ ರಾಷ್ಟ್ರೀಯ ಮಹಿಳಾ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ 69 ಕೆಜಿ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದಿದ್ದರು. 

ಸ್ಪರ್ಧೆ ಸಂದರ್ಭದಲ್ಲಿ ಅವರಿಂದ ಪಡೆದಿದ್ದ ಮೂತ್ರದ ಮಾದರಿಯ ಪರೀಕ್ಷೆಯಲ್ಲಿ ನಿಷೇಧಿತ ನೊರಾಂಡ್ರೊಸ್ಟಿರಾನ್, ಮೆತಾಂಡಿನೊನ್ ಮತ್ತು ಮೆಫೆಂಟರ್‌ಮೈನ್ ಅಂಶಗಳು ಇರುವುದು ಪತ್ತೆಯಾಗಿತ್ತು. 

ಇನ್ನೊಂದು ಪ್ರಕರಣದಲ್ಲಿ ವುಷು ಕ್ರೀಡಾಪಟು ಅವನೀಶ್ ಗಿರಿ ಅವರಿಗೆ ಮೂರು ವರ್ಷಗಳ ಅಮಾನತು ಶಿಕ್ಷೆ ವಿಧಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT