ದುಬೈ: ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತದ ಪ್ರಮೋದ್ ಭಗತ್ ಅವರು ದುಬೈ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ ಹಾಗೂ ಡಬಲ್ಸ್‌ಗಳಲ್ಲಿ ಚಿನ್ನದ ಪದಕ ಗೆದ್ದರು.

ಭಾನುವಾರ ಇಲ್ಲಿ ನಡೆದಎಸ್‌ಎಲ್4 ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಪ್ರಮೋದ್ 21-17, 21-18ರಿಂದ ಭಾರತದವರೇ ಆದ ನಿತೇಶ್ ಕುಮಾರ್ ಅವರನ್ನು ಮಣಿಸಿದರು.

ಮನೋಜ್ ಸರ್ಕಾರ್ ಜೊತೆಗೂಡಿದ ಪ್ರಮೋದ್ ಅವರು ಎಸ್‌ಎಲ್4–ಎಸ್‌ಎಲ್3 ವಿಭಾಗದ ಡಬಲ್ಸ್ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ 21-18, 21-16ರಿಂದ ಭಾರತದ ಸುಕಾಂತ್ ಕದಂ–ನಿತೇಶ್ ಕುಮಾರ್ ಜೋಡಿಯನ್ನು ಸೋಲಿಸಿದರು.

ಮಿಶ್ರ ಡಬಲ್ಸ್ ವಿಭಾಗದಲ್ಲಿಪಲಕ್ ಕೊಹ್ಲಿ ಜೊತೆಗೂಡಿದ ಪ್ರಮೋದ್ ಕಂಚಿನ ಪದಕ ಗೆದ್ದುಕೊಂಡರು.

ಎಸ್‌ಎಲ್3 ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ 15-21, 6-21ರಿಂದ ಫ್ರಾನ್ಸ್‌ನ ಲೂಕಾಸ್ ಮಾಜುರ್ ಅವರಿಗೆ ಸೋತ ಸುಕಾಂತ್ ಕದಂ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.