ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೊನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಹಿಂದೆ ಸರಿದ ಸಾತ್ವಿಕ್‌–ಚಿರಾಗ್

Published 22 ಜನವರಿ 2024, 14:22 IST
Last Updated 22 ಜನವರಿ 2024, 14:22 IST
ಅಕ್ಷರ ಗಾತ್ರ

ಜಕಾರ್ತಾ: ವಿಶ್ವದ ಎರಡನೇ ನಂಬರ್ ಡಬಲ್ಸ್ ಆಟಗಾರರಾದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮಂಗಳವಾರ ಆರಂಭವಾಗುವ ಇಂಡೊನೇಷ್ಯನ್ ಮಾಸ್ಟರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಅನುಭವಿ ಸಿಂಗಲ್ಸ್ ಆಟಗಾರ ಎಚ್‌.ಎಸ್‌.ಪ್ರಣಯ್ ದೇಶದ ಸವಾಲನ್ನು ಮುನ್ನಡೆಸಲಿದ್ದಾರೆ.

ಬೆನ್ನುಬೆನ್ನಿಗೆ ನಡೆದ ಮಲೇಷ್ಯಾ ಸೂಪರ್ 1000 ಮತ್ತು ಇಂಡಿಯಾ ಓಪನ್ 750 ಟೂರ್ನಿಗಳಲ್ಲಿ ಸಾತ್ವಿಕ್‌–ಚಿರಾಗ್ ರನ್ನರ್ ಅಪ್‌ ಸ್ಥಾನ ಗಳಿಸಿದ್ದರು. ಮುಂದೆ ಬಿಡುವಿಲ್ಲದ ವೇಳಾಪಟ್ಟಿ ಇರುವ ಕಾರಣ ಇವರಿಬ್ಬರು ಈ ಟೂರ್ನಿಗೆ ವಿಶ್ರಾಂತಿ ಬಯಸಿದ್ದಾರೆ.

ಇವರಿಬ್ಬರ ಗೈರು ಟೂರ್ನಿಯ ಮಹತ್ವವನ್ನು ಕೊಂಚ ತಗ್ಗಿಸಲಿದೆ. ಆದರೆ, ವಿಶ್ವದ 9ನೇ ಕ್ರಮಾಂಕದ ಆಟಗಾರ ಪ್ರಣಯ್ ಉತ್ತಮ ಪ್ರದರ್ಶನ ನೀಡಲು ತಮ್ಮೆಲ್ಲಾ ಸಾಮರ್ಥ್ಯ ವಿನಿಯೋಗಿಸುವುದು ಖಚಿತ. ಅವರು ಈ ಟೂರ್ನಿಯಲ್ಲಿ ಶ್ರೇಯಾಂಕ ಪಡೆದ ಭಾರತದ ಏಕೈಕ ಆಟಗಾರ. ಅವರಿಗೆ ಏಳನೇ ಶ್ರೇಯಾಂಕ ನೀಡಲಾಗಿದ್ದು, ಮೊದಲ ಸುತ್ತಿನಲ್ಲಿ ಸಿಂಗಪುರದ ಲೊ ಕೀನ್ ಯು ಅವರನ್ನು ಎದುರಿಸಲಿದ್ದಾರೆ. ಲೊ ಅವರು ವಿಶ್ವದ 11ನೇ ನಂಬರ್ ಆಟಗಾರ.

19ನೇ ಕ್ರಮಾಂಕದ ಲಕ್ಷ್ಯ ಸೇನ್ ಮೊದಲ ಸುತ್ತಿನಲ್ಲಿ ಚೀನಾದ ವೆಂಗ್‌ ಹಾಂಗ್‌ ಯಾಂಗ್ ವಿರುದ್ಧ ಆಡಲಿದ್ದಾರೆ. 25ನೇ ಕ್ರಮಾಂಕದ ಕಿದಂಬಿ ಶ್ರೀಕಾಂತ್‌, ಮಲೇಷ್ಯಾದ ಲೀ ಝೀ ಜಿಯಾ ಎದುರು ಆಡಲಿದ್ದಾರೆ. ಪ್ರಿಯಾಂಶು ರಾಜಾವಾತ್‌, ಡೆನ್ಮಾರ್ಕ್‌ನ ರಾಸ್ಮುಸ್‌ ಗೆಮ್ಕೆ ಎದುರು ಆಡಲಿದ್ದಾರೆ.

ಚಿರಾಗ್– ಸಾತ್ವಿಕ್‌ ಅನುಪಸ್ಥಿತಿಯಲ್ಲಿ ಅರ್ಜುನ್ ಮತ್ತು ಧ್ರುವ್ ಕಪಿಲ್‌ ಡಬಲ್ಸ್‌ನಲ್ಲಿ ಕಣದಲ್ಲಿರುವ ಭಾರತದ ಏಕಮಾತ್ರ ಜೋಡಿಯಾಗಿದ್ದಾರೆ.

ಮಹಿಳಾ ಡಬಲ್ಸ್, ಮಿಶ್ರ ಡಬಲ್ಸ್‌ನಲ್ಲಿ ಭಾರತದ ಸ್ಪರ್ಧಿಗಳು ಕಣದಲ್ಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT