ಭಾರತ ಸರ್ಫಿಂಗ್ ಫೆಡರೇಷನ್ ಸಹಯೋಗದಲ್ಲಿ ತಮಿಳುನಾಡು ಸರ್ಫಿಂಗ್ ಸಂಸ್ಥೆ ಆಯೋಜಿಸಿದ್ದ ಚಾಂಪಿಯನ್‌ಷಿಪ್‌ನ ಪುರುಷರ 12 ಕಿಲೊಮೀಟರ್ ರೇಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಅವರು ಈ ವಿಭಾಗದಲ್ಲಿ ಪದಕ ಗೆದ್ದ 16 ವರ್ಷದೊಳಗಿನ ಭಾರತದ ಮೊದಲ ಸರ್ಫರ್ ಎಂದೆನಿಸಿಕೊಂಡರು. ಕರ್ನಾಟಕ ಇಲ್ಲಿ ಒಟ್ಟು 8 ಪಕದಗಳನ್ನು ಗಳಿಸಿ ಪಾರಮ್ಯ ಮೆರೆಯಿತು. ಪ್ರತಿಕೂಲ ಹವಾಮಾನವನ್ನು ಮೀರಿ ಮುನ್ನುಗ್ಗಿದ ಅವರು ಮಾಜಿ ಚಾಂಪಿಯನ್‌ಗಳಿಗೆ ಪ್ರಬಲ ಪೈಪೋಟಿ ನೀಡಿದರು.