ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pro Kabaddi: ಹರಿಯಾಣ ಸ್ಟೀಲರ್ಸ್ ಎದುರು ಟೈಟನ್ಸ್‌ಗೆ ರೋಚಕ ಜಯ

Published 22 ಡಿಸೆಂಬರ್ 2023, 23:30 IST
Last Updated 22 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಚೆನ್ನೈ: ನಾಯಕ ಪವನ್ ಶೆರಾವತ್ ಅವರ ಅಮೋಘ ಆಟದ ಬಲದಿಂದ ತೆಲುಗು ಟೈಟನ್ಸ್‌ ತಂಡವು ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಎದುರು ರೋಚಕ ಜಯ ಸಾಧಿಸಿತು.

ಎಸ್‌ಡಿಎಟಿ ಮಲ್ಟಿ ಪರ್ಪಸ್ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟೈಟನ್ಸ್ ತಂಡವು 37–36ರಿಂದ ಹರಿಯಾಣ ಸ್ಟೀಲರ್ಸ್ ಎದುರು ಗೆದ್ದಿತು. ಪವನ್ ಅವರು ಹತ್ತು ಅಂಕ ಗಳಿಸಿದರು. 

ಪಂದ್ಯದ ಆರಂಭದಿಂದಲೂ ಉಭಯ ತಂಡಗಳ ಆಟಗಾರರು ಜಿದ್ದಾಜಿದ್ದಿಯ ಪೈಪೋಟಿ ನಡೆಸಿದರು. ಪ್ರಥಮಾರ್ಧದಲ್ಲಿಯೇ ಟೈಟನ್ಸ್‌ ತಂಡವು 21–20ರಿಂದ ಮುನ್ನಡೆಯಲ್ಲಿತ್ತು. ಎರಡನೇ ಅವಧಿಯಲ್ಲಿ ಉಭಯ ತಂಡಗಳು 16–16ರ ಸಮಬಲ ಸಾಧಿಸಿದವು. ಆದರೆ ಮೊದಲಾರ್ಧದಲ್ಲಿ ಟೈಟನ್ಸ್ ತಂಡವು ಪಡೆದಿದ್ದ ಒಂದು ಅಂಕದ ಮುನ್ನಡೆ ಗೆಲುವಿಗೆ ನೆರವಾಯಿತು. ಟೈಟನ್ಸ್‌ ತಂಡದ ಡಿಫೆಂಡರ್ ಅಜಿತ್ ಪವಾರ್ ಏಳು ಹಾಗೂ ಲೆಫ್ಟ್‌ ರೇಡರ್ ಪ್ರಫುಲ್ ಜವಾರೆ ಮೂರು ಅಂಕಗಳನ್ನು ಗಳಿಸಿದರು.

ಹರಿಯಾಣ ತಂಡದ ರೇಡರ್‌ಗಳಾದ ಶಿವಂ ಪಟಾರೆ 12 ಮತ್ತು  ವಿನಯ್ ಒಂಬತ್ತು ಅಂಕಗಳನ್ನು ಗಳಿಸಿದರು.

ದಿನದ ಇನ್ನೊಂದು ಪಂದ್ಯದಲ್ಲಿ ಪಟ್ನಾ ಪೈರೆಟ್ಸ್‌ ತಂಡವು 46–33ರಿಂದ ತಮಿಳ್ ತಲೈವಾಸ್ ವಿರುದ್ಧ ಜಯಿಸಿತು.

ಪ್ರೊ ಕಬಡ್ಡಿಯಲ್ಲಿ ಇದೇ ಮೊದಲ ಬಾರಿ ಆಡುತ್ತಿರುವ ಎಂ. ಸುಧಾಕರ್ ಅವರು 11 ಅಂಕಗಳನ್ನು ಗಳಿಸಿ, ಪಟ್ನಾ ತಂಡದ ಜಯದ ರೂವಾರಿಯಾದರು. ಅವರು ತಮ್ಮ ಚುರುಕಿನ ರೇಡಿಂಗ್ ಮೂಲಕ ಎದುರಾಳಿ ತಂಡಕ್ಕೆ ಚಳ್ಳೆಹಣ್ಣು ತಿನ್ನಿಸಿದರು.

ಶನಿವಾರದ ಪಂದ್ಯಗಳು

ತಮಿಳ್ ತಲೈವಾಸ್–ಜೈಪುರ್ ಪಿಂಕ್ ಪ್ಯಾಂಥರ್ಸ್ (ರಾತ್ರಿ 8ರಿಂದ)

ಗುಜರಾತ್ ಜೈಂಟ್ಸ್–ಯು.ಪಿ. ಯೋಧಾ (ರಾತ್ರಿ 9ರಿಂದ)

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT