ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅ. 18ರಿಂದ ಪ್ರೊ ಕಬಡ್ಡಿ ಲೀಗ್‌ ಆರಂಭ

Published 3 ಸೆಪ್ಟೆಂಬರ್ 2024, 13:53 IST
Last Updated 3 ಸೆಪ್ಟೆಂಬರ್ 2024, 13:53 IST
ಅಕ್ಷರ ಗಾತ್ರ

ಮುಂಬೈ: ಪ್ರೊ ಕಬಡ್ಡಿ ಲೀಗ್‌ನ 11ನೇ ಆವೃತ್ತಿ ಅಕ್ಟೋಬರ್‌ 18 ರಂದು ಆರಂಭವಾಗಲಿದೆ ಎಂದು ಟೂರ್ನಿಯ ಆಯೋಜಕರು ಮಂಗಳವಾರ ತಿಳಿಸಿದ್ದಾರೆ.

ಈ ಬಾರಿ ಟೂರ್ನಿಯು ಮೂರು ನಗರಗಳಲ್ಲಿ ನಡೆಯಲಿದೆ. ಹೈದರಾಬಾದ್‌ನಲ್ಲಿ ಮೊದಲ ಹಂತ ನಡೆಯಲಿದೆ. ನವೆಂಬರ್‌ 10 ರಿಂದ ನೊಯಿಡಾದಲ್ಲಿ ಹಾಗೂ ಅಂತಿಮವಾಗಿ ಪುಣೆಯಲ್ಲಿ ಡಿಸೆಂಬರ್‌ 3ರಿಂದ ನಡೆಯಲಿದೆ.

ಟೂರ್ನಿಯ ಪೂರ್ಣ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು.

‘ಪಿಕೆಎಲ್‌ 11ನೇ ಆವೃತ್ತಿಯ ಆರಂಭದ ದಿನ ಮತ್ತು ಪಂದ್ಯದ ಸ್ಥಳಗಳನ್ನು ಘೋಷಿಸಲು ನಮಗೆ ಸಂತಸವಾಗುತ್ತಿದೆ. ಮೊದಲ 10 ಆವೃತ್ತಿಗಳು ಯಶಸ್ವಿಯಾದ ನಂತರ, ಲೀಗ್‌ನ ಉನ್ನತಿಯಲ್ಲಿ 11ನೇ ಆವೃತ್ತಿ ಮೈಲಿಗಲ್ಲಾಗಲಿದೆ’ ಎಂದು ಪಿಕೆಎಲ್‌ ಲೀಗ್‌ ಕಮಿಷನರ್ ಅನುಪಮ್ ಗೋಸ್ವಾಮಿ ಹೇಳಿದರು.

‘ಪಿಕೆಲ್‌ನಿಂದ ಭಾರತದಲ್ಲಿ ಮತ್ತು ಜಗತ್ತಿನ ಇತರೆಡೆ ಕಬಡ್ಡಿಯ ಬೆಳವಣಿಗೆಯಾಗಲಿದೆ’ ಎಂದು ಅವರು ಹೇಳಿದರು.

‌ಹತ್ತನೇ ಆವೃತ್ತಿಯಲ್ಲಿ ಪುಣೇರಿ ಪಲ್ಟನ್‌ ಮೊದಲ ಬಾರಿ ಚಾಂಪಿಯನ್ ಆಗಿತ್ತು. ಕಳೆದ ತಿಂಗಳು ಪಿಕೆಎಲ್‌ ಹರಾಜು ನಡೆದಿದ್ದು, ಎಂಟು ಆಟಗಾರರು ಒಂದು ಕೋಟಿಗೂ ಹೆಚ್ಚು ಮೊತ್ತಕ್ಕೆ ವಿವಿಧ ತಂಡಗಳ ಪಾಲಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT