ಅಹಮದಾಬಾದ್: ಅಜಿಂಕ್ಯ ಪವಾರ್ ಅವರ ಉತ್ತಮ ರೈಡಿಂಗ್ ಬಲದಿಂದ ತಮಿಳ್ ತಲೈವಾಸ್ ತಂಡ, ಭಾನುವಾರ ಪ್ರೊ ಕಬಡ್ಡಿ ಲೀಗ್ನ ಪಂದ್ಯದಲ್ಲಿ 42–31ರಿಂದ ದಬಾಂಗ್ ಡೆಲ್ಲಿ ತಂಡವನ್ನು ಮಣಿಸಿತು.

ಟ್ರಾನ್ಸ್ ಸ್ಟೇಡಿಯಾದಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ವಿರಾಮದ ವೇಳೆಗೆ 18–14ರಿಂದ ಮುನ್ನಡೆಯಲ್ಲಿದ್ದ ತಲೈವಾಸ್ ತಂಡ ಉತ್ತರಾರ್ಧದಲ್ಲೂ ಉತ್ತಮ ಪ್ರದರ್ಶನ ನೀಡಿತು.

ಅಜಿಂಕ್ಯ ತಮ್ಮ ತಂಡಕ್ಕೆ ಒಟ್ಟು 21 ಪಾಯಿಂಟ್ಗಳನ್ನು ಗಳಿಸಿಕೊಟ್ಟರು. ಅದರಲ್ಲಿ 14 ಪಾಯಿಂಟ್ ರೇಡ್ನಿಂದ ಬಂದಿತ್ತು. ನರೇಂದರ್ ಹೋಶಿಯಾರ್ ಅವರು 6 ಅಂಕಗಳನ್ನು ರೇಡ್ನಿಂದ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ದಬಾಂಗ್ ತಂಡದ ನವೀನ್ ಕುಮಾರ್ ಮತ್ತು ಆಶು ಮಲಿಕ್ ಅವರ ಆಟ ಗಮನ ಸೆಳೆಯಿತು. ನವೀನ್ 14 ಅಂಕ ಸಂಪಾದಿಸಿದರೆ, ಆಶು 9 ಪಾಯಿಂಟ್ ಗಳಿಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.