ಪಂಚಕುಲಾ: ಪ್ರಮುಖ ರೇಡರ್ ಅಶು ಮಲಿಕ್ (17 ಅಂಕ) ಅವರ ಚಾಣಾಕ್ಷ ಆಟದಿಂದ ದಬಾಂಗ್ ಡೆಲ್ಲಿ ತಂಡ, ಭಾನುವಾರ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ 46–38 ರಿಂದ ಗೆಲುವು ದಾಖಲಿಸಿತು.

ಚುರುಕಾದ ದಾಳಿ ನಡೆಸಿದ ಅಶು ಎದುರಾಳಿಗಳನ್ನು ಕಟ್ಟಿ ಹಾಕಿದರು. ಅವರೊಂದಿಗೆ ಯೋಗೇಶ್ ದಹಿಯಾ ಅವರು 8 ಅಂಕ ಗಳಿಸಿದರು. ಆರಂಭದಿಂದಲೂ ಉತ್ತಮ ಆಟವಾಡಿದ ದಬಾಂಗ್ ತಂಡ, ವಿರಾಮದ ಬಳಿಕವೂ ಮೇಲುಗೈ ಸಾಧಿಸಿತು. ಬುಲ್ಸ್ ಪರ ಸುಶೀಲ್ 11 ಅಂಕ ಗಳಿಸಿದ ತಂಡದ ಹೋರಾಟದಲ್ಲಿ ಮಿಂಚಿದರು.

ಮತ್ತೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ 74–37 ರಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ಜಯಗಳಿಸಿತು. ತಲೈವಾಸ್ ಪರ ವಿಶಾಲ್ ಚಾಹಲ್ 19, ನರೇಂದ್ರ ಹೋಶಿಯಾರ್ 17 ಅಂಕ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.