ನವದೆಹಲಿ: ದೇಶಿ ಮತ್ತು ವಿದೇಶದ ಕೋಚ್ಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಭಾರತದ ಬ್ಯಾಡ್ಮಿಂಟನ್ ಕ್ಷೇತ್ರ ಅಭಿವೃದ್ಧಿ ಸಾಧಿಸಲಿದೆ ಎಂದು ರಾಷ್ಟ್ರೀಯ ಕೋಚ್ ಪುಲ್ಲೇಲ ಗೋಪಿಚಂದ್ ಅಭಿಪ್ರಾಯಪಟ್ಟಿದ್ದಾರೆ. ಎರಡನೇ ದರ್ಜೆಯ ಕೋಚ್ಗಳನ್ನು ನೇಮಕ ಮಾಡಿದರೆ ಅದೇ ರೀತಿಯ ಕ್ರೀಡಾಪಟುಗಳೇ ಸೃಷ್ಟಿಯಾಗುತ್ತಾರೆ ಎಂದು ಕೂಡ ಅವರು ಹೇಳಿದ್ದಾರೆ.

ಗುರುವಾರ ವರ್ಚುವಲ್ ಆಗಿ ನಡೆದ ಹೈ ಪರ್ಫಾರ್ಮೆನ್ಸ್ ಕೋಚ್ಗಳ ಶಿಕ್ಷಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕ್ರೀಡೆಯ ಬೆಳವಣಿಗೆಗೆ ವಿದೇಶಿ ಕೋಚ್ಗಳು ಅಗತ್ಯ. ಭಾರತದಲ್ಲಿ ಈ ವರೆಗೆ ವಿದೇಶಿ ಮತ್ತು ದೇಶಿ ಕೋಚ್ಗಳು ಈ ಕಾರ್ಯವನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ ಎಂದರು.

‘ಯಾವುದೇ ಕ್ರೀಡೆಯಲ್ಲಿ ಪ್ರಾವೀಣ್ಯ ಇಲ್ಲದೇ ಇದ್ದರೆ ವಿದೇಶದ ನೆರವು ಪಡೆದುಕೊಳ್ಳುವುದು ಒಳಿತು. ಆದರೆ ಒಂದು ಹಂತ ದಾಟಿದ ನಂತರ ಸ್ವದೇಶಿ ಕೋಚ್ಗಳ ಅಗತ್ಯವೂ ಬೇಕಾಗುತ್ತದೆ. ಹಾಗೆ ಮಾಡಿದರೆ ಮಾತ್ರ ಉತ್ತಮ ಕ್ರೀಡಾಪಟುಗಳನ್ನು ಬೆಳೆಸಲು ಸಾಧ್ಯ’ ಎಂದು ಅವರು ಹೇಳಿದರು.

‘ಈ ವರೆಗೆ ಅತ್ಯುತ್ತಮ ವಿದೇಶಿ ಕೋಚ್ಗಳು ನಮಗೆ ಲಭಿಸಲಿಲ್ಲ. ಎರಡನೇ ದರ್ಜೆಯ ಕೋಚ್ಗಳು ಮಾತ್ರ ಇಲ್ಲಿ ತರಬೇತಿ ನೀಡಿದ್ದಾರೆ. ನಿವೃತ್ತ ಆಟಗಾರರೇ ಕೋಚ್ಗಳಾದರೆ ಇನ್ನಷ್ಟು ಅನುಕೂಲ ಆಗಲಿದೆ’ ಎಂದು ಅವರು ಹೇಳಿದರು.

ಐಸಿಸಿ ಏಕದಿನ ರ್ಯಾಂಕಿಂಗ್: 2, 3ನೇ ಸ್ಥಾನದಲ್ಲಿ ಕೊಹ್ಲಿ, ಶರ್ಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.