ಚೆನ್ನೈ: ಹೈದರಾಬಾದಿನ ರಾಹಿಲ್ ಶೆ್ಟ್ಟಿ ಮತ್ತು ಕೆ.ವೈ. ಅಹಮದ್ ಇಲ್ಲಿ ನೆಯುತ್ತಿರು ಎಂಆರ್‌ಎಫ್ ಎಂಎಂಎಸ್‌ಸಿ ಎಫ್‌ಎಂಎಸ್‌ಸಿಐ ರಾಷ್ಟ್ರೀಯ ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್‌ಷಿಪ್‌ನ ಪ್ರೀಮಿಯರ್ ಪ್ರೊ ಸ್ಟಾಕ್ ವಿಭಾಗದಲ್ಲಿ ಜಯಿಸಿದರು.

ಶನಿವಾರ ಶ್ರೀಪೆರಂಬುದೂರು ಬಳಿಯ ಎಂಎಂಆರ್‌ಟಿಯಲ್ಲಿ ನಡೆದ ಸ್ಪರ್ಧೆಯಲ್ಲಿ 23 ವರ್ಷದ ರಾಹಿಲ್ ಪ್ರೊ ಸ್ಟಾಕ್ 301–400 ಸಿಸಿ ವಿಭಾಗದಲ್ಲಿ ಆರ್‌ಎಸಿಆರ್ ಕ್ಯಾಸ್ಟ್ರಾಲ್ ಪವರ್ ರೇಸಿಂಗ್‌ನ ರಜಿನಿ ಕೃಷ್ಣನ್ ಅವರನ್ನು ಮೀರಿಸಿದರು. ಗಸ್ಟೊ ರೇಸಿಂಗ್‌ನ ರಾಹಿಲ್ ಅವರು ದೀರ್ಘ ಕಾಲದ ವಿಶ್ರಾಂತಿಯ ನಂತರ ರೇಸಿಂಗ್ ಮರಳಿದ್ದಾರೆ.

ಟಿವಿಎಸ್ ರೇಸಿಂಗ್‌ನ ಕೆ.ವೈ. ಅಹಮದ್ ಅವರು ಇದೇ ಮೊದಲ ಜಯ ದಾಖಲಿಸಿದರು. ಈ ವಿಭಾಗದಲ್ಲಿ ಮುಂಚೂಣಿ ರೇಸಿಂಗ್ ಸ್ಪರ್ಧಿಗಳಾದ ದೀಪಕ್ ರವಿಕುಮಾರ್ ಮತ್ತು ಹಾಲಿ ಚಾಂಪಿಯನ್ ಜಗನ್ ಕುಮಾರ್ ಅವರೊಂದಿಗೆ ಅಹಮದ್ ಸ್ಪರ್ಧಿಸಿದ್ದರು.

ರಾಕ್‌ಸ್ಟಾರ್ ರೇಸಿಂಗ್ ಅನ್ಫಲ್ ಅಕ್ದರ್ ಅವರು ನೊವೈಸ್ (ಸ್ಟಾಕ್ 165ಸಿಸಿ) ವಿಭಾಗದಲ್ಲಿ ಎರಡನೇ ಬಾರಿ ಗೆದ್ದರು. 38 ರೈಡರ್‌ಗಳೊಂದಿಗೆ ಅವರು ಸ್ಪರ್ಧಿಸದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.