ಬೆಂಗಳೂರು: ಒಲಿಂಪಿಯನ್ ನೀರಜ್ ಚೋಪ್ರಾ ಕ್ಲಾಸಿಕ್ ಅಂತರರಾಷ್ಟ್ರೀಯ ಜಾವೆಲಿನ್ ಥ್ರೋ ಸ್ಪರ್ಧೆಯು ಜುಲೈ 5ರಂದು ಕಂಠೀರವ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದೆ.

ಡಬಲ್ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಮತ್ತು ಜೆಎಸ್ಡಬ್ಲ್ಯು ಸ್ಪೋರ್ಟ್ಸ್ ಆಶ್ರಯದಲ್ಲಿ ನಡೆಯಲಿರುವ ಈ ಸ್ಪರ್ಧೆಯನ್ನು ಭಾರತ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್ಐ) ಮಾನ್ಯ ಮಾಡಿದೆ. ಈ ಸ್ಪರ್ಧೆಯು ಮೇ 24ರಂದು ಆಯೋಜನೆಯಾಗಿತ್ತು.

ಆದರೆ ಭಾರತ ಮತ್ತು ಪಾಕಿಸ್ತಾನ ಸೇನಾ ಸಂಘರ್ಷದ ಕಾರಣದಿಂದಾಗಿ ಮುಂದೂಡಲಾಗಿತ್ತು. ಇದೀಗ ಸ್ಪರ್ಧೆಯನ್ನು ನಡೆಸಲು ಸರ್ವಸನ್ನದ್ಧರಾಗಿರುವುದಾಗಿ ಆಯೋಜಕರು ಮಂಗಳವಾರ ತಿಳಿಸಿದ್ದಾರೆ.

ವಿಶ್ವದ 12 ಶ್ರೇಷ್ಠ ಅಥ್ಲೀಟ್ಗಳು ಭಾಗವಹಿಸಲಿದ್ದಾರೆ. ಅದರಲ್ಲಿ ಏಳು ಮಂದಿ ವಿದೇಶಿಗರು ಮತ್ತು ಚೋಪ್ರಾ ಸೇರಿದಂತೆ ಐವರು ಭಾರತದ ಅಥ್ಲೀಟ್ಗಳು ಇದ್ದಾರೆ. ಸಚಿನ್ ದೇವ್, ಕಿಶೋರ್ ಜೇನಾ, ರೋಹಿತ್ ಯಾದವ್ ಮತ್ತು ಸಾಹಿಲ್ ಸಿಲ್ವಾಲ್ ಅವರು ಉಳಿದ ನಾಲ್ವರಾಗಿದ್ದಾರೆ.

ಎರಡು ಬಾರಿಯ ವಿಶ್ವ ಚಾಂಪಿಯನ್, ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್, ರಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ, ಜರ್ಮನಿಯ ಥಾಮಸ್ ರೋಹ್ಲರ್, ವಿಶ್ವ ಚಾಂಪಿಯನ್, ಕೆನ್ಯಾದ ಜೂಲಿಯಸ್ ಯೆಗೊ, ಅಮೆರಿಕದ ಕರ್ಟಿಸ್ ಥಾಂಪ್ಸನ್, ಜಪಾನಿನ ಗೆಂಕಿ ಡೀನ್, ಶ್ರೀಲಂಕಾದ ರುಮೇಶ್ ಪಥಿರಾಗೆ, ಬ್ರೆಜಿಲ್ನ ಲೂಯಿಸ್ ಮಾರಿಸಿಯೊ ಡಿಸಿಲ್ವಾ ಅವರು ಕಣದಲ್ಲಿರುವ ವಿದೇಶಿ ಅಥ್ಲೀಟ್ಗಳಾಗಿದ್ದಾರೆ.

‘ಇಷ್ಟು ಕಡಿಮೆ ಅವಧಿಯಲ್ಲಿ ಈ ಸ್ಪರ್ಧೆಯ ಆಯೋಜನೆಯನ್ನು ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ. ಇದಕ್ಕಾಗಿ ಬಹಳಷ್ಟು ಜನರು ಶ್ರಮಪಟ್ಟಿದ್ದಾರೆ. ಎಎಫ್ಐ, ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಮತ್ತು ನಮ್ಮ ಪಾಲುದಾರರ ಸಹಕಾರದಿಂದ ಇದು ಸಾಧ್ಯವಾಗುತ್ತಿದೆ. ಈ ಕಾರ್ಯಕ್ರಮವನ್ನು ಬೃಹತ್ ಮತ್ತು ಅವಿಸ್ಮರಣೀಯವಾಗಿ ಆಯೋಜಿಸುವುದು ನಮ್ಮ ಗುರಿ. ಜುಲೈ 5ರಂದು ಸ್ಪರ್ಧೆ ನಡೆಯಲಿದೆ’ ಎಂದು ಜೆಎಸ್ಡಬ್ಲ್ಯು ಕ್ರೀಡಾ ವಿಭಾಗದ ಮುಖ್ಯ ವಾಣಿಜ್ಯ ಅಧಿಕಾರಿ ಕರಣ್ ಯಾದವ್ ತಿಳಿಸಿದ್ದಾರೆ.

ಈ ಸ್ಪರ್ಧೆಗೆ ವಿಶ್ವ ಅಥ್ಲೆಟಿಕ್ಸ್ (ಡಬ್ಲ್ಯುಎ) ಯಿಂದ ಮಾನ್ಯತೆ ದೊರೆತಿದೆ. ಈ ಮೊದಲು ಸ್ಪರ್ಧೆಯನ್ನು ಪಂಚಕುಲಾದಲ್ಲಿ ಆಯೋಜಿಸಲಾಗಿತ್ತು. ಆದರೆ ಅಲ್ಲಿಯ ಕ್ರೀಡಾಂಗಣದಲ್ಲಿ ಟಿ.ವಿ ನೇರಪ್ರಸಾರಕ್ಕೆ ಅಗತ್ಯವಿದ್ದ ಬೆಳಕಿನ ವ್ಯವಸ್ಥೆ ಸೂಕ್ತವಾಗಿರದ ಕಾರಣ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.

ಟಿಕೆಟ್ ದರ:

ಈ ಸ್ಪರ್ಧೆಯನ್ನು ವೀಕ್ಷಿಸಲು ಟಿಕೆಟ್ಗಳ ದರವನ್ನು ಪ್ರಕಟಿಸಲಾಗಿದೆ. ₹ 199 ರಿಂದ ₹ 9,999 ವರೆಗೆ ನಿಗದಿ ಮಾಡಲಾಗಿದೆ. ಐದು ಕಾರ್ಪೊರೇಟ್ ಬಾಕ್ಸ್ಗಳಿವೆ. ಪ್ರತಿಯೊಂದರಲ್ಲಿ 15 ಅತಿಥಿಗಳಿಗೆ ಅವಕಾಶವಿದೆ. ಈ ಬಾಕ್ಸ್ಗಳ ಪ್ರತಿ ಟಿಕೆಟ್ಗೆ ₹ 44,999 ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.