ತಿರುವನಂತಪುರ: ಬಂಗಾಳದ ರೆಜೋನಾ ಮಲಿಕ್ ಹೀನಾ ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಓಪನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಹಿರಿಯ ಸ್ಪರ್ಧಿಗಳನ್ನೂ ಮೀರಿಸಿದ ಸಾಧನೆ ಮಾಡಿದರು.

ಬಾಲಕಿಯರ 16 ವರ್ಷದೊಳಗಿನ 400 ಮೀ. ಓಟದಲ್ಲಿ ಅವರು 53.22 ಸೆಕೆಂಡುಗಳಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ಮಾಡಿದರು. ಸೀನಿಯರ್ ವಿಭಾಗದ ಇದೇ ಸ್ಪರ್ಧೆಯಲ್ಲಿ ಗೆದ್ದ ಅಥ್ಲೀಟ್‌ಗಳಿಗಿಂತ ಉತ್ತಮ ಸಮಯವನ್ನು ಅವರು ಕಂಡುಕೊಂಡದ್ದು ವಿಶೇಷ.

20 ವರ್ಷದೊಳಗಿನ ವಿಭಾಗದಲ್ಲಿ ಗೆದ್ದ ಕರ್ನಾಟಕದ ಪ್ರಿಯಾ ಮೋಹನ್ (53.55 ಸೆ.) ಮತ್ತು ಸೀನಿಯರ್ ವಿಭಾಗದಲ್ಲಿ ಅಗ್ರಸ್ಥಾನ ಪಡೆದ ಆಂಧ್ರಪ್ರದೇಶದ ದಂಡಿ ಜ್ಯೋತಿಕಾ ಶ್ರೀ (53.22 ಸೆ.) ಅವರಿಗಿಂತಲೂ ವೇಗವಾಗಿ ಹೀನಾ ಸ್ಪರ್ಧೆ ಪೂರ್ಣಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.