ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್‌: ಸೈನ್ಯಮ್‌ಗೆ ಚಿನ್ನ

Published 3 ಜೂನ್ 2023, 19:34 IST
Last Updated 3 ಜೂನ್ 2023, 19:34 IST
ಅಕ್ಷರ ಗಾತ್ರ

ಜೂಲ್, ಜರ್ಮನಿ: ಭಾರತದ ಸೈನ್ಯಮ್ ಅವರು ಇಲ್ಲಿ ನಡೆಯುತ್ತಿರುವ ಐಎಸ್ಎಸ್‌ಎಫ್‌ ಜೂನಿಯರ್ ವಿಶ್ವಕಪ್‌ ಶೂಟಿಂಗ್‌ನಲ್ಲಿ ಮಹಿಳೆಯರ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡರು.

ಶನಿವಾರ ನಡೆದ ಫೈನಲ್‌ನಲ್ಲಿ ಸೈನ್ಯಮ್ 238 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನ ಪಡೆದರು. ಕೊರಿಯಾದ ಕಿಮ್‌ ಮಿನ್ಸೆವೊ ಬೆಳ್ಳಿ ಗೆದ್ದರೆ, ಕಂಚಿನ ಪದಕ ಚೀನಾ ತೈಪೆಯ ಲಿಯು ಹೆಂಗ್‌ ಯು ಅವರ ಪಾಲಾಯಿತು.

ಸುರುಚಿ ಇಂದರ್‌ ಸಿಂಗ್‌ ಅವರು ಮಹಿಳೆಯರ ಪಿಸ್ತೂಲ್‌ ವಿಭಾಗದಲ್ಲಿ ಆರನೇ ಸ್ಥಾನ ಪಡೆದರು. ಜೂನಿಯರ್‌ ಪುರುಷರ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಅಮಿತ್‌ ಶರ್ಮಾ ನಾಲ್ಕನೇ ಸ್ಥಾನ ಪಡೆದು ಕಂಚಿನ ಪದಕ ಅಲ್ಪರದಲ್ಲೇ ತಪ್ಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT