ಬೆಂಗಳೂರು: ಉತ್ತಮ ಆಟವಾಡಿದ ಕರ್ನಾಟಕದ ಸಮ್ಯಕ್ ಕಶ್ಯಪ್ ಹಾಗೂ ಆಕಾಶ್ ಕೆ.ಜೆ. ಅವರು ರಾಷ್ಟ್ರೀಯ ಜೂನಿಯರ್ ಹಾಗೂ ಯೂತ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ಮುಖ್ಯ ಸುತ್ತಿಗೆ ಅರ್ಹತೆ ಗಳಿಸಿದ್ದಾರೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಯೂತ್ ಬಾಲಕರ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸಮ್ಯಕ್ 11–8, 4–11, 9–11, 11–6, 11–5ರಿಂದ ತಮಿಳುನಾಡಿನ ದೀನ್‌ದಯಾಳ್ ವಿಶ್ವ ಅವರನ್ನು ಮಣಿಸಿದರು. ಜೂನಿಯರ್ ಬಾಲಕರ ವಿಭಾಗದಲ್ಲೂ ಸಮ್ಯಕ್ ಮುಖ್ಯ ಸುತ್ತಿಗೆ ಕಾಲಿಟ್ಟರು. ಈ ವಿಭಾಗದಲ್ಲಿ ಅವರು 11–7, 11–5, 11–5ರಿಂದ ಪಿಎಸ್‌ಪಿಬಿಎ ತಂಡದ ಲುಬಿತ್ ಮವಾರ್ ಅವರನ್ನು ಸೋಲಿಸಿದರು.

ಜೂನಿಯರ್ ಬಾಲಕರ ವಿಭಾಗದಲ್ಲಿ ಆಕಾಶ್ ಕೆ.ಜೆ 10–12, 13–11, 11–4, 11–9ರಿಂದ ಆಂಧ್ರಪ್ರದೇಶದ ವೆಂಕಟ ಕಾರ್ತಿಕೇಯ ಮನ್ನವ ಎದುರು ಗೆದ್ದರು. ಕರ್ನಾಟಕದ ಶ್ರೀಕಾಂತ್ ಪಿ.ವಿ. ಹಾಗೂ ರೋಹಿತ್ ಶಂಕರ್ ಕೂಡ ಈ ವಿಭಾಗದಲ್ಲಿ ಮುಖ್ಯ ಸುತ್ತಿಗೆ ಲಗ್ಗೆಯಿಟ್ಟರು.

ಶ್ರೀಕಾಂತ್ 11–6, 11–7, 7–11, 11–4ರಿಂದ ಮಿಜೋರಾಂನ ಎಂ.ಆರ್. ಥಾಂಗ್‌ಸಿಯಾನ್‌ಸಂಗಾ ಅವರನ್ನು ಪರಾಭವಗೊಳಿಸಿದರೆ, ರೋಹಿತ್ 11-8,8-11,11-3,11-7ರಿಂದ ಉತ್ತರಾಖಂಡದ ಮಿತ್ತಲ್ ಸಕ್ಷಮ್ ಎದುರು ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.