ನವದೆಹಲಿ: ಒಂದು ದಶಕದಿಂದ ಭಾರತ ಹಾಕಿ ತಂಡದಲ್ಲಿ ಮಿಂಚಿದ್ದ ಸರದಾರ್ ಸಿಂಗ್ ಅವರು ಬುಧವಾರ ನಿವೃತ್ತಿ ಘೋಷಿಸಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ನೀರಸ ಆಟ ಆಡಿದ್ದು ಭಾರತಕ್ಕೆ ಚಿನ್ನ ಗೆದ್ದುಕೊಡಲು ಸಾಧ್ಯವಾಗದೇ ಇದ್ದುದಕ್ಕೆ ಬೇಸರಗೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.

‘ಕುಟುಂಬದ ಸದಸ್ಯರು, ಗೆಳೆಯರು ಮತ್ತು ಹಾಕಿ ಇಂಡಿಯಾದ ಹಿರಿಯರ ಜೊತೆ ಚರ್ಚಿಸಿದ ನಂತರ ಈ ನಿರ್ಧಾರ ಕೈಗೊಂಡಿದ್ದೇನೆ. ವೃತ್ತಿಜೀವನದಲ್ಲಿ 12 ವರ್ಷ ಎಂದರೆ ಸಣ್ಣ ಅವಧಿಯಲ್ಲ. ಈಗ ನಿವೃತ್ತಿಗೆ ಸಕಾಲ ಎಂದು ಅನಿಸಿದೆ’ ಎಂದು ಅವರು ಸುದ್ದಿಸಂಸ್ಥೆಗೆ ವಿವರಿಸಿದರು.

ಏಷ್ಯನ್ ಕ್ರೀಡಾಕೂಟದ ನಂತರ ಅವರು ‘ನನ್ನಲ್ಲಿ ಇನ್ನೂ ಆಟ ಆಡುವ ಸಾಮರ್ಥ್ಯ ಇದ್ದು 2020ರ ಒಲಿಂಪಿಕ್ಸ್ ಆಡಲು ಬಯಸಿದ್ದೇನೆ’ ಎಂದು ಹೇಳಿದ್ದರು. ಹಾಕಿ ಇಂಡಿಯಾವು ಬುಧವಾರ 25 ಆಟಗಾರರನ್ನು ರಾಷ್ಟ್ರೀಯ ಶಿಬಿರಕ್ಕಾಗಿ ಆಯ್ಕೆ ಮಾಡಿತ್ತು. ಅದರಲ್ಲಿ ಸರ್ದಾರ್ ಸಿಂಗ್ ಹೆಸರು ಇರಲಿಲ್ಲ. ಇದರಿಂದ ಬೇಸರಗೊಂಡು ಅವರು ನಿವೃತ್ತಿ ಘೋಷಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಆಟಗಾರರ ಹೆಸರನ್ನು ಪ್ರಕಟಿಸುವ ಮೊದಲೇ ನಿವೃತ್ತಿ ಘೋಷಿಸಿರುವುದಾಗಿ ಸರ್ದಾರ್ ಸ್ಪಷ್ಟಪಡಿಸಿದ್ದಾರೆ.

ಸರ್ದಾರ್ ಸಿಂಗ್ ಬಗ್ಗೆ...

ವಯಸ್ಸು: 32

ಹುಟ್ಟೂರು: ಸೀರ್ಸಾ, ಹರಿಯಾಣ

2006: ಪಾಕಿಸ್ತಾನ ಎದುರು ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯ

2008ರಿಂದ 2016: ಭಾರತ ತಂಡದ ನಾಯಕ

ಒಟ್ಟು ಅಂತರರಾಷ್ಟ್ರೀಯ ಪಂದ್ಯಗಳು: 350

2012: ಅರ್ಜುನ ಪ್ರಶಸ್ತಿ

2015: ಪದ್ಮಶ್ರೀ ಪ್ರಶಸ್ತಿ

2018: ಕಾಮನ್‌ವೆಲ್ತ್ ಕ್ರೀಡಾಕೂಟದ ತಂಡದಿಂದ ಹೊರಗೆ

ಚಾಂಪಿಯನ್ಸ್ ಟ್ರೋಫಿಯಲ್ಲಿ ವಾಪಸ್ ತಂಡಕ್ಕೆ ಮರಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.