ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಮಹಿಳಾ ಹಾಕಿ ಕೋಚ್‌ ಯಾನೆಕ್ ಶೋಪ್‌ಮನ್ ರಾಜೀನಾಮೆ

Published 23 ಫೆಬ್ರುವರಿ 2024, 16:09 IST
Last Updated 23 ಫೆಬ್ರುವರಿ 2024, 16:09 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್‌ ಯಾನೆಕ್ ಶೋಪ್‌ಮನ್ ಅವರು ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಶೋಪ್‌ಮನ್‌ ಅವರ ಗುತ್ತಿಗೆ ಅವಧಿ ಈ ವರ್ಷದ ಆಗಸ್ಟ್‌ವರೆಗೆ ಇತ್ತು. ತಮಗೆ ಗೌರವ ಕೊಡುತ್ತಿಲ್ಲ ಎಂದು  ಕೆಲ ದಿನಗಳ ಹಿಂದೆಷ್ಟೇ ಹಾಕಿ ಇಂಡಿಯಾ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದ ಅವರು, ತಮ್ಮ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ನಿರೀಕ್ಷಿಸಲಾಗಿತ್ತು.

ಡಚ್‌ ಮಹಿಳಾ ಕೋಚ್‌ ಶೋಪ್‌ಮನ್ 2021ರಲ್ಲಿ ಈ ಹುದ್ದೆಗೆ ನೇಮಕಗೊಂಡಿದ್ದರು. 

ಒಡಿಶಾದಲ್ಲಿ ನಡೆದ ಎಫ್ಐಎಚ್ ಹಾಕಿ ಪ್ರೊ ಲೀಗ್‌ ಲೆಗ್‌ನಲ್ಲಿ ಮಹಿಳಾ ಹಾಕಿ ತಂಡ ಹೊರಬಿದ್ದ ಬಳಿಕ  46 ವರ್ಷದ ಕೋಚ್ ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

‘ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಪಂದ್ಯಗಳಲ್ಲಿ ತಂಡದ ನಿರಾಶಾದಾಯಕ ಪ್ರದರ್ಶನದ ಹಿನ್ನೆಲೆಯಲ್ಲಿ  ಅವರ ರಾಜೀನಾಮೆಯು 2026ರ ಮಹಿಳಾ ವಿಶ್ವಕಪ್ ಮತ್ತು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ  ತಂಡವನ್ನು  ಸಜ್ಜಗೊಳಿಸಬಲ್ಲ ಸೂಕ್ತ ಮುಖ್ಯ ತರಬೇತುದಾರರನ್ನು ಹುಡುಕಲು ದಾರಿ ಮಾಡಿಕೊಟ್ಟಿದೆ’ ಎಂದು ಹಾಕಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್‌ ಗೇಮ್ಸ್ ಮತ್ತು ಹ್ಯಾಂಗ್‌ಝೌ ಕ್ರೀಡಾಕೂಟದಲ್ಲಿ ತಂಡ  ಕಂಚಿನ ಪದಕ ಗೆದ್ದಿತ್ತು. ಆದರೆ ಸವಿತಾ ಪೂನಿಯಾ ನೇತೃತ್ವದ ತಂಡವು ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲಲು ವಿಫಲವಾಯಿತು. ಇದರಿಂದ ಒಲಿಂಪಿಕ್ಸ್‌ ಅರ್ಹತೆ ಅವಕಾಶ ಕೈತಪ್ಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT