ಪ್ರೆಸ್ಟೀಜ್ ಗಾಲ್ಫ್ಶೈರ್ ಕೋರ್ಸ್ನಲ್ಲಿ ಶುಕ್ರವಾರ ಅಂತಿಮ ಸುತ್ತಿನಲ್ಲಿ ಸೆಹೆರ್, ಸ್ನೇಹಾ ಸಿಂಗ್, ನೇಹಾ ತ್ರಿಪಾಠಿ ಮತ್ತು ನಯನಿಕಾ ಸಂಗಾ ನಡುವೆ ತುರುಸಿನ ಪೈಪೋಟಿ ಕಂಡುಬಂತು. ಅಂತಿಮವಾಗಿ ಸೆಹೆರ್ (212) ಗೆಲುವಿನ ನಗು ಬೀರಿದರು. ದೆಹಲಿಯ ಗಾಲ್ಫರ್ಗೆ ಈ ಋತುವಿನಲ್ಲಿ ದೊರೆತ ಮೊದಲ ಪ್ರಶಸ್ತಿ ಇದು.