ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್‌: ಶರತ್, ಸತ್ಯನ್‌ ಶುಭಾರಂಭ

ಡರ್ಬನ್‌ನಲ್ಲಿ ವಿಶ್ವ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್‌
Published 21 ಮೇ 2023, 12:48 IST
Last Updated 21 ಮೇ 2023, 12:48 IST
ಅಕ್ಷರ ಗಾತ್ರ

ಡರ್ಬನ್‌ (ಪಿಟಿಐ): ಭಾರತದ ಶರತ್ ಕಮಲ್‌ ಹಾಗೂ ಜಿ.ಸತ್ಯನ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಆರಂಭ ಮಾಡಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 56ನೇ ಸ್ಥಾನದಲ್ಲಿರುವ ಶರತ್‌ ಅವರು ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ 11-8, 9-11, 11-9, 11-6, 11-6ರಿಂದ ಆಸ್ಟ್ರಿಯಾದ ಡೇವಿಡ್‌ ಸೆರ್ದೊರೊಗ್ಲು ವಿರುದ್ಧ ಜಯ ಸಾಧಿಸಿದರು. ಡೇವಿಡ್‌ ಅವರು ವಿಶ್ವ ಕ್ರಮಾಂಕದಲ್ಲಿ 170ನೇ ಸ್ಥಾನದಲ್ಲಿದ್ದಾರೆ.

ಮೊದಲ ಸುತ್ತಿನ ಮತ್ತೊಂದು ಹಣಾಹಣಿಯಲ್ಲಿ ಸತ್ಯನ್‌ ಅವರಿಗೆ 11-9, 11-8, 7-11, 11-2, 15-13, 13-11, 11-6ರಿಂದ ಇಂಗ್ಲೆಂಡ್‌ನ ಟಾಮ್ ಜಾರ್ವಿಸ್‌ ವಿರುದ್ಧ ಗೆಲುವು ಒಲಿಯಿತು.

ಮಾನುಷ್ ಶಾ ಹಾಗೂ ಹರ್ಮೀತ್ ದೇಸಾಯಿ ಅವರು ಶನಿವಾರ ತಮ್ಮ ಮೊದಲ ಸುತ್ತಿನ ಪಂದ್ಯಗಳಲ್ಲಿ ಸೋಲನುಭವಿಸಿದ್ದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಶ್ರೀಜಾ ಅಕುಲಾ ಅವರು ಇಟಲಿಯ ನಿಕೊಲೆ ಅರ್ಲಿಯಾ ಅವರನ್ನು ಮಣಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT